ಶಿವರಾತ್ರಿ ಜಾಗರಣೆಗೆ ‘ರಾಜಕುಮಾರ’ ವಿಶೇಷ ಪ್ರದರ್ಶನ : ಬುಕಿಂಗ್ ಓಪನ್!

ಶಿವರಾತ್ರಿ ಹಬ್ಬದ ಪ್ರಯುಕ್ತ (Mahashivaratri Special)‌ ಆ ದಿನ ರಾತ್ರಿ ಹಲವರು ಜಾಗರಣೆ ಮಾಡುತ್ತಾರೆ. ಕೆಲವರು ದೇವರ ನಾಮ ಜಪಿಸುತ್ತಾ ಜಾಗರಣೆ ಮಾಡಿದರೆ, ಇನ್ನೂ ಹಲವರು ವಿವಿಧ ಸಿನಿಮಾಗಳನ್ನು ವೀಕ್ಷಿಸುತ್ತಾ ರಾತ್ರಿ ಪೂರ್ತಿ ನಿದ್ರೆ ಇಲ್ಲದೇ ಜಾಗರಣೆ ಆಚರಿಸುತ್ತಾರೆ. ಇನ್ನು ಇತ್ತೀಚೆಗಿನ ದಿನಗಳಲ್ಲಿ ಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ಹಲವು ಸಿನಿ ರಸಿಕರು ಸಿನಿಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಆಸಕ್ತಿ ತೋರಿಸಿದ್ದಾರೆ. ಇದೇ ಶನಿವಾರ ( ಫೆಬ್ರವರಿ 18 ) ಶಿವರಾತ್ರಿ ಹಬ್ಬವನ್ನು ಆಚರಿಸಲಿದ್ದು, ಭಾನುವಾರ 12.30AM ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಇಂಡಸ್ಟ್ರಿ ಹಿಟ್ ಸಿನಿಮಾ ರಾಜಕುಮಾರ ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ಆಸಕ್ತಿಯತ್ತ ಚಿತ್ತ ನೆಟ್ಟ ಸಿನಿಮಾಗಳ ವಿತರಕರು ಹಲವು ಹಿಟ್ ಸಿನಿಮಾಗಳ ವಿಶೇಷ ಪ್ರದರ್ಶನವನ್ನು ಶಿವರಾತ್ರಿ ಪ್ರಯುಕ್ತ ಮಧ್ಯರಾತ್ರಿಯಂದು ಏರ್ಪಡಿಸಿ ಒಳ್ಳೆಯ ಕಲೆಕ್ಷನ್ ಮಾಡಲಾರಂಭಿಸಿದರು. ಅದರಲ್ಲೂ ಸ್ಟಾರ್ ನಟರ ಆಲ್ ಟೈಮ್ ಹಿಟ್ ಸಿನಿಮಾಗಳನ್ನು ಸಿನಿಮಂದಿರಗಳಲ್ಲಿ ಆಯೋಜಿಸುವ ಮೂಲಕ ಶಿವರಾತ್ರಿ ಜಾಗರಣೆಯನ್ನು ನೆಚ್ಚಿನ ನಟರ ಸಿನಿಗಳನ್ನು ಸಿನಿಮಂದಿರಗಳಲ್ಲಿ ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಇನ್ನು ತೆಲುಗಿನಲ್ಲಿ ಹೆಚ್ಚಿದ್ದ ಪ್ರವೃತ್ತಿ ಕನ್ನಡಕ್ಕೂ ಸಹ ಕಾಲಿಟ್ಟಿದೆ.

ಹೌದು, ಬೆಂಗಳೂರಿನ ಪೀಣ್ಯ ಏರಿಯಾದಲ್ಲಿರುವ ಭಾರತಿ ಸಿನಿಮಂದಿರದಲ್ಲಿ ಫೆಬ್ರವರಿ 19ರ 12.30 AM ಗೆ ರಾಜಕುಮಾರ ಸಿನಿಮಾದ ಒಂದು ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಲ್ಲಿಗೆ ಸಮೀಪದಲ್ಲಿರುವ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಶನಿವಾರ ಶಿವರಾತ್ರಿ ಹಬ್ಬದ ಆಚರಣೆಯನ್ನು ಮನೆಯಲ್ಲಿ ಮುಗಿಸಿ ಮಧ್ಯರಾತ್ರಿ ರಾಜಕುಮಾರನ ದರ್ಶನ ಪಡೆಯಬಹುದಾಗಿದೆ. ಇನ್ನು ಈ ಪ್ರದರ್ಶನದ ಅಡ್ವಾನ್ಸ್ ಬುಕಿಂಗ್ ಸಹ ಬುಕ್ ಮೈ ಶೋನಲ್ಲಿ ಓಪನ್ ಆಗಿದ್ದು, ಬಾಲ್ಕನಿ ಟಿಕೆಟ್ ದರ 130 ರೂಪಾಯಿಗಳಿದ್ದರೆ, ಸೆಕೆಂಡ್ ಕ್ಲಾಸ್ ಟಿಕೆಟ್ ದರ 100 ರೂಪಾಯಿಗಳಷ್ಟಿದೆ.

ಇನ್ನು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಮೊದಲ ಬಾರಿಗೆ 75 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಈ ಸಿನಿಮಾ ಬರೆದಿತ್ತು. ಇದಕ್ಕೂ ಮುನ್ನ 50 ಕೋಟಿ ಗಳಿಸಿದ್ದ ಇದೇ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹಾಗೂ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ 50 ಕೋಟಿ ಕಲೆಕ್ಷನ್ ಅನ್ನು ಹಿಂದಿಕ್ಕಿದ ರಾಜಕುಮಾರ ಈ ದಾಖಲೆಯನ್ನು ಬರೆದಿತ್ತು.

ಇದನ್ನೂ ಓದಿ : Darshan’s birthday : ನಟ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಗಣ್ಯರು

ಇದನ್ನೂ ಓದಿ : Actor Darshan’s birthday : ನಟ ದರ್ಶನ್‌ ಬರ್ತಡೆಗೆ “D56” ಟೈಟಲ್ ರಿವೀಲ್ : ಜಬರ್ದಸ್ತ್ ಕಥೆಗೆ ಖಡಕ್ ಟೈಟಲ್ ಫಿಕ್ಸ್

ಇದನ್ನೂ ಓದಿ : ನಟ ದರ್ಶನ್ ಮನೆ ಮುಂದೆ ಫ್ಯಾನ್ಸ್ : ಒಂದು ದಿನ ಮುನ್ನವೇ ಡಿ ಬಾಸ್‌ ಹುಟ್ಟು ಹಬ್ಬ ಸಂಭ್ರಮ!

ಇನ್ನು ಮೈಸೂರು ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲು ನೂರು ದಿನಗಳ ಪ್ರದರ್ಶನವನ್ನು ಪೂರೈಸಿದ ಸಿನಿಮಾ ಎಂಬ ದಾಖಲೆಯನ್ನು ರಾಜಕುಮಾರ ಹೊಂದಿದೆ. ಅಷ್ಟೇ ಅಲ್ಲದೇ ಮೈಸೂರಿನ ಒಟ್ಟು ನಾಲ್ಕು ಕೇಂದ್ರಗಳಲ್ಲಿ ನೂರು ದಿನಗಳನ್ನು ಪೂರೈಸಿದ ಸಿನಿಮಾ ಎಂಬ ಬೃಹತ್ ಹಾಗೂ ಎಂದೂ ಅಳಿಸಲಾಗದ ದಾಖಲೆಯನ್ನು ರಾಜಕುಮಾರ ತನ್ನ ಹೆಸರಿನಲ್ಲಿ ಹೊಂದಿದೆ. ಕುಟುಂಬ ಸಮೇತರಾಗಿ ಕುಳಿತು ನೋಡುವ ಅದ್ಭುತ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಕಥೆಯನ್ನು ಹೊಂದಿದ್ದ ಕಾರಣ ರಾಜಕುಮಾರ ಈ ಪರಿ ಯಶಸ್ಸು ಸಾಧಿಸಿದ್ದು, ಎವರ್‌ಗ್ರೀನ್ ಸಿನಿಮಾವಾಗಿ ಉಳಿದುಕೊಂಡಿದೆ.

Mahashivaratri Special: ‘Rajkumar’ special performance for Shivratri Vigil: Booking open!

Comments are closed.