ಕುಮಾರಧಾರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಜಲಸಮಾಧಿ

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಪ್ರಸಿದ್ಧ ಕುಕ್ಕೆ ಸಮೀಪದ ಕುಮಾರಧಾರಾ ನದಿಯಲ್ಲಿ ಇಳಿದಿದ್ದ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ. ಮೃತಪಟ್ಟವರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (40) ಮತ್ತು ಸುಜೀತ್ ಗೋಳಿಯಾಡಿ (26) ಎಂದು ಗುರುತಿಸಲಾಗಿದೆ.
ಸುಬ್ರಹ್ಮಣ್ಯದಲ್ಲಿರುವ ಅನುಗ್ರಹ ಎಂಟರ್​ಪ್ರೈಸಸ್​ ಎಂಬ ಹಾರ್ಡ್​ವೇರ್​ ಅಂಗಡಿಯ ಮಾಲೀಕನಾಗಿ ಹರಿಪ್ರಸಾದ್​ ಕಾರ್ಯನಿರ್ವಹಿಸುತ್ತಾ ಇದ್ದರೆ ಇದೇ ಅಂಗಡಿಯಲ್ಲಿ ಸುಜೀತ್​ ಗೋಳಿಯಾಡಿ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ.
ಇಬ್ಬರೂ ಕುಮಾರಧಾರ ನದಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿದವರು ಮೇಲೆ ಬಂದಿಲ್ಲ. ಕೂದಲೇ ಇದು ಸ್ಥಳೀಯರ ಗಮನಕ್ಕೆ ಬಂದು ಅವರ ರಕ್ಷಣೆಗೆ ಧಾವಿಸಿದರಾದರೂ ಪ್ರಯೋಜನವಾಗಲಿಲ್ಲ. ನೀರಿನಲ್ಲಿದ್ದ ಇಬ್ಬರ ಮೃತದೇಹಗಳನ್ನು ಮೇಲೆತ್ತಲಾಗಿದೆ.

ಇದನ್ನೂ ಓದಿ: ಕಿಡಿಗೇಡಿಗಳ ಕೃತ್ಯಕ್ಕೆ ಚಾರ್ಮಾಡಿ ಘಾಟಿನಲ್ಲಿ ಕಾಡ್ಗಿಚ್ಚು : ಅಪಾಯದಲ್ಲಿ ಅರಣ್ಯ ಸಂಪತ್ತು

ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories