Beauty Tips: ಬ್ಲಾಕ್​ ಟೀ ಸೇವನೆಯ ಹಿಂದೆ ಅಡಗಿದೆ ಬ್ಯೂಟಿ ಸೀಕ್ರೆಟ್​..!

Beauty Tips :ನೀವು ದೇಶದ ಯಾವುದೇ ಮೂಲೆಗೆ ಹೋದರೂ ನಿಮಗೆ ಚಹಾ ಪ್ರಿಯರಂತೂ ಸಿಕ್ಕೇ ಸಿಗುತ್ತಾರೆ. ಬೆಳಿಗ್ಗೆ ಸರಿಯಾದ ಸಮಯಕ್ಕೆ ಚಹಾ ಸಿಗದಿದ್ದರೆ, ದಿನವಿಡೀ ಆಲಸ್ಯ ಮತ್ತು ಚಡಪಡಿಕೆಯ ಭಾವನೆ ಇರುತ್ತದೆ. ಟೀ ಪ್ರಿಯರು ಹಾಲಿನ ಟೀ, ಬ್ಲಾಕ್ ಟೀ, ಗ್ರೀನ್ ಟೀ, ಮಸಾಲಾ ಟೀ ಹೀಗೆ ವಿವಿಧ ರೀತಿಯಲ್ಲಿ ಟೀ ಕುಡಿಯಲು ಇಷ್ಟಪಡುತ್ತಾರೆ. ಇದರಲ್ಲಿ ನಾವು ಬ್ಲಾಕ್​ ಟೀ ಪ್ರಯೋಜನದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ .

ಆ್ಯಂಟಿ ಬ್ಯಾಕ್ಟೀರಿಯಲ್​, ಆ್ಯಂಟಿ ಆಕ್ಸಿಡಂಟ್​, ಫಾಲಿಫಿನಾಲ್​ ನಿಮ್ಮ ಚರ್ಮದ ಬಣ್ಣವನ್ನು ತಿಳಿಗೊಳಿಸುತ್ತದೆ. ಇದು ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹ ಸಹಾಯ ಮಾಡುತ್ತದೆ. ಹಾಗಾದರೆ ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಯಾವ ರೀತಿಯ ಸೌಂದರ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ :

ಸುಕ್ಕುಗಟ್ಟುವಿಕೆಯಿಂದ ಮುಕ್ತಿ :

ಬದಲಾಗುತ್ತಿರುವ ಇಂದಿನ ಜೀವನಶೈಲಿಯಿಂದಾಗಿ ಜನರು ಸಮಯಕ್ಕಿಂತ ಮುಂಚೆಯೇ ಸುಕ್ಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಸುಕ್ಕುಗಳನ್ನು ತೊಡೆದುಹಾಕಲು, ನೀವು ನಿಯಮಿತವಾಗಿ ಕಪ್ಪು ಚಹಾವನ್ನು ಸೇವಿಸಬೇಕು. ಇದು ಹೆಚ್ಚಿನ ಪ್ರಮಾಣದ ಪಾಲಿಫಿನಾಲ್‌ಗಳನ್ನು ಹೊಂದಿದ್ದು, ಇದು ಸುಕ್ಕಿನ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಚರ್ಮದ ಸೋಂಕಿನಿಂದ ಮುಕ್ತಿ :

ಮೊಡವೆ ಹಾಗೂ ಚರ್ಮದ ಸೋಂಕು ಇತ್ತೀಚಿನದ ದಿನದ ಸಾಮಾನ್ಯವಾದ ತ್ವಚೆಯ ಸಮಸ್ಯೆಯಾಗಿದೆ. ಇದಕ್ಕಾಗಿ ನೀವು ನಿಯಮಿತವಾಗಿ ಬ್ಲಾಕ್​ ಟೀಯನ್ನು ಸೇವನೆ ಮಾಡಬೇಕು,. ಬ್ಲಾಕ್​ ಟೀಯಲ್ಲಿರುವ ಕ್ಯಾಟೆಚಿನ್​ ಎಂಬ ಅಂಶವು ಮುಖದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ.

ಮುಖದ ಕಾಂತಿ ಹೆಚ್ಚಿಸಲು ಬಳಸಿ ಈ ನೈಸರ್ಗಿಕ ಟೋನರ್​​

ಪ್ರತಿಯೊಬ್ಬ ಮಹಿಳೆಗೂ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ ದುಬಾರಿ ಸೌಂದರ್ಯವರ್ಧಕಗಳನ್ನು ಖರೀದಿ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅನೇಕ ಮಂದಿ ತ್ವಚೆಯನ್ನು ಆರೈಕೆ ಮಾಡುವ ಗೋಜಿಗೆ ಹೋಗೋದೇ ಇಲ್ಲ. ಆದರೆ ನೀವು ಇದಕ್ಕೆ ಅತಿಯಾಗಿ ಚಿಂತಿಸಬೇಕಿಲ್ಲ. ನಿಮ್ಮ ಮನೆಯಲ್ಲಿಯೇ ನೈಸರ್ಗಿಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಜೀರಿಗೆ ಸೇವನೆ ಮಾಡುವುದು ಹಾಗೂ ಅದನ್ನು ಚರ್ಮದ ಮೇಲೆ ಲೇಪನ ಮಾಡಿಕೊಳ್ಳುವುದರಿಂದ ನೀವು ಆರೋಗ್ಯವಂತ ತ್ವಚೆಯನ್ನು ಪಡೆಯಬಹುದಾಗಿದೆ.

ಹೌದು. ಜೀರಿಗೆಯನ್ನು ಬಳಸಿ ನೀವು ಮನೆಯಲ್ಲಿಯೇ ನೈಸರ್ಗಿಕವಾಗಿ ಸೌಂದರ್ಯವರ್ಧಕಗಳನ್ನು ತಯಾರಿಸಬಹುದಾಗಿದೆ.ಜೀರಿಗೆಯಲ್ಲಿ ತ್ವಚೆಯ ಆರೋಗ್ಯವನ್ನು ಹೆಚ್ಚಿಸುವಂತಹ ಸಾಮರ್ಥ್ಯವಿದೆ. ಹೀಗಾಗಿ ನೀವು ಜೀರಿಗೆಯಿಂದ ಟೋನರ್​ ತಯಾರಿಸಿಕೊಳ್ಳಬಹುದಾಗಿದೆ.

ಜೀರಿಗೆ ಟೋನರ್​ ತಯಾರಿಸುವುದು ಹೇಗೆ..?

1/2 ಕಪ್​ ಜೀರಿಗೆ ನೀರು
1/2 ಕಪ್​ ರೋಸ್​ ವಾಟರ್​
1 ವಿಟಮಿನ್​ ಇ ಮಾತ್ರೆ

ತಯಾರಿಸುವ ವಿಧಾನ :1/2 ಕಪ್​ ನೀರಿಗೆ 1 ಚಮಚ ಜೀರಿಗೆಯನ್ನು ಸೇರಿಸಿ ರಾತ್ರಿಯಿಡೀ ನೆನೆಯಲು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಈ ನೀರಿನಿಂದ ಜೀರಿಗೆಯನ್ನು ಬೇರ್ಪಡಿಸಿ. ಇದಕ್ಕೆ ನೀವು ರೋಸ್​ ವಾಟರ್​ ಹಾಗೂ ವಿಟಮಿನ್​ ಇ ಮಾತ್ರೆಯನ್ನು ಸೇರಿಸಿ ಒಂದು ಬಾಟಲಿಯಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಿ. ಇದನ್ನು ನೀವು ಪ್ರತಿನಿತ್ಯ ಮುಖ ತೊಳೆದ ಬಳಿಕ ಟೋನರ್​ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ.

ಈ ಟೋನರ್​ನಿಂದ ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದುಕೊಂಡಿದ್ದರೆ ನೀವು ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಶುದ್ಧವಾಗಿ ತೊಳೆದು ಮುಖಕ್ಕೆ ಈ ಟೋನರ್​ನ್ನು ಸ್ಪ್ರೇ ಮಾಡಿಕೊಳ್ಳಿ. ಬಳಿಕ ಬೆಳಗ್ಗೆ ಎದ್ದು ಮುಖವನ್ನು ತೊಳೆದುಕೊಳ್ಳಿ. ಕ್ರಮೇಣವಾಗಿ ನಿಮ್ಮ ಮುಖದಲ್ಲಿ ಕಾಣುವ ಕಾಂತಿ ನಿಮ್ಮನ್ನೇ ಆಶ್ಚರ್ಯಗೊಳಿಸಲಿದೆ.

ಇದನ್ನು ಓದಿ : Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

ಇದನ್ನೂ ಓದಿ : White hair Beauty Tips : ಅವಧಿಗೂ ಮುನ್ನವೇ ಕೂದಲು ಬೆಳ್ಳಗಾಗುತ್ತಿದೆಯೇ ? ಹಾಗಾದರೆ ಈ ಪದಾರ್ಥ ತಪ್ಪದೇ ಸೇವಿಸಿ

skin care tips know about the beauty benefits of black tea

Comments are closed.