ಕೊರೊನಾ ಸೋಂಕು : ರಾಜ್ಯದಲ್ಲಿ ಆರೋಗ್ಯ ವಿಮೆ ಪಾಲಿಸಿ ಮಾರಾಟ ಹೆಚ್ಚಳ

ಬೆಂಗಳೂರು: ಕೊರೊನಾ ವೈರಸ್ ಸೋಂಕು ಜನರನ್ನು ತತ್ತರಿಸಿದೆ. ರಾಜ್ಯದಲ್ಲಿ ಕೊರೋನಾ ವೈರಸ್‌ ಸೋಂಕಿನ ಬೆನ್ನಲ್ಲೇ ವಿಮೆ ಖರೀದಿಗೆ ಜನತೆ ಉತ್ಸುಕರಾಗಿದ್ದಾರೆ. ಹಣಕಾಸು ಭದ್ರತೆಯ ವಿಚಾರದಲ್ಲಿ ಆರೋಗ್ಯ ವಿಮೆಯಂಥ ಸುರಕ್ಷಾ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಜನ ಪರಿಶೀಲಿಸುತ್ತಿದ್ದಾರೆ.

ಮುಖ್ಯವಾಗಿ ಟರ್ಮ್‌ ಇನ್ಸೂರೆನ್ಸ್‌ಗಳ ಪಾಲಿಸಿಗಳ ಮಾರಾಟವು ಏಪ್ರಿಲ್‌ನಲ್ಲಿ ಶೇಕಡ 54ರಷ್ಟು ಹೆಚ್ಚಿದೆ. ಆರೋಗ್ಯ ವಿಮಾ ಪಾಲಿಸಿ ಖರೀದಿಯಲ್ಲಿ ರಾಜ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 92ರಷ್ಟು ಬೆಳವಣಿಗೆ ಕಂಡಿದ್ದು, ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯಲ್ಲಿ ಶೇಕಡ 25ರಷ್ಟು ಪ್ರಗತಿ ದಾಖಲಾಗಿದೆ ಎಂದು ಪಾಲಿಸಿ ಬಜಾರ್‌ ಡಾಟ್‌ಕಾಮ್‌ನ ಜೀವ ವಿಮಾ ನಿಗಮದ ಸಿಬಿಒ ಸಂತೋಷ್‌ ಅಗರವಾಲ್‌ ತಿಳಿಸಿದ್ದಾರೆ.

ಸರಳ ಹಾಗೂ ಕೈಗೆಟುಕುವ ವಿಮೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. 2020ನೇ ಹಣಕಾಸು ವರ್ಷದಲ್ಲಿ ಟರ್ಮ್‌ ಇನ್ಸೂರೆನ್ಸ್‌ ಮಾರುಕಟ್ಟೆ ವ್ಯಾಪಕ ಬದಲಾವಣೆಗಳನ್ನು ಕಂಡಿದೆ ಎಂದು ತಿಳಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ, 42-50 ವರ್ಷ ವಯೋಮಾನದವರು ಹೆಚ್ಚಿನ ಪ್ರಮಾಣದಲ್ಲಿ ವಿಮೆ ಖರೀದಿಸಿದ್ದಾರೆ. ಹೊಸ ವಿಮೆ ಖರೀದಿಯಲ್ಲಿ 31-40 ವಯಸ್ಸಿನವರು ಶೇಕಡ 54ರಷ್ಟು ಪಾಲು ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Comments are closed.