70 BSF ಯೋಧರಿಗೆ ಕೊರೊನಾ ಸೋಂಕು : ಬೆಂಗಳೂರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು : ಕೊರೊನಾ ಮಾಹಾಮಾರಿಗೆ ವಿಶ್ವವೇ ತತ್ತರಿಸಿದೆ. ಇನ್ನೇನು ಸೋಂಕು ಕಡಿಮೆಯಾಯ್ತು ಅನ್ನೋ ಹೊತ್ತಲೇ ಹೆಮ್ಮಾರಿಯ ಆರ್ಭಟ ಹೆಚ್ಚುತ್ತಿದ್ದು, ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ. ಇದೀಗ ಬಿಎಸ್‌ಎಫ್ ಕ್ಯಾಂಪ್‌ನ 70 ಯೋಧರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿಯಲ್ಲಿರುವ BSF ಕ್ಯಾಂಪ್‌ನಲ್ಲಿಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ ಸೋಂಕು ತಗುಲಿದೆ. ಮೊದಲು 34 ಯೋಧರಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಇಂದು ಮತ್ತೆ 36 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2 ದಿನದಲ್ಲಿ 70 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇನ್ನು 70 ಸೋಂಕಿತರ ಪೈಕಿ ಒಬ್ಬ ಯೋಧನಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Students Corona : ಶಾಲಾರಂಭದ ಬೆನ್ನಲ್ಲೇ ಬಿಗ್‌ ಶಾಕ್‌ : 73 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಕಳೆದ 11 ರಂದು ಮೇಘಾಲಯದಿಂದ ಬೆಂಗಳೂರಿನ ಬಿಎಸ್‌ಎಪ್ ಕ್ಯಾಂಪ್ಗೆ ಬಂದಿದ್ದ ಯೋಧರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ ಇಂದು 70 ಕ್ಕೆ ಏರಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಳಿಯಿರೂ ಬಿಎಸ್‌ಎಫ್ ಟ್ರೈನಿಂಗ್ ಕ್ವಾಟರ್ಸ್ ನಲ್ಲಿ ಉಳಿದುಕೊಂಡಿದ್ದ 365 ಜನರಿಗೆ ನೆನ್ನೆ ಆರ್‌ಟಿಪಿಸಿಆರ್‌ ( RTPCR ) ಟೆಸ್ಟಿಂಗ್ ನಡೆಸಲಾಗಿತ್ತು.

ಇಂದು ಬೆಳಗ್ಗೆ ಟೆಸ್ಟಿಂಗ್ ವರದಿ ಬಂದಿದ್ದು ನೆನ್ನೆ ಆಸ್ವತ್ರೆಗೆ ದಾಖಲಾಗಿದ್ದ 34 ಜನರ ಜೊತೆಗೆ ಇದೀಗ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿರೂ 36 ಜನರನ್ನ ಐಸೋಲೇಷನ್ ಗೆ ಕಳಿಸುವ ಕೆಲಸವನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡ್ತಿದ್ದಾರೆ. ಜತೆಗೆ 34 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 70 ಕ್ಕೆ ಏರಿಕೆಯಾಗಿರೂ ಕಾರಣ ಬಿಎಸ್‌ಎಫ್ ಯೋಧರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: 1 Cr Vaccination : ದೇಶದಲ್ಲಿಂದು ಬೃಹತ್‌ ಲಸಿಕಾ ಮೇಳ : ಕೊರೊನಾ ಲಸಿಕೆ ಪಡೆದ್ರು 1 ಕೋಟಿ ಜನ

ಕಾರಹಳ್ಳಿಯ ಬಿಎಸ್‌ಎಫ್‌ ಕ್ಯಾಂಪ್‌ನಲ್ಲಿ ಒಟ್ಟು 1800 ಜನ ಯೋಧರು ಮತ್ತು ಅವರ ಕುಟುಂಬಸ್ಥರಿದ್ದಾರೆ. ನಿನ್ನೆ400 ಜನರನ್ನು ದೇವನಹಳ್ಳಿಯ ಆರೋಗ್ಯ ಇಲಾಖೆ ಸಿಬ್ಬಂದಿ ಆರ್‌ಟಿಪಿಸಿಆರ್‌ ಟೆಸ್ಟ್‌ ನಡೆಸಿದ್ದಾರೆ. ಅದರಲ್ಲಿ 36 ಜನರಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇನ್ನೂ ಕ್ಯಾಂಪ್‌ ನಲ್ಲಿರುವ 1400 ಜರನ್ನು ಟೆಸ್ಟಿಂಗ್‌ಗೆ ಒಳಪಡಿಸಬೇಕಾಗಿದೆ. ಹೀಗಾಗಿ ಸೋಂಕು ಇನ್ನಷ್ಟು ಮಂದಿಗೆ ವ್ಯಾಪಿಸೋ ಆತಂಕ ಎದುರಾಗಿದೆ.

(Corona infection for 70 BSF warrior)

Comments are closed.