Math Genius Nikhil Srivastava : ಭಾರತೀಯ ಗಣಿತಜ್ಞನಿಗೆ ಒಲಿದ “ಸಿಪ್ರಿಯನ್ ಫೊಯಾಸ್ ಪ್ರಶಸ್ತಿ”

ವಾಷಿಂಗ್ಟನ್: ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡುತ್ತಿರುವ ಪ್ರಖ್ಯಾತ ಭಾರತೀಯ-ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವ (Math Genius Nikhil Srivastava), ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿಯಿಂದ (AMS) ಆಪರೇಟರ್ ಥಿಯರಿಯಲ್ಲಿನ ಉದ್ಘಾಟನಾ ಸಿಪ್ರಿಯನ್ ಫೊಯಾಸ್ ಪ್ರಶಸ್ತಿಗೆ ಜಂಟಿಯಾಗಿ ಆಯ್ಕೆಯಾಗಿದ್ದಾರೆ.

ನಿಖಿಲ್ ಶ್ರೀವಾಸ್ತವ ಜೊತೆಗೆ, ಆಡಮ್ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮನ್ ಇಬ್ಬರು ಕೂಡ ಪ್ರಶಸ್ತಿ ಪುರಸ್ಕೃತರು. ಇವರಲ್ಲಿ  ಆಡಮ್ ಮಾರ್ಕಸ್ ಸ್ವಿಟ್ಜರ್ಲೆಂಡ್‌ನ ಎಕೋಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲೌಸಾನ್ನೆಯಲ್ಲಿ ಹಾಗೂ ಡೇನಿಯಲ್ ಸ್ಪೀಲ್‌ಮ್ಯಾನ್ ಕಂಪ್ಯೂಟರ್ ಸೈನ್ಸ್‌ನ  ಅಂಕಿಅಂಶ ಮತ್ತು ಡೇಟಾ ವಿಜ್ಞಾನದ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಪ್ರಶಸ್ತಿಯು ಇವರ ಕ್ಯಾಡಿಸನ್ ಸಿಂಗರ್ ಸಮಸ್ಯೆಯನ್ನುಅರ್ಥಮಾಡಿಕೊಳ್ಳಲು  ಪರಿಚಯಿಸಿದ ವಿಧಾನಗಳನ್ನು ಮತ್ತು ಅಭಿವೃದ್ಧಿಪಡಿಸಿದ ಅವರ ಅತ್ಯಂತ ಕ್ಲಿಷ್ಟ ಕೆಲಸಕ್ಕಾಗಿ ನೀಡಲಾಗಿದೆ. ಈ ಮೂವರೂ ಪರಿಚಯಿಸಿದ  ವಿಧಾನವು “ಪುನರಾವರ್ತಿತ ಸ್ಪಾರ್ಸಿಫಿಕೇಶನ್ ವಿಧಾನ “(ಬ್ಯಾಟ್ಸನ್‌ನ ಸಹಯೋಗದೊಂದಿಗೆ) ಮತ್ತು “ಬಹುಪದೋಕ್ತಿಗಳನ್ನು ಇಂಟರ್ಲೇಸಿಂಗ್ ಮಾಡುವ ವಿಧಾನ” ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಒಟ್ಟಾಗಿ ಹೇಳಿದರೆ, ಈ ಮೂವರ ಆಲೋಚನೆಗಳು ಅನೇಕ ಅನ್ವಯಗಳೊಂದಿಗೆ ಪ್ರಬಲ ಟೂಲ್‌ಕಿಟ್ ಅನ್ನು ಒದಗಿಸಿವೆ. ಪ್ರಶಸ್ತಿ ಪುರಸ್ಕೃತ ಮೂವರು ತಮ್ಮ ಜಂಟಿ ಹೇಳಿಕೆಯಲ್ಲಿ “ಕ್ಯಾಡಿಸನ್-ಸಿಂಗರ್ ಸಮಸ್ಯೆಯ ಪರಿಹಾರಕ್ಕೆ ಕೊಡುಗೆ ನೀಡಿದ ಅನೇಕ ಜನರ ಪರವಾಗಿ ಅದನ್ನು ಸ್ವೀಕರಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.

ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಮೂವರೂ,” ನಾವು ಬರೆದ ಥಿಯರಿಯು ಅದ್ಭುತ ಕಥೆಯ ಅಂತಿಮ ಅಧ್ಯಾಯವಾಗಿದೆ, ಭವಿಷ್ಯದಲ್ಲಿ ಕಷ್ಟಕರ ಸಮಸ್ಯೆಗಳಿಗೆ ಇದೇ ರೀತಿಯ ಪರಿಹಾರಗಳನ್ನು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ, ”ಎಂದು ಹೇಳಿದ್ದಾರೆ.

ಇದನ್ನೂ ಓದಿ: Anju Bobby George : ವಿಶ್ವ ಅಥ್ಲೆಟಿಕ್ಸ್​​ನಿಂದ ‘ವರ್ಷದ ಮಹಿಳೆ’ ಪ್ರಶಸ್ತಿ ಪಡೆದ ಅಂಜು ಬಾಬಿ ಜಾರ್ಜ್​

ಇದನ್ನೂ ಓದಿ : ಭಾರತೀಯ ನೌಕಾ ಸೇನಾ ದಿನಕ್ಕೆ 50 ವರ್ಷದ ಸಂಭ್ರಮ: ಇಲ್ಲಿದೆ ನೋಡಿ ನೌಕಾ ದಿನದ ಇತಿಹಾಸ ಹಾಗೂ ಮಹತ್ವ

(Indian American Math Genius Nikhil Srivastava Helps Solve Famous 1959 Problem)

Comments are closed.