ಸಿನಿಮಾಗಳ ಮೇಲೆ ಮತ್ತೆ ಕರೋನಾತಂಕ…! ಇಂದಿನಿಂದ ಮತ್ತೆ ಥಿಯೇಟರ್ ನಲ್ಲಿ 50% ಮಾತ್ರ ಆಸನ ವ್ಯವಸ್ಥೆ…!!

ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನಾ ಎರಡನೆ ಅಲೆ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮತ್ತೆ ಥೀಯೇಟರ್ ಗಳ ಮೇಲಿನ ನಿರ್ಬಂಧ ಮುಂದುವರೆಸಿದೆ. ಏಪ್ರಿಲ್ 8 ರಿಂದ ಆಯ್ದ ಜಿಲ್ಲೆಗಳಲ್ಲಿ  ಮತ್ತೆ ಥಿಯೇಟರ್ ನಲ್ಲಿ ಶೇಕಡಾ 50 ರಷ್ಟು ಮಾತ್ರ ಪ್ರವೇಶಾವಕಾಶ ಸಿಗಲಿದೆ.

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ ಥಿಯೇಟರ್ ಗಳಲ್ಲಿ ಶೇಕಡಾ 50 ರಷ್ಟು ಆಸನಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಯುವರತ್ನ ಸಿನಿಮಾ ರಿಲೀಸ್ ಆದ ಎರಡೇ ದಿನದಲ್ಲಿ ಹೊರಬಿದ್ದ ಈ ಆದೇಶದಿಂದ ಕಂಗಾಲಾದ ನಟ ಪುನೀತ್ ರಾಜಕುಮಾರ್ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ನಿರ್ಬಂಧವನ್ನು ಒಂದು ವಾರಗಳ ಕಾಲ ಸಡಿಲಿಸುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಪುನೀತ್ ಮನವಿಗೆ ಸ್ಪಂದಿಸಿದ ಸರ್ಕಾರ ಏಪ್ರಿಲ್ 7 ರವರೆಗೆ ಥಿಯೇಟರ್ ಗಳಲ್ಲಿ 100ಕ್ಕೆ 100 ರಷ್ಟು ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಒಂದು ವಾರದ ಬಳಿಕ ಅಂದ್ರೆ ಇಂದಿನಿಂದ ಮತ್ತೆ ರಾಜ್ಯದ 8 ಜಿಲ್ಲೆಗಳಲ್ಲಿ ಥೀಯೇಟರ್ ಗಳ ಮೇಲೆ ನಿರ್ಬಂಧ ಹೇರಿರುವ ಸರ್ಕಾರ ಪ್ರವೇಶಾವಕಾಶವನ್ನು ಶೇಕಡಾ 50 ಕ್ಕೆ ಇಳಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು,ಧಾರವಾಡ, ದಕ್ಷಿಣಕನ್ನಡ,ಉಡುಪಿ,ಕಲಬುರಗಿ,ಬೀದರ್ ನಲ್ಲಿ ಈ ನಿಯಮ ಜಾರಿಯಲ್ಲಿದ್ದುಮ ಥೀಯೇಟರ್ ಗಳನ್ನು ಶೇಕಡಾ ರಷ್ಟು ಸೀಟುಗಳ ಜೊತೆ ಮಾತ್ರ ತೆರೆಯಬಹುದಾಗಿದೆ. ಅಲ್ಲದೇ ಮಾಸ್ಕ್ ಹಾಗೂ ಸ್ಯಾನಿಟೈಶರ್ ಬಳಕೆ ಕಡ್ಡಾಯವಾಗಿದೆ. ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರೇ ಕ್ರಮಜರುಗಿಸುವುದಾಗಿ ಸರ್ಕಾರ ಎಚ್ಚರಿಸಿದೆ.

ಬೀದರ್,ಕಲಬುರಗಿ,ಉಡುಪಿ ,ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಬೆಂಗಳೂರಿನಲ್ಲಿ ಏಪ್ರಿಲ್ 20 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Comments are closed.