ರಾಜ್ಯದಲ್ಲಿ ಲಕ್ಷ ದಾಟಿದ ಕೊರೊನಾ ಸೋಂಕು : ಇಂದು 5,324 ಮಂದಿಗೆ ಕೊರೊನಾ, 75 ಮಂದಿ ಸಾವು

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ರೌದ್ರನರ್ತನ ಮೆರೆಯುತ್ತಿದೆ. ರಾಜ್ಯದಲ್ಲಿಂದು 5,324 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ ಒಂದು ಲಕ್ಷ ದಾಟಿದ್ದು, ಸಾವಿನ ಸಂಖ್ಯೆಯಲ್ಲಿಯೂ 1953ಕ್ಕೆ ಏರಿಕೆಯನ್ನು ಕಂಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕಿ ಆರ್ಭಟ ಹೆಚ್ಚುತ್ತಿದ್ದು, ಬೆಂಗಳೂರು ನಗರದಲ್ಲಿಂದು 1470 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಂದು ಕೂಡ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 50 ಸಾವಿರದ ಅಂಚಿಗೆ ಬಂದು ನಿಂತಿದೆ.

ಬಳ್ಳಾರಿಗೆ ಕೊರೊನಾ ವೈರಸ್ ಸೋಂಕು ಭರ್ಜರಿ ಶಾಕ್ ಕೊಟ್ಟಿದ್ದು, ಬರೋಬ್ಬರಿ 840 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಕಲಬುರ್ಗಿ ಜಿಲ್ಲೆಯಲ್ಲಿಯೂ ಕೊರೊನಾ ಆರ್ಭಟಿಸಿದ್ದು, ಜಿಲ್ಲೆಯಲ್ಲಿ 631 ಮಂದಿಗೆ ಸೊಂಕು ದೃಢಪಟ್ಟಿದೆ. ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 296 ಮಂದಿಗೆ ಸೋಂಕು ಪತ್ತೆಯಾಗಿದೆ.

ಕರಾವಳಿಯಲ್ಲಿಯೂ ಕೊರೊನಾ ಸೋಂಕು ಆತಂಕವನ್ನು ಮೂಡಿಸುತ್ತಿದೆ. ಇಷ್ಟು ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಭಟಿಸುತ್ತಿದ್ದ ಕೊರೊನಾ ಸೋಂಕು ಇದೀಗ ಉಡುಪಿ ಜಿಲ್ಲೆಯಲ್ಲಿಯೂ ಆರ್ಭಟಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿಂದು ಬರೋಬ್ಬರಿ 225 ಮಂದಿಗೆ ಸೋಂಕು ಕಾಣಿಸಿಕೊಂಡಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 199 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ.

ಉಳಿದಂತೆ ಧಾರವಾಡ ದಲ್ಲಿ 193, ಬೆಳಗಾವಿಯಲ್ಲಿ 155, ಕೋಲಾರದಲ್ಲಿ 142, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 138, ರಾಯಚೂರಿನಲ್ಲಿ 120, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 119, ವಿಜಯಪುರ ಮತ್ತು ದಾವಣಗೆರೆ 110, ತುಮಕೂರು 89, ಶಿವಮೊಗ್ಗ 76, ಹಾಸನ 66, ಯಾದಗಿರಿ 64, ಗದಗ 63, ರಾಮನಗರ 62, ಮಂಡ್ಯ 56, ಚಿತ್ರದುರ್ಗ 51, ಬೀದರ್ 42, ಚಿಕ್ಕಬಳ್ಳಾಪುರ 40, ಉತ್ತರ ಕನ್ನಡ 32, ಕೊಪ್ಪಳ 28, ಬಾಗಲಕೋಟೆ ಮತ್ತು ಹಾವೇರಿ 27, ಚಿಕ್ಕಮಗಳೂರು 26, ಚಾಮರಾಜನಗರ 16 ಮತ್ತು ಕೊಡಗು 10 ಸೇರಿದಂತೆ ಒಟ್ಟು 5,324 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,01465ಕ್ಕೆ ಏರಿಕೆಯಾಗಿದ್ದು, 37,685 ಮಂದಿ ಡಿಸ್ಚಾರ್ಜ್ ಆಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 61,819ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 75 ಮಂದಿಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1953ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.