Biosphere Reserves : ಜೀವಿ ರಕ್ಷಣೆಗೆ ಜೈವಿಕ ಮೀಸಲು ಪ್ರದೇಶಗಳು

ಜೀವಗೋಳ ಮೀಸಲು, ನೈಸರ್ಗಿಕ ಆವಾಸ ಸ್ಥಾನದ ಒಂದು ವಿಶಿಷ್ಟವಾದ ರಾಷ್ಟ್ರೀಯ ಉದ್ಯಾನವನ ಅಥವಾ ಪ್ರಾಣಿಗಳ ಅಭಯಾರಣ್ಯಕ್ಕಿಂತ ದೊಡ್ಡ ಪ್ರದೇಶಗಳನ್ನು ಮೀಸಲಿರಿಸಿದ್ದಾಗಿದೆ. ಇಲ್ಲಿ ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ರಾಷ್ಟ್ರೀಯ ಉದ್ಯಾನವನಗಳು ಅಥವಾ ಮೀಸಲು ಪ್ರದೇಶಗಳನ್ನು ಒಳಗೊಂಡಿರುತ್ತದೆ. ಇದು ಪ್ರಾಣಿ ಮತ್ತು ಸಸ್ಯ ಸಂರಕ್ಷಿತ ಪ್ರದೇಶ ಮಾತ್ರವಲ್ಲದೇ, ಈ ಪ್ರದೇಶಗಳಲ್ಲಿ ವಾಸಿಸುವ ಮಾನವ ಸಮುದಾಯಗಳಿಗೆ ಮತ್ತು ಅವರ ಜೀವನ ವಿಧಾನಗಳಿಗೆ ರಕ್ಷಣೆ ನೀಡಲಾಗುತ್ತದೆ. (Biosphere Reserves)

ಜೈವಿಕ ಮೀಸಲು ಪ್ರದೇಶ ಎಂಬವು UNESCO ದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ ಸ್ಥಳವಾಗಿವೆ. ಇವು ಭೂ ಪ್ರದೇಶ ಅಥವಾ ಸಮುದ್ರ ಪ್ರದೇಶ ಅಥವಾ ಅವೆರಡನ್ನು ಒಳಗೊಂಡಂತ ಪ್ರದೇಶವಾಗಿರಬಹುದು. ದೇಶದಲ್ಲಿ ಒಟ್ಟು೧೮ ಜೈವಿಕ ಮೀಸಲು ಪ್ರದೇಶಗಳಿವೆ. ನಮ್ಮ ರಾಜ್ಯದ ಬಂಡೀಪುರ ಹಾಗೂ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶಗಳು ನೀಲಗಿರಿ ಜೈವಿಕ ಮೀಸಲು ಪ್ರದೇಶದ ವ್ಯಾಪ್ತಿಗೆ ಒಳಪಡುತ್ತವೆ. ಈ ನೀಲಗಿರಿ ಜೈವಿಕ ಮೀಸಲು ಪ್ರದೇಶ ನಮ್ಮ ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಅರಣ್ಯ ಹಾಗೂ ಕೇರಳದ ವೈನಾಡು ವನ್ಯಜೀವಿಧಾಮದ ವ್ಯಾಪ್ತಿಯನ್ನು ಸಹ ಒಳಗೊಂಡಿದ್ದು ಮೂರು ರಾಜ್ಯಗಳ ಹುಲಿ, ಆನೆಯಂತಹ ದೊಡ್ಡ ಸಸ್ತನಿಗಳ ಪ್ರಮುಖ ಆವಾಸಸ್ಥಾನವನ್ನು ಒಳಗೊಂಡ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣವಾಗಿದೆ.

ಈ ಯೋಜನೆಯು ಜೈವಿಕ ಪರಂಪರೆಯ ಅಭಿವೃದ್ಧಿ ಮಾಡುವ ಮತ್ತು ವಿನಾಶದಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ. ೧೯೭೯ ರಿಂದ ವಿಶ್ವ ಸಂಸ್ಥೆಯ ಅನುಮತಿಯೊಂದಿಗೆ ಜೀವಗೋಳ ಮೀಸಲುಗಳ ಅಂತರರಾಷ್ಟ್ರೀಯ ಜಾಲವು ಅಭಿವೃದ್ಧಿಗೊಂಡಿದೆ. ವಿಶ್ವ ಸಂಸ್ಥೆಯ ಪ್ರತೀ ಮಾರ್ಗಸೂಚಿಗಳ ಅಡಿಯಲ್ಲಿ ತಾಯ್ನಾಡಿನಲ್ಲಿ ರಾಷ್ಟ್ರೀಯ ಜೀವಗೋಳ ಪ್ರಸ್ತಾಪಿಸಲಾಗಿದೆ, ಪರಿಶೀಲಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ. ವಿಶ್ವ ಸಂಸ್ಥೆಯ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಯು ಮನುಷ್ಯ ಮತ್ತು ಜೀವಗೋಳ ಕಾರ್ಯಕ್ರಮ ಜೀವ ಸಂಪನ್ಮೂಲಗಳ ಪ್ರದೇಶಗಳನ್ನು ಸಂರಕ್ಷಿಸಲು ವಿಶ್ವದಾದ್ಯಂತ ಪ್ರಯತ್ನವನ್ನು ಮಾಡಬೇಕೆಂದು ಪ್ರಸ್ತಾಪಿಸಿದಾಗ ಜೀವಗೋಳದ ಮೀಸಲು ಕಲ್ಪನೆಯು ೧೯೭೯ರಲ್ಲಿ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯಿತು. ಇದರಲ್ಲಿ ಗಣಿಗಾರಿಕೆ, ನಗರೀಕರಣ ಮತ್ತು ಇತರೆ ಪರಿಸರ ವಿನಾಶಕಾರಿ ಮಾನವ ಚಟುವಟಿಕೆಗಳೂ ಒಳಗೊಂಡಂತೆ ಅವುಗಳನ್ನು ತಡೆಗಟ್ಟುವ ಕಾರ್ಯವನ್ನು ಮಾಡುತ್ತದೆ.

ಇದು ೧೯೭೦ ಮತ್ತು ೧೯೮೦ ರದಶಕದಲ್ಲಿ ಪ್ರತ್ಯೇಕ ಜಾತಿಗಳ ಉಳಿವಿನ ಬಗ್ಗೆ ಹೆಚ್ಚಿದ ಕಾಳಜಿಯು ಅಳಿವಿನಂಚಿನಲ್ಲಿರುವ ಪ್ರಭೇದಗಳ ಪ್ರತ್ಯೇಕ ಸಂರಕ್ಷಣೆಗೆ ಸಾಧ್ಯವಾಗದಿದ್ದರೂ ಗುರುತಿಸುವಿಕೆಗೆ ಕಾರಣವಾಯಿತು. ಇದರಿಂದ ಸಂಪೂರ್ಣ ಪರಿಸ್ ವ್ಯವಸ್ಥೆಯಲ್ಲಿ ಪರಸ್ಪರ ಅವಲಂಬಿತ ಪ್ರಾಣಿಗಳು ಮತ್ತು ಸಸ್ಯಗಳ ವ್ಯಾಪಕ ಸಮುದಾಯಗಳು ಮತ್ತು ಅಳಿವಿನ ಅಂಚಿನಲ್ಲಿರುವ ಜೀವ ಜಾತಿಗಳು ಸಂರಕ್ಷಣೆಗೆ ಮುನ್ನುಡಿ ಬರೆಯಿತು.

ಜೀವಗೋಳ ಮೀಸಲು ಯೋಜನೆಗೆ ಕೆಲವು ಕಷ್ಟಕರ ಸಮಸ್ಯೆಗಳು ಸುತ್ತುವರೆದಿವೆ. ಜೈವಿಕ ಪ್ರಾಮಿಖ್ಯತೆಯ ಕಾರಣಗಳಿಗಾಗಿ ಅಥವಾ ಆರ್ಥಿಕ ಮತ್ತು ರಾಜಕೀಯ ಅನುಕೂಲಗಳಿಗಾಗಿ ಆಯ್ಕೆ ಮಾಡಲಾಗಿದೆಯೇ ಎಂಬುದು ಉದ್ಭವಿಸುವ ಒಂದು ಪ್ರಶ್ನೆ. ಅನೇಕ ಸಂದರ್ಭಗಳಲ್ಲಿ ರಾಷ್ಟ್ರೀಯ ಜೀವಗೋಳ ಮೀಸಲು ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ನಿವಾಸಿಗಳು ಇನ್ನೂ ಸಂಪೂರ್ಣವಾಗಿ ಮನವರಿಕೆ ಮಾಡಿಲ್ಲ. ಇದು ಕೆಲವು ಕಾರಣ, ನಿರ್ವಹಣೆ ಮತ್ತು ಗುರಿಗಳೊಂದಿಗೆ ಕೂಡಿಕೊಳ್ಳುತ್ತವೆ. ಇದರ ಸಿದ್ಧಾಂತದಲ್ಲಿ ಸಮರ್ಥನೀಯ ಅಭಿವೃದ್ಧಿ ವಿಧಾನಗಳು ಮತ್ತು ಶಿಕ್ಷಣವು ಸಂವಹನವನ್ನು ಉತ್ತೇಜಿಸಲು ಮುಂದುವರೆಯುತ್ತದೆ. ಆದರೆ ಇದು ಅಭಿವೃದ್ಧಿಗೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು. ಮೀಸಲು ವ್ಯವಸ್ಥಾಪಕಗಳಲ್ಲಿಯೇ ಮಾನವ ಹಸ್ತಕ್ಷೇಪ ಎಷ್ಟು ಸೂಕ್ತ ಮತ್ತು ಸ್ವೀಕಾರಾರ್ಹ ಎಂಬುದರ ಕುರಿತಾದ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಈ ಎಲ್ಲಾ ವ್ಯವಸ್ಥಾಪನಾ ಮತ್ತು ಸೈದ್ಧಾಂತಿಕ ಸಮಸ್ಯೆಗಳ ಹೊರತಾಗಿಯೂ ಜೀವಗೋಳ ನಿಕ್ಷೇಪದ ಹಿಂದಿನ ಕಲ್ಪನೆಯು ಮಾನ್ಯವಾಗಿದೆ. ಅಲ್ಲದೇ ಜೈವಿಕ ಮತ್ತು ಸಾಮಾಜಿಕ ಎರಡೂ ಜೀವಗೋಳದ ಒಳಗೊಳ್ಳುವಿಕೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ: Bamboo Shoots: ವರ್ಷಕ್ಕೊಮ್ಮೆಯಾದರೂ ತಿನ್ನಿ ಕಳಲೆ

ಇದನ್ನೂ ಓದಿ: Menstruation Food Guide: ಋತುಚಕ್ರದ ಸಮಯದಲ್ಲಿ ಪ್ರತ್ಯೇಕ ಆಹಾರ ಸೇವನೆ ಅತ್ಯಗತ್ಯ; ಇಲ್ಲಿದೆ ಸಂಪೂರ್ಣ ಮಾಹಿತಿ

(Biosphere Reserves Zones and their Importance)

Comments are closed.