ನಿಮಗೆ ಲಟಿಕೆ ತೆಗೆಯೋ ಅಭ್ಯಾಸವಿದ್ರೆ ..? ಹಾಗಾದ್ರೆ ಇಂದೇ ಬಿಟ್ಟು ಬಿಡಿ !

0
  • – ರಕ್ಷಾ ಬಡಾಮನೆ

ನಮ್ಮ ಜೀವನ ಶೈಲಿ ಕೆಲವು ಬಾರಿ ನಮ್ಮ ಜೀವಕ್ಕೆ ಕುತ್ತು ತರುತ್ತೇ ಅನ್ನೋದು ನಮಗೆ ಗೊತ್ತೇ ಆಗೋದಿಲ್ಲ. ಲಟಿಕೆ (ನೆಟ್ಟಿಗೆ) ತೆಗೆಯೋ ಅಭ್ಯಾಸ ಬಹುತೇಕರಲ್ಲಿ ಸರ್ವೇ ಸಾಮಾನ್ಯ.

ಕೈ ಕಾಲುಗಳ ಲಟಿಕೆ ತೆಗೆದು ನಿರಾಳರಾಗಿದ್ದೇವೆ ಅಂತಾ ಬಾವಿಸಿಕೊಳ್ಳುವವರೇ ಹೆಚ್ಚು. ಆದರೆ ಲಟಿಕೆ ತೆಗೆಯೋ ಅಭ್ಯಾಸ ನಮ್ಮ ಜೀವಕ್ಕೆ ಕುತ್ತು ತರುತ್ತೇ ಅನ್ನೋದು ನಿಮಗೆ ಗೊತ್ತಾ ?

ಹೌದು, ಹಿಂದೆಲ್ಲಾ ಲಟಿಕೆ ತೆಗೆದ್ರೆ ಅಪಶಕುನ ಅಂತಾ ಹಿರಿಯರು ಬೈಯುತ್ತಿದ್ರು. ಆದರೆ ಹಿರಿಯರು ಹೇಳಿತ್ತಿದ್ದ ಅಪಶಕುನದ ಕಥೆಯಿಂದ ವೈಜ್ಞಾನಿಕ ಅಂಶವೂ ಇದೆ. ನಿಮಗೇನಾದ್ರೂ ಲಟಿಕೆ ತೆಗೆಯೋ ಅಭ್ಯಾಸವಿದ್ರೆ ಇಂದೇ ಬಿಟ್ಟು ಬಿಡಿ.

ಸಾಮಾನ್ಯವಾಗಿ ಮೂಳೆಗಳ ಮಧ್ಯೆ ಜಾಯಿಂಟ್ ಇರುತ್ತೆ. ಈ ಜಾಯಿಂಟ್ಸ್ ಮಧ್ಯೆ ಇರೋ ಖಾಲಿ ಜಾಗದಲ್ಲಿ ಸೈನೋವೈಲ್ ಫ್ಲ್ಯೂಡ್ ಎಂಬ ಲಿಕ್ವಿಡ್ ತುಂಬಿರುತ್ತದೆ. ಈ ಲಿಕ್ವೆಡ್ ಮೂಳೆಗಳ ಚಲನೆಯ ಜೊತೆಗೆ ಮೂಳೆಗಳು ಘರ್ಷಣೆಯಾಗದಂತೆ ತಡೆಯಲು ಸಹಕಾರಿಯಾಗಿದೆ.

ವಾಹನಗಳಿಗೆ ಗ್ರೀಸ್, ಆಯಿಲ್ ಬಳಕೆ ಮಾಡುವಂತೆ ನಮ್ಮ ದೇಹದ ಚಲನೆಗೆ ಸೈನೋವೈಲ್ ಫ್ಲ್ಯೂಡ್ ತುಂಬಾನೆ ಇಂಪಾರ್ಟೆಂಟ್.

ವಾಹನಗಳಲ್ಲಿ ಗ್ರೀಸ್ ಕೆಲಸ ಮಾಡುವಂತೆ ನಮ್ಮ ದೇಹದಲ್ಲಿ ಮೂಳೆಗಳ ನಡುವೆ ಈ ಸೈನೋವೈಲ್ ಫ್ಲ್ಯೂಡ್ ಅನ್ನೋ ಲಿಕ್ವಿಡ್ ಕೆಲಸ ಮಾಡುತ್ತದೆ. ಮೂಳೆಗಳು ಒಂದಕ್ಕೊಂದು ತಾಗಿ ಘರ್ಷಣೆ ಉಂಟಾಗದಂತೆ ತಡೆಯೋ ಕಾರ್ಯವನ್ನು ಈ ಲಿಕ್ವಿಡ್ ನಿರ್ವಹಿಸುತ್ತದೆ.

ಆದರೆ ಪದೇ ಪದೇ ಲಟಿಕೆ ತೆಗೆಯುತ್ತಾ ಇರೋದ್ರಿಂದ ಮೂಳೆಗಳ ಸಂಧಿಯಲ್ಲಿರುವ ಸೈನೋವೈಲ್ ಫ್ಲ್ಯೂಡ್ ನಲ್ಲಿ ಕಾರ್ಬನ್ ಡೈಆಕ್ಸೈಡ್ ಸಂಗ್ರಹವಾಗಿರುತ್ತದೆ. ಕಾರ್ಬನ್ ಡೈಆಕ್ಸೈಡ್ ಗುಳ್ಳೆಯಂತಿರುತ್ತದೆ. ಲಟಿಕೆ ತೆಗೆದಾಗ ಈ ಗುಳ್ಳೆಗಳು ಒಡೆದು ಹೋಗುತ್ತದೆ.

ಹೀಗೆ ಒಡೆದ ಗುಳ್ಳೆಗಳು ಮತ್ತೆ ಸಂಗ್ರಹವಾಗಲು ಸುಮಾರು 15 ರಿಂದ 20 ನಿಮಿಷ ಬೇಕಾಗುತ್ತದೆ. ಪದೇ ಪದೇ ಲಟಿಕೆ ತೆಗೆಯೋ ಅಭ್ಯಾಸವಿದ್ದವರ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳೋ ಸಾಧ್ಯತೆಯಿರುತ್ತದೆ. ಮಾತ್ರವಲ್ಲ ಲಟಿಕೆ ತೆಗೆಯುವುದು ಮೂಳೆ ಸವೆತಕ್ಕೂ ಕಾರಣವಾಗೋ ಸಾಧ್ಯತೆಯಿದೆ. ಜೀವಕ್ಕೆ ಕುತ್ತು ತರೋ ಮುನ್ನ ಲಟಿಕೆ ಅಭ್ಯಾಸ ಬಿಡುವುದು ಬಹಳ ಒಳಿತು.

Leave A Reply

Your email address will not be published.