ಕೊರೊನಾ‌ ನಿಯಮ‌ ಉಲ್ಲಂಘನೆ : ದಂಡ‌ಕಟ್ಟಿದ ಮದು‌ಮಗಳು

ಹಾಸನ : ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮದುಮಗಳು  ದಂಡ ಪಾವತಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ‌ನಡೆದಿದೆ.

ಮದುವೆ ಮುಗಿಸಿ ಹೊರಡುವ ವೇಳೆಯಲ್ಲಿ ಮದುಮಗಳು ಮಾಸ್ಕ್ ಧರಿಸಿರಲಿಲ್ಲ. ಈ ವೇಳೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರೇಣುಕುಮಾರ್ ಅವರು ವಧುವಿಗೆ 100 ರೂಪಾಯಿ ದಂಡ ವಿಧಿಸಿದ್ದಾರೆ.

ಕೋವಿಡ್ ಸೋಂಕು‌ ಹೆಚ್ಚುತ್ತಿರುವ ಹಿನ್ಮೆಲೆಯಲ್ಲಿ ರಾಜ್ಯ ಸರಕಾರ ವಿವಾಹ ಸಮಾರಂಭಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮದುವೆಯಲ್ಲಿ 50 ಜನರಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸ ಲಾಗಿದೆ.

Comments are closed.