ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.27 ಲಕ್ಷ ಕೋವಿಡ್​ ಪ್ರಕರಣ ವರದಿ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,27,952 ಹೊಸ ದೈನಂದಿನ ಕೋವಿಡ್​ ಪ್ರಕರಣಗಳು (new Covid cases) ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.ಗುರುವಾರಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ದೈನಂದಿನ ಕೋವಿಡ್ ಸಂಖ್ಯೆಯಲ್ಲಿ 7.98 ಪ್ರತಿಶತ ಇಳಿಕೆ ಕಂಡಿದೆ ಕಂಡಿದೆ . ವಾರದ ಪಾಸಿಟಿವಿಟಿ ದರವು 11.21 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.


ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,059 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,01,114ಕ್ಕೆ ತಲುಪಿದೆ. 2020ರ ಮಾರ್ಚ್​ ತಿಂಗಳಲ್ಲಿ ದೇಶದಲ್ಲಿ ಮೊಟ್ಟ ಮೊದಲ ಕೋವಿಡ್​ ಸಾವು ಸಂಭವಿಸಿತ್ತು. ಮೃತಪಟ್ಟ 1059 ಮಂದಿಯಲ್ಲಿ ಕೇರಳದ 595 ಮಂದಿ ಹಾಗೂ ಮಹಾರಾಷ್ಟ್ರದ 81 ಮಂದಿ ಸೇರಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,30,814 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 4,02,47,902 ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದು ರಿಕವರಿ ದರ 95.39 ಪ್ರತಿಶತವಾಗಿದೆ.ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯು 13,31,648 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ದೇಶದಲ್ಲಿ ಇದುವರೆಗೆ 168.98 ಕೋಟಿ ಕೊರೊನಾ ಡೋಸ್​ಗಳನ್ನು ನೀಡಲಾಗಿದೆ ಎಂದು ಐಸಿಎಂಆರ್​ ಅಧಿಕೃತ ಮಾಹಿತಿಯನ್ನು ನೀಡಿದೆ.

ಇದನ್ನು ಓದಿ : ಕೊರೊನಾ ವಿರುದ್ಧದ ಹೋರಾಟದಲ್ಲಿ 3ನೇ ಡೋಸ್​ ಲಸಿಕೆಯ ಮಹತ್ವ ತಿಳಿಸಿದ ಹೊಸ ಅಧ್ಯಯನ

ಇದನ್ನೂ ಓದಿ : ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗೌತಮ್​ ಅದಾನಿ

India reports 1,27,952 new Covid cases; positivity rate down to 7.9%

Comments are closed.