Karnataka Lockdown Again : ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಭೂತ : ಸರ್ಕಾರದ ಮುಂದಿರೋ ಆಯ್ಕೆಗಳೇನು?!

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಒಮೈಕ್ರಾನ್ ಸ್ಪೋಟಗೊಂಡಿದೆ. ಮತ್ತೆ ಐವರಿಗೆ ಓಮೈಕ್ರಾನ್ ಸೋಂಕು ತಗುಲಿದ್ದು, ಅಲ್ಲಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ. ಈ ವಿಚಾರವನ್ನು ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಜೊತೆ ಓಮೈಕ್ರಾನ್ ಆತಂಕ ಕೂಡ ಎದುರಾಗಿದ್ದು ರಾಜ್ಯ ಸರ್ಕಾರ ಲಾಕ್ ಡೌನ್ ( Karnataka Lockdown Again) ಮೊರೆ ಹೋಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಕೊರೋನಾ ಮೂರನೇ ಅಲೆ ಭಯದಲ್ಲಿದ್ದ ರಾಜ್ಯಕ್ಕೆ ಈಗ ಓಮೈಕ್ರಾನ್ ಭೀತಿ ಎದುರಾಗಿದೆ. ದೇಶದ ಮೊದಲ ಓಮೈಕ್ರಾನ್ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ದಾಖಲಾಗುವ ಮೂಲಕ ಆರಂಭಗೊಂಡಿದ್ದ ಆತಂಕ ಹೆಚ್ಚುತ್ತಲೇ ಇದ್ದು ಸದ್ಯ ಓಮೈಕ್ರಾನ್ ಸೋಂಕಿತರ ಸಂಖ್ಯೆ 19 ಕ್ಕೆ ತಲುಪಿದೆ. ಹೈರಿಸ್ಕ್ ದೇಶಗಳು ಹಾಗೂ ದೆಹಲಿ ಬೆಂಗಳೂರಿಗೆ ಕಂಟಕವಾಗಿ‌ ಪರಿಣಮಿಸಿದ್ದು ವಿದೇಶದಿಂದ ಬಂದವರು ಹಾಗೂ ದೆಹಲಿಯಿಂದ ಆಗಮಿಸಿದವರಲ್ಲಿ ಸೋಂಕು ಕಂಡುಬರುತ್ತಿದೆ. ಹೀಗಾಗಿ ಹೈರಿಸ್ಕ್ ದೇಶದವರ ಮೇಲೆ ಹದ್ದಿನ‌ಕಣ್ಣಿಡಲು ಪಾಲಿಕೆ ಸನ್ನದ್ಧವಾಗಿದೆ‌

ಈ ಮಧ್ಯೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ವೇಳೆ ಸೋಂಕು ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದ್ದು ಮತ್ತೆ ಲಾಕ್ ಡೌನ್ ಮಾಡುವ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಈಗಷ್ಟೇ ಜನಜೀವಮ ಸಹಜ ಸ್ಥಿತಿಗೆ ಮರಳುತ್ತಿದ್ದು ಮತ್ತೆ ಲಾಕ್ ಡೌನ್ ಮಾಡೋದರಿಂದ ಜನರ ಜೀವನಕ್ಕೆ ತೊಂದರೆಯಾಗಲಿದೆ ಅನ್ನೋ ಮಾತು ಹಿರಿಯ ಸವಿವರುಗಳಿಂದಲೇ ಕೇಳಿಬಂದಿದೆ. ಹೀಗಾಗಿ ಲಾಕ್ ಡೌನ್ ಮಾಡದೇ ಪರಿಸ್ಥಿತಿ ನಿಯಂತ್ರಿಸುವಂತೆ ಸರ್ಕಾರ ಸಚಿವರುಗಳು ಆಗ್ರಹಿಸಿದ್ದಾರೆ.

ಈ ಮಧ್ಯೆ ಲಾಕ್ ಡೌನ್ ಜಾರಿಗೆ ಬದಲು ನೈಟ್ ಕರ್ಪ್ಯೂ ಜಾರಿ ಮಾಡುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತೆಯೂ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ‌‌. ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಜನರು ರಾತ್ರಿ ಹೊತ್ತು ಪಾರ್ಟಿ, ಪ್ರಾರ್ಥನೆ ಎಂದೆಲ್ಲ ಹೊರಗಡೆ ಓಡಾಡುವ ಸಂದರ್ಭಗಳು ಹೆಚ್ಚು. ಇದರಿಂದ ಸೋಂಕು ಮತ್ತಷ್ಟು ಹೆಚ್ಚಲಿದ್ದು ಪ್ರತಿನಿತ್ಯ ಸಾವಿರಾರು ಕೊರೋನಾ ಪ್ರಕರಣಗಳು ದಾಖಲಾಗುವ ಸಾದ್ಯತೆ ಇದೆ.

ಈ ಕಾರಣಕ್ಕೆ ಲಾಕ್ ಡೌನ್ ಬದಲು ನೈಟ್ ಕರ್ಪ್ಯೂ ಜಾರಿ ಮಾಡಿ ಎಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಹೀಗಾಗಿ ಸರ್ಕಾರವೂ ಇನ್ನೇನು ಒಂದೆರಡು ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ನೈಟ್ ಕರ್ಪ್ಯೂ ಮತ್ತೆ ಆರಂಭಿಸಲಿದ್ದು ಲಾಕ್ ಡೌನ್ ಪ್ರಸ್ತಾಪದಿಂದ ದೂರವೇ ಉಳಿದಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮತ್ತೆ ರಾಜ್ಯದಲ್ಲಿ ಕಠಿಣನಿಯಮ ಜಾರಿಯಾಗೋದು ಫಿಕ್ಸ್ ಎನ್ನಲಾಗುತ್ತಿದ್ದು ಯಾವ ರೀತಿಯ ಕ್ರಮಗಳಿಗೆ ಸರ್ಕಾರ ಮುಂದಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ :  ಉಡುಪಿಗೂ ಕಾಲಿಟ್ಟ ಒಮಿಕ್ರಾನ್‌ ಸೋಂಕು : ಮತ್ತೆ 5 ಹೊಸ ಪ್ರಕರಣ ಪತ್ತೆ

ಇದನ್ನೂ ಓದಿ : ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ’ : ಕೋವಿಡ್​ ಸೂಪರ್​ಮಾಡೆಲ್​ ಸಮಿತಿ

( Karnataka Lockdown, What are the government options)

Comments are closed.