Vinod Raj : ನಾಡು ನುಡಿ ರಕ್ಷಣೆ ಹೊಣೆ ನಿಮ್ಮದಲ್ಲವೇ ? ಸರ್ಕಾರಕ್ಕೆ ನಟ ವಿನೋದ್ ರಾಜ್ ಪ್ರಶ್ನೆ

ನಾಡು ನುಡಿ ವಿಚಾರಕ್ಕೆ ಮತ್ತೊಮ್ಮೆ ಕರ್ನಾಟಕದಲ್ಲಿ ಕಿಚ್ಚು ಹೊತ್ತಿದೆ. ಎಂಇಎಸ್ ಹಾಗೂ ಶಿವಸೇನೆ ಪುಂಡಾಟಕ್ಕೆ ಕನ್ನಡಿಗರು ಕೆಚ್ಚೆದೆಯ ಹೋರಾಟದ ಮೂಲಕ ತಿರುಗೇಟು ನೀಡುತ್ತಿದ್ದು ಎಂಇಎಸ್ ನಿಷೇಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಹೋರಾಟಕ್ಕೆ ಸ್ಯಾಂಡಲ್ ವುಡ್ ಕೂಡ ಬೆಂಬಲ ಸೂಚಿಸಿದ್ದು, ನಾವು ಹೋರಾಟಕ್ಕೆ ಸಿದ್ಧ ಎಂದಿದ್ದಾರೆ. ಈ ಮಧ್ಯೆ ಕನ್ನಡದ ಪರ ಹೋರಾಟದ ವಿಚಾರ ಬಂದಾಗ ರಾಜಕೀಯ ನಾಯಕರ, ಆಳುವ ಪಕ್ಷದ ಹಾಗೂ ಜನಪ್ರತಿನಿಧಿಗಳ ಮೌನ ಸರಿಯಲ್ಲ ಎಂದು ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ( Vinod Raj ) ಹೇಳಿದ್ದಾರೆ.

ನೆಲಮಂಗಲ ದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿನೋದ್ ರಾಜ್ ಶಿವಸೇನೆ ಹಾಗೂ ಎಂಇಎಸ್ ಪುಂಡಾಟ ನೋಡಿದರೇ ತುಂಬಾ ಬೇಸರವಾಗುತ್ತದೆ. ಯಾಕೇ ಜನಪ್ರತಿನಿಧಿಗಳು ಎಂಇಎಸ್ ವಿರುದ್ಧ ಕ್ರಮಗೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಜನರೇ ಹೋರಾಟ ಮಾಡಬೇಕಾ, ಜನರೇ ಹೋರಾಟ ಮಾಡಿ ಜೈಲಿನಲ್ಲಿ ಕೂರಬೇಕಾ ? ಕನ್ನಡ ನಾಡು ನುಡಿಯ ವಿಚಾರದಲ್ಲಿ ರಾಜಕೀಯ ನಾಯಕರಿಗೇ ಯಾವುದೇ ಜವಾಬ್ದಾರಿ ಇಲ್ಲವೇ? ಎಂದು ವಿನೋದ್ ರಾಜ್ ಪ್ರಶ್ನಿಸಿದ್ದಾರೆ.

ಬೇರೆಯವರು ಹಾನಿ ಮಾಡುವಾಗ ರಾಜಕೀಯ ನಾಯಕರು ನೋಡಿ ಸುಮ್ಮನೇ ಕುಳಿತುಕೊಳ್ಳುತ್ತೀರಿ, ಇದು ಯಾವ ನ್ಯಾಯ? ಕಲಾವಿದರಾಗಿ ನಾವು ಹೋರಾಟಕ್ಕೆ ಬರ್ತಿವಿ. ಈಗಾಗಲೇ ನಮ್ಮ ಹಿರಿಯರಾದ ಶಿವಣ್ಣ ಹೋರಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ. ನಾವು ಹೋರಾಟದಲ್ಲಿ ಇರ್ತೀವಿ, ಆದ್ರೆ ಜನಪ್ರತಿನಿಧಿಗಳ ನಿಮ್ಮ ಜವಾಬ್ದಾರಿ ಏನು ಇಲ್ಲವೇ ಎಂದು ವಿನೋದ್ ರಾಜ್ ಖಾರವಾಗಿ ಪ್ರಶ್ನಿಸಿದ್ದಾರೆ.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ ಮಾಡಿರೋದು ತುಂಬಾ ನೋವು ತಂದಿದೆ. ಪ್ರತಿ ನಮ್ಮ ರಾಜ್ಯ ಕರ್ನಾಟಕಕ್ಕೆ ಅವಮಾನ ಆಗ್ತಿದೆ. ಆದರೂ ಸೂಕ್ತ ಕ್ರಮಕೈಗೊಳ್ಳ ಲಾಗಿಲ್ಲ. ರಾಜ್ಯದಲ್ಲಿ ಮರಾಠಿಗರಿಗೆ ಉತ್ತಮ ಸ್ಥಾನಮಾನ ಇದೆ. ಅವರಿಗೂ ಮೀಸಲಾತಿ ಕೊಡಲು ಸರ್ಕಾರ ಸಿದ್ಧವಾಗಿದೆ. ಆದರೂ ಕನ್ನಡಿಗರ ಮೇಲೆ ದೌರ್ಜನ್ಯ ನಿಂತಿಲ್ಲ. ನಾಡು, ನುಡಿಗೆ ಅವಮಾನ ಆಗ್ತಿದ್ರು ನೀವೇನು ಮಾಡ್ತಿಲ್ಲವಲ್ಲ ಯಾಕೆ ಎಂದು ನಾನು ಜನಪ್ರತಿನಿಧಿಗಳನ್ನೇ ಕೇಳ್ತಿನಿ. ಕನ್ನಡಿಗರಿಗೆ ಮಸಿ ಬಳಿತಿದ್ದಾರೆ. ಇದಕ್ಕೆ ನೀವೇನು ಮಾಡ್ತಿರಿ? ನಿಮ್ಮ ಜವಾಬ್ದಾರಿ ಅರಿವಿದ್ಯಾ ನಿಮಗೆ ಎಂದು ವಿನೋದ್ ರಾಜ್ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಧ್ವಂಸ ಮಾಡಿರೋದು ದೇಶ ದ್ರೋಹದ ಕೆಲಸ. ಅದಕ್ಕೆ ಧಕ್ಕೆ ತಂದವರನ್ನ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು. ಆದ್ರೆ ಜನಪ್ರತಿನಿಧಿಗಳು ನೀವೇನು ಮಾಡ್ತಿದ್ದೀರಾ?ಎಲ್ಲರೂ ತಾಳ್ಮೆ ಕಳೆದಿಕೊಳ್ಳುವಂತಾಗಿದೆ, ಈಗಲೇ ರಾಜ್ಯದ ಪ್ರಥಮ ವ್ಯಕ್ತಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿನೋದ್ ರಾಜ್ ಸಿಎಂ ಸೇರಿದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಎಂಇಎಸ್ ಪುಂಡಾಟಕ್ಕೆ ಕಾಂಗ್ರೆಸ್ ಶ್ರೀರಕ್ಷೆ: ಸರಣಿ ಟ್ವೀಟ್ ನಲ್ಲಿ ಬಿಜೆಪಿ ವಾರ್

ಇದನ್ನೂ ಓದಿ : ರಾಗಿಣಿ ಅಭಿಮಾನಿಗಳಿಗೆ ಶಾಕ್: ತುಪ್ಪದ ಬೆಡಗಿ ಕೊಟ್ರು ಸ್ಯಾಡ್ ನ್ಯೂಸ್

( Vinod Raj Questioned Karnataka State Government )

Comments are closed.