Omicron : ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಿರುತ್ತದೆ ಓಮಿಕ್ರಾನ್​ : ಅಧ್ಯಯನ

Omicron : ಕೋವಿಡ್​ 19 ಸಾಂಕ್ರಾಮಿಕವು ದಿನಕ್ಕೊಂದು ಆತಂಕಗಳನ್ನು ಹುಟ್ಟು ಹಾಕುತ್ತಲೇ ಇದೆ. ಅದರಲ್ಲೂ ಈಗ ಬಂದಿರುವ ಓಮಿಕ್ರಾನ್​ ರೂಪಾಂತರಿಯು ಹರಡುವ ವೇಗವನ್ನು ನೋಡುತ್ತಿದ್ದರೆ ಭಯವಾಗುತ್ತೆ. ಅಂತದ್ರಲ್ಲಿ ಕೊರೊನಾ ರೂಪಾಂತರಿಯ ಬಗ್ಗೆ ಸಂಶೋಧಕರು ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಓಮಿಕ್ರಾನ್​ ರೂಪಾಂತರಿಯು ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಾಗಿ ಇರಲಿದೆ ಹಾಗೂ ಪ್ಲಾಸ್ಟಿಕ್​ ಮೇಲೆ 8 ದಿನಗಳ ಕಾಲ ಇರಲಿದೆ ಎಂದು ಅಧ್ಯಯನವು ಹೇಳಿದೆ. ಇದೇ ಕಾರಣದಿಂದಲೇ ಓಮಿಕ್ರಾನ್​ ರೂಪಾಂತರಿಯು ಇಷ್ಟೊಂದು ವೇಗದಲ್ಲಿ ಹರಡುತ್ತಿದೆ ಎನ್ನಲಾಗಿದೆ .


ಜಪಾನ್​​ನ ಕ್ಯೋಟೋ ಪ್ರಿಫೆಕ್​ಚುವಲ್​ ಯೂನಿವರ್ಸಿಟಿ ಆಫ್​ ಮೆಡಿಸಿನ್​ನಲ್ಲಿ ನಡೆಸಲಾದ ಅಧ್ಯಯನದಲ್ಲಿ ವುಹಾನ್​ನಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್​​ನ ಎಲ್ಲಾ ರೂಪಾಂತರಗಳ ಬಗ್ಗೆ ಸಂಶೋಧನೆ ಮಾಡಲಾಗಿದೆ.
ಆಲ್ಪಾ. ಬೀಟಾ, ಡೆಲ್ಟಾ ಹಾಗೂ ಓಮಿಕ್ರಾನ್​​ ರೂಪಾಂತರಿಗಳು ಪ್ಲಾಸ್ಟಿಕ್​​ ಹಾಗೂ ಚರ್ಮದ ಮೇಲೆ ಮೂಲ ವೈರಸ್​ ಇರುವುದಕ್ಕಿಂತ ಎರಡುಪಟ್ಟು ದೀರ್ಘಾವದಿಯ ಬದುಕುಳಿಯುವಿಕೆಯನ್ನು ಪ್ರದರ್ಶಿಸಿವೆ ಎಂದು ಪ್ರಿಪಿಂಟ್​ ರೆಪೊಸಿಟರಿಯಲ್ಲಿ ಇತ್ತೀಚಿಗೆ ಪ್ರಕಟಿಸಲಾದ ಅಧ್ಯಯನದಲ್ಲಿ ತಿಳಿದು ಬಂದಿದೆ.

ಪರಿಸರದಲ್ಲಿ ಈ ವೈರಸ್​ಗಳು ಹೆಚ್ಚಿನ ಅವಧಿಗಳ ಕಾಲ ಸ್ಥಿರತೆಯನ್ನು ಹೊಂದಿರುವದರಿಂದಲೇ ಅಪಾಯ ಹೆಚ್ಚಾಗಿದೆ ಹಾಗೂ ಅವುಗಳ ಹರಡುವಿಕೆ ಇನ್ನಷ್ಟು ಹೆಚ್ಚಿನ ವೇಗವನ್ನು ಪಡೆದುಕೊಂಡಿವೆ ಎಂದು ಅಧ್ಯಯನದ ಪ್ರಮುಖ ಲೇಖಕರು ಹೇಳಿದ್ದಾರೆ .


ಓಮಿಕ್ರಾನ್​ ರೂಪಾಂತರಿಯು ಪರಿಸರದಲ್ಲಿ ಅತ್ಯಧಿಕ ಸ್ಥಿರತೆಯನ್ನು ತೋರಿಸಿದೆ ಎಂದು ಈ ಅಧ್ಯಯನವು ಸಾಬೀತುಪಡಿಸಿದೆ. ಇದು ಡೆಲ್ಟಾ ರೂಪಾಂತರಿಯ ಜಾಗವನ್ನು ಓಮಿಕ್ರಾನ್​ ಆಕ್ರಮಿಸಲು ಅತ್ಯಂತ ಪ್ರಮುಖ ಕಾರಣವಾಗಿದೆ. ಹಾಗೂ ಇದೇ ಕಾರಣಕ್ಕಾಗಿ ಓಮಿಕ್ರಾನ್​ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ.

Omicron stays on skin for over 21 hours, more than 8 days on plastic: Study

ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು

ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?

Comments are closed.