LPG cylinder price :ಹೊಸವರ್ಷಕ್ಕೆ ಗುಡ್​ ನ್ಯೂಸ್​: ಸಿಲಿಂಡರ್​ ದರ ಇಳಿಕೆ

LPG cylinder price :ಹೊಸ ವರ್ಷದ ಸಂಭ್ರಮದಲ್ಲಿರುವ ದೇಶದ ಜನತೆಗೆ ವರ್ಷದ ಮೊದಲ ದಿನವೇ ಬೆಲೆ ಇಳಿಕೆಯ ಗುಡ್​ ನ್ಯೂಸ್​ ಸಿಕ್ಕಿದೆ. 2021ರಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ನ್ಯಾಷನಲ್​ ಆಯಿಲ್​ ಮಾರ್ಕೆಟಿಂಗ್​​ ಕಂಪನಿಗಳು ರಿಲೀಫ್​ ನೀಡಿವೆ. ಇಂದಿನಿಂದ ಅನ್ವಯವಾಗುವಂತೆ 19 ಕೆಜಿ ತೂಕದ ಕಮರ್ಷಿಯಲ್​ ಎಲ್​​ಪಿಸಿ ಸಿಲಿಂಡರ್​ಗಳ ಬೆಲೆಯಲ್ಲಿ 102.50 ರೂಪಾಯಿ ಕಡಿತ ಮಾಡಲಾಗಿದೆ.

ಬೆಲೆ ಇಳಿಕೆಯ ಬಳಿಕ ದೆಹಲಿಯಲ್ಲಿ ಕಮರ್ಷಿಯಲ್​ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ 1998.50 ರೂಪಾಯಿ ಆಗಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್​ 1ರಂದು 19 ಕೆಜಿ ತೂಕದ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್​ಗಳ ಬೆಲೆ 2101 ರೂಪಾಯಿ ಆಗಿತ್ತು. ಇದೀಗ ಬೆಲೆ ಇಳಿಕೆ ಮಾಡಿರುವುದರಿಂದ ಜನಸಾಮನ್ಯರು ನಿರಾಳರಾಗಿದ್ದಾರೆ. ಅಲ್ಲದೇ ವಾಣಿಜ್ಯ ಸಿಲಿಂಡರ್​ಗಳ ಬೆಲೆ ಇಳಿಕೆಯಿಂದ ಹೋಟೆಲ್​​, ರೆಸ್ಟಾರೆಂಟ್​, ಟೀ ಸ್ಟಾಲ್​ಗಳು ಬೀದಿ ಬದಿಯ ತಿಂಡಿ ತಿನಿಸು ಮಾರಾಟ ಅಂಗಡಿಗಳಿಗೆ ವರದಾನವಾದಂತಾಗಿದೆ.

ಇನ್ನು ಡಿಸೆಂಬರ್​ಗೂ ಮುನ್ನ ಅಂದರೆ ನವೆಂಬರ್​ 1ರಂದು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆ 266 ರೂಪಾಯಿ ಏರಿಕೆ ಮಾಡುವ ಮೂಲಕ ಕಮರ್ಷಿಯಲ್​ ಸಿಲಿಂಡರ್​ಗಳ ಬೆಲೆ 2000.50 ರೂಪಾಯಿ ಮಾಡಲಾಗಿತ್ತು. ಆದರೆ ಇದೀಗ 1998 ರೂಪಾಯಿಗಳಿಗೆ ನಿಮಗೆ ಸಿಲಿಂಡರ್​ ಸಿಗಲಿದೆ. ಆದರೆ 14.2 ಕೆಜಿ, 10 ಕೆಜಿ ಹಾಗೂ 5 ಕೆಜಿ ಕಾಂಪೋಸಿಟ್​ ಸಿಲಿಂಡರ್​ಗಳು ಸೇರಿದಂತೆ ದೇಶಿ ಸಿಲಿಂಡರ್​ಗಳ ಬೆಲೆಯಲ್ಲಿ ಸದ್ಯ ಯಾವುದೇ ಇಳಿಕೆ ಕಂಡು ಬಂದಿಲ್ಲ.

ಭಾರತದ ಎಲ್ಲಾ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಲ್ಲಿ ಪ್ರತಿ ತಿಂಗಳು ಎಲ್​ಪಿಜಿ ಸಿಲಿಂಡರ್​ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ಇಂದು ಸಹ ಎಲ್​ಪಿಜಿ ಸಿಲಿಂಡರ್​ಗಳ ದರ ಪರಿಷ್ಕರಣೆಯಾಗಿದ್ದು ಜನತೆಗೆ ಜಾಕ್​​ಪಾಟ್​ ಹೊಡೆದಿದೆ.

ಇದನ್ನು ಓದಿ : Gujarat High Court : ದಂಪತಿ ನಡುವಿನ ಲೈಂಗಿಕ ಸಂಬಂಧದ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು​

ಇದನ್ನೂ ಓದಿ : GST Annual Return Filing Deadline Till Feb 28: 2022ರ ಆರಂಭದಲ್ಲಿ ಸಂತಸದ ಸುದ್ದಿ; ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಅವಧಿ ಮುಂದೂಡಿಕೆ

LPG cylinder price slashed by Rs 102.50 | Check revised rate

Comments are closed.