special leave for state government employees : ಕೊರೊನಾ ಸೋಂಕಿಗೆ ಒಳಗಾಗುವ ಸರ್ಕಾರಿ ನೌಕರರಿಗೆ ವಿಶೇಷ ರಜೆ ಘೋಷಣೆ

ಬೆಂಗಳೂರು : special leave for state government employees : ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರಿ ಉಲ್ಬಣದ ಬಳಿಕ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರ ಆರೋಗ್ಯದ ವಿಚಾರವಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸರ್ಕಾರಿ ನೌಕರರಿಗೆ ಕೊರೊನಾ ಸೋಂಕು ಕಂಡುಬಂದಲ್ಲಿ ಅವರು ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ರಜೆಯನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.


ಸರ್ಕಾರಿ ನೌಕರರು ಅಥವಾ ಅವರ ಕುಟುಂಬದವರು ಕೊರೊನಾ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಅಂತಹ ಸರ್ಕಾರಿ ನೌಕರರ ನಿವಾಸದ ಸುತ್ತ ಪ್ರದೇಶವನ್ನು ಕಂಟೈನ್ಮೆಂಟ್​ ವಲಯ ಎಂದು ಘೋಷಿಸಲಾಗುತ್ತದೆ. ಹಾಗೂ ಈ ಪ್ರದೇಶದಲ್ಲಿ ಯಾವುದೇ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಸೋಂಕಿಗೆ ಒಳಗಾದ ಸರ್ಕಾರಿ ನೌಕರರಿಗೆ ಗರಿಷ್ಟ 7 ದಿನಗಳ ಕಾಲ ವಿಶೇಷ ರಜೆಯನ್ನು ನೀಡಲಾಗುತ್ತದೆ ಎಂದು ಸರ್ಕಾರದ ಸುತ್ತೋಲೆ ಹೇಳಿದೆ.


ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಸೋಂಕು ಮಿಂಚಿನ ವೇಗದಲ್ಲಿ ಹರಡುತ್ತಿದೆ. ಆದರೆ ಸದ್ಯ ಮರಣದ ಪ್ರಮಾಣಕ್ಕಿಂತ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಸಂಖ್ಯೆಯೇ ಹೆಚ್ಚಿದೆ ಎಂಬುದು ಸಮಾಧಾನಕರ ವಿಚಾರವಾಗಿದೆ. ಅಲ್ಲದೇ ರಾಜ್ಯದಲ್ಲಿ ಮುಂಜಾಗ್ರತಾ ಡೋಸ್​ಗಳನ್ನೂ ನೀಡಲಾಗುತ್ತಿದೆ. ಆದರೆ ಈ ಎಲ್ಲದರ ನಡುವೆ ಮುಂಜಾಗ್ರತಾ ಕ್ರಮ ಎಂಬಂತೆ ಕೋವಿಡ್ 19 ಮಾರ್ಗಸೂಚಿಗಳಲ್ಲಿ ಬದಲಾವಣೆ ತಂದು ಕೋವಿಡ್​​ 19ನಿಂದ ಬಳಲುವ ರಾಜ್ಯ ಸರ್ಕಾರದ ಸಿಬ್ಬಂದಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

special leave for state government employees if corona comes order from state govt

ಇದನ್ನು ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

ಇದನ್ನೂ ಓದಿ : BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

Comments are closed.