Delta Variant : ಕೊರೊನಾ ಲಸಿಕೆ ಪಡೆದವರನ್ನೂ ಕಾಡುತ್ತೆ ಡೆಲ್ಟಾ ರೂಪಾಂತರಿ

ನವದೆಹಲಿ : ಕೊರೊನಾ ಬೆನ್ನಲ್ಲೇ ವಿಶ್ವವನ್ನೇ ಕಾಡುತ್ತಿರುವ ಡೆಲ್ಟಾ ವೈರಸ್‌ ಹೆಚ್ಚು ಅಪಾಯಕಾರಿ. ಕೊರೊನಾ ಎರಡು ಲಸಿಕೆ ಪಡೆದವರನ್ನು ಡೆಲ್ಟಾ ರೂಪಾಂತರಿ ಕಾಡುತ್ತೆ ಅನ್ನೋದು ಅಧ್ಯಯನದಿಂದ ಬಯಲಾಗಿದೆ. ಹೀಗಾಗಿ ಲಸಿಕೆ ಪಡೆದವರೂ ಕೂಡ ಡೆಲ್ಟಾ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಈ ಕುರಿತು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಬ್ರಿಟನ್‌ ಆಸ್ಪತ್ರೆಯೊಂದರಲ್ಲಿ ಡೆಲ್ಟಾ ರೂಪಾಂತರಿಗೆ ತುತ್ತಾಗಿ ದಾಖಲಾಗಿರುವ ಸುಮಾರು 3,692 ಮಂದಿಯ ಮೇಲೆ ತಜ್ಞರು ಅಧ್ಯಯನ ನಡೆಸಿದ ವೇಳೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆಸ್ಪತ್ರೆಗೆ ದಾಖಲಾಗಿರುವ ಶೇಕಡಾ 58.3ರಷ್ಟು ಮಂದಿ ಲಸಿಕೆಯನ್ನು ಪಡೆದಿಲ್ಲ. ಆದ್ರೆ ಶೇಕಡಾ 22.8% ಜನರಿಗೆ ಎರಡು ಡೋಸ್‌ ಲಸಿಕೆಯನ್ನೂ ನೀಡಲಾಗಿದೆ. ಹೀಗಾಗಿ ಡೆಲ್ಟಾ ಸೋಂಕು ಲಸಿಕೆ ಪಡೆದವರನ್ನು ಕಾಡುತ್ತೆ ಅಂತಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಇಸ್ರೇಲ್‌ನಲ್ಲಿಯೂ ಶೇ.60ರಷ್ಟು ಲಸಿಕೆ ಪಡೆದ ಜನರಲ್ಲಿವೆ ಡೆಲ್ಟಾ ಕಾಣಿಸಿಕೊಂಡಿದೆ ಎಂದು ಇಸ್ರೇಲ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಪ್ರಮಾಣಕ್ಕಿಂತ ಡೆಲ್ಟಾ ರೂಪಾಂತರಿ ಬಹುಬೇಗನೆ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಣಕ್ಕೆ ವಿಶ್ವದ ಹಲವು ದೇಶಗಳನ್ನು ತಲೆ ಕೆಡಿಸಿಕೊಂಡಿವೆ. ಡೆಲ್ಟಾ ಸೋಂಕು ಈಗಾಗಲೇ ಹಲವು ರಾಷ್ಟ್ರಗಳ ನಿದ್ದೆಗೆಡಿಸಿದೆ. ಕೊರೊನಾ ಮೂರನೇ ಅಲೆಯ ಬೆನ್ನಲ್ಲೇ ಡೆಲ್ಟಾ ರೂಪಾಂತರಿ ಸೋಂಕು ತೀವ್ರವಾಗಿ ಹರಡುತ್ತಿದೆ. ಇದೀಗ ಕೊರೊನಾ ಲಸಿಕೆ ಪಡೆದವರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ತಲೆನೋವು ತರಿಸಿದೆ.

ಡೆಲ್ಟಾ ರೂಪಾಂತರಿಯ ಬಗ್ಗೆ ವಿಶ್ವದಾದ್ಯಂತ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಸಿಂಗಾಪುರ, ಬ್ರಿಟನ್‌, ಇಸ್ರೇಲ್‌, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಸೋಂಕು ಹಾಣಿಯನ್ನು ಉಂಟು ಮಾಡಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಲಸಿಕೆಯನ್ನು ಪಡೆದುಕೊಂಡವರು ಕೂಡ ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರವನ್ನು ಪಾಲನೆ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ರಾಯಿಟರ್ಸ್‌ ತನ್ನ ವರದಿಯಲ್ಲಿ ತಿಳಿಸಿದೆ.

Comments are closed.