ಕೊರೊನಾ ವಿರುದ್ಧದ ಹೋರಾಟದಲ್ಲಿ 3ನೇ ಡೋಸ್​ ಲಸಿಕೆಯ ಮಹತ್ವ ತಿಳಿಸಿದ ಹೊಸ ಅಧ್ಯಯನ

ಕೋವಿಡ್​ 19 ವಿರುದ್ಧ ಮೂರು ಲಸಿಕೆಗಳನ್ನು ಪಡೆದಿರುವ ಜನರ ದೇಹದಲ್ಲಿ ಉತ್ತಮ ಗುಣಮುಟ್ಟದ ಆ್ಯಂಟಿಬಾಡಿಗಳು ಉತ್ಪಾದನೆಯಾಗುತ್ತದೆ, ಇದು ಓಮಿಕ್ರಾನ್​ ರೂಪಾಂತರಿಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ (Triple vaccinated can fight Omicron) ಎಂದು ಅಧ್ಯಯನವೊಂದು ಹೇಳಿದೆ. ಮೂರು ಬಾರಿ ಕೊರೊನಾ ಸೋಂಕಿಗೆ ಒಳಗಾದವರಿಗೆ, ಕೊರೊನಾದಿಂದ ಗುಣಮುಖರಾಗಿ ಬಳಿಕ ಎರಡು ಡೋಸ್ ಲಸಿಕೆಯನ್ನು ಪಡೆದವರಿಗೆ, ಕೋವಿಡ್​ ಡಬಲ್​ ಡೋಸ್​ ಲಸಿಕೆ ಪಡೆದು ಬಳಿಕ ಕೊರೊನಾ ಸೋಂಕಿಗೆ ಒಳಗಾದವರಿಗೂ ಇದು ಅನ್ವಯಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ನೇಚರ್​ ಮೆಡಿಸಿನ್​ ಜರ್ನಲ್​ನಲ್ಲಿ ಇತ್ತೀಚಿಗೆ ಪ್ರಕಟವಾದ ಅಧ್ಯಯನದಲ್ಲಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರು ಹಾಗೂ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಉತ್ಪತ್ತಿಯಾದ ಆ್ಯಂಟಿಬಾಡಿಗಳ ಬಗ್ಗೆ ಸಂಶೋಧನೆಯ ನಡೆಸಲಾಗಿದೆ. 98 ಮಂದಿ ಕೊರೊನಾದಿಂದ ಚೇತರಿಸಿಕೊಂಡವರು ಹಾಗೂ 73 ಮಂದಿ ಕೊರೊನಾ ಸೋಂಕಿ ಹೊಂದಿರದವರಿಗೆ ಎಂಆರ್​ಎನ್​ಎ ಆಧರಿತ ಫೈಜರ್​ ಲಸಿಕೆಯನ್ನು ನೀಡಲಾಯಿತು.

ಜರ್ಮನಿಯ ಟೆಕ್ನಿಕಲ್​ ಯೂನಿವರ್ಸಿಟಿ ಆಫ್​ ಮ್ಯೂನಿಚ್​​ ಸಂಶೋಧಕರು ಕೊರೊನಾ ಮೂರು ಡೋಸ್​ ಲಸಿಕೆಗಳು ಓಮಿಕ್ರಾನ್​ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಡಬಲ್​ ಡೋಸ್​ ಕೊರೊನಾ ಲಸಿಕೆ ಪಡೆದು ಬಳಿಕ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರಲ್ಲಿಯೂ ಇದೇ ರೀತಿಯ ಬೆಳವಣಿಗೆಯು ಕಂಡುಬಂದಿದೆ. ಕೊರೊನಾ ಲಸಿಕೆಯ ಮೂಲಕ ಬಲಪಡಿಸಲಾದ ರೋಗ ನಿರೋಧಕ ಶಕ್ತಿಯು ಕೊರೊನಾ ವೈರಸ್​ನ ಭವಿಷ್ಯದ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾದ ರಕ್ಷಣೆಯನ್ನು ನೀಡಬಲ್ಲದು ಎಂದು ಟಿಯುಎಂ ಪ್ರಾಧ್ಯಾಪಕ ಪರ್ಸಿ ನೋಲ್ಲೆ ಹೇಳಿದ್ದಾರೆ.

ಇದನ್ನು ಓದಿ : ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗೌತಮ್​ ಅದಾನಿ

ಇದನ್ನೂ ಓದಿ : ಬೈಂದೂರಲ್ಲಿ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ 300 ವಿದ್ಯಾರ್ಥಿಗಳು : ಕರಾವಳಿಯಲ್ಲಿ ಮುಂದುವರಿದ ಹಿಜಬ್‌ – ಕೇಸರಿ ಶಾಲು ವಿವಾದ

Triple vaccinated can fight Omicron variant efficiently: Study

Comments are closed.