two omicron variant found : ರಾಜ್ಯದಲ್ಲಿ ಮತ್ತೆರಡು ಹೊಸ ಓಮಿಕ್ರಾನ್​ ರೂಪಾಂತರಿಗಳು ಪತ್ತೆ

ರಾಜ್ಯದಲ್ಲಿ ಕೋವಿಡ್​ ಸೋಂಕಿನ ಪ್ರಮಾಣದಲ್ಲಿ (two omicron variant found) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದ ಬಿಎ2 ಓಮಿಕ್ರಾನ್​​ ಉಪತಳಿಗಳು ಬೆಂಗಳೂರಿನಲ್ಲಿಯೂ ಪತ್ತೆಯಾದ ಬಳಿಕ ಆತಂಕ ಇನ್ನಷ್ಟು ಹೆಚ್ಚಾಗಿತ್ತು. ಸಂಭವನೀಯ ಕೊರೊನಾ ನಾಲ್ಕನೇ ಅಲೆಯನ್ನು ತಡೆಯುವ ಸಲುವಾಗಿ ಈಗಾಗಲೇ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಬಿಎ2 ಆತಂಕ ಇನ್ನೂ ಇರುವ ನಡುವೆಯೇ ಬಿಎ4 ಹಾಗೂ ಬಿಎ 5ಗಳೆಂಬ 2 ಕೊರೊನಾ ಓಮಿಕ್ರಾನ್​​ನ ಉಪತಳಿಗಳು ಇರುವುದು ಧೃಡಪಟ್ಟಿದೆ. ಈ ಎರಡು ಹೊಸ ಉಪತಳಿಗಳು ಕರ್ನಾಟಕದಲ್ಲಿಯೂ ಪತ್ತೆಯಾದ ಬಳಿಕ ಹೆಚ್ಚಿನ ಅಧ್ಯಯನಕ್ಕೆ ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.


ಕೊರೊನಾ ಮೂರನೇ ಅಲೆಗೆ ಕಾರಣವಾಗಿದ್ದ ಓಮಿಕ್ರಾನ್​ ಸೋಂಕಿನಿಂದ ರಾಜ್ಯದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕಡಿಮೆ ಇದ್ದರೂ ಸಹ ಸೋಂಕಿತರ ಸಂಖ್ಯೆ ಮಾತ್ರ ಎಲ್ಲೆ ಮೀರಿತ್ತು. ಆದರೆ ಇದಾದ ಬಳಿಕ ಪತ್ತೆಯಾದ ಬಿಎ 2 ಉಪತಳಿಯ ಕೊರೊನಾ ಸೋಂಕು ಓಮಿಕ್ರಾನ್​ಗಿಂತಲೂ ಅತ್ಯಂತ ವೇಗವಾಗಿ ಹರಡುತ್ತಿದೆ.


ಇದೀಗ ಪತ್ತೆಯಾಗಿರುವ ಬಿಎ.4 ಹಾಗೂ ಬಿಎ.5 ಉಪತಳಿಗಳು ಬಿಎ.2ಗಿಂತ ವಿಭಿನ್ನ ಎಂದು ತಿಳಿದುಬಂದಿದೆ. ಅಲ್ಲದೇ ಈಗಾಗಲೇ ಓಮಿಕ್ರಾನ್​ ಸೋಂಕಿಗೆ ಒಳಗಾದವರಲ್ಲೂ ಈ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆಯಂತೆ. ನಾಲ್ಕನೇ ಅಲೆಯ ಆರಂಭಕ್ಕೂ ಮುನ್ನವೇ ಮೂರು ಉಪತಳಿಗಳು ಪತ್ತೆಯಾಗಿರುವುದು ಆತಂಕಕ್ಕೆ ದಾರಿ ಮಾಡಿದೆ.

Corona Death : ಕೊರೋನಾದಿಂದ ಕಂಗೆಟ್ಟವರಿಗೆ ಸಮಾಧಾನದ ಸುದ್ದಿ: ಏಪ್ರಿಲ್‌ನಲ್ಲಿ ದಾಖಲಾಯ್ತು ಅತಿ ಕಡಿಮೆ ಸಾವಿನ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆಯ ಆತಂಕ ಎದುರಾಗಿದೆ. ಹೀಗಾಗಿ ಈಗಾಗಲೇ ಕೊರೋ‌‌ನಾ ನಾಲ್ಕನೇ ಅಲೆಯ ಎದುರಿಸುವ ನಿಟ್ಟಿನಲ್ಲಿ ಸೂಕ್ತ‌ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಈ ಮಧ್ಯೆ ರಾಜ್ಯದಲ್ಲಿ ನಾಲ್ಕನೇ ಅಲೆಯ ಆತಂಕದಲ್ಲಿದ್ದ ಜನರಿಗೆ ಕೊಂಚ ಸಮಾಧಾನದ ಸುದ್ದಿ ಆರೋಗ್ಯ ಇಲಾಖೆಯಿಂದ ಹೊರಬಿದ್ದಿದ್ದು, ಕಳೆದ ತಿಂಗಳಿನಲ್ಲೇ ಕೊರೋನಾದಿಂದ ಅತಿ ಕಡಿಮೆ ಸಾವು (Corona Death) ದಾಖಲಾಗಿದೆ.

ಏಪ್ರಿಲ್ 2022 ರಲ್ಲಿ ಕೊವೀಡ್ (Corona) ನಿಂದ 5 ಜನರು ಸಾವನ್ನಪ್ಪಿದ್ದಾರೆ. ಇದು ಕಳೆದ ಮೂರು ಅಲೆಯಲ್ಲಿ ಕೊರೋನಾದ ಸಾವನ್ನಪ್ಪಿದವರ ಪ್ರಮಾಣಕ್ಕೆ ಹೋಲಿಸಿದರೇ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಈ 2 ವರ್ಷದಲ್ಲೇ ಲಸಿಕೆ, ಮುನ್ನೆಚ್ಚರಿಕೆ ಕ್ರಮಗಳಿಂದ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನಲಾಗಿತ್ತು. ಆದರೆ ಈ ಹೇಳಿಕೆಗೆ ಬಲಬಂದಿರಲಿಲ್ಲ. ಈಗ ದಾಖಲೆಗಳು ಈ ಮಾತಿಗೆ ಪುಷ್ಠಿ ಒದಗಿಸಿದ್ದು, ಮುನ್ನೆಚ್ಚರಿಕೆ ಕ್ರಮ ಹಾಗೂ ಲಸಿಕೆಯಿಂದಾಗಿ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಕೋವಿಡ್‌ಗೆ 15523 ಬಲಿಯಾಗಿದ್ದರು. ಈ ವರ್ಷ ಏಪ್ರಿಲ್ ನಲ್ಲಿ ಸಾವಿನ ಸಂಖ್ಯೆ ಕೇವಲ 5 ಆಗಿದ್ದು, ಕೊರೋನಾದಿಂದ ಕಂಗೆಟ್ಟ ಜನರಿಗೆ ಈ ವಿಚಾರ‌ ಸಮಾಧಾನ ತಂದಿದೆ. ಇನ್ನೂ ಕಳೆದ ನಾಲ್ಕು ತಿಂಗಳಿನಲ್ಲಿ ಕೊರೋನಾ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಎಷ್ಟಿದೆ ಅನ್ನೋದನ್ನು ನೋಡೋದಾದರೇ,

ತಿಂಗಳು – ಪಾಸಿಟಿವ್ – ಸಾವು
ಜನವರಿ – 8,02,130 – 663
ಫೆಬ್ರವರಿ – 1,31,596 – 952
ಮಾರ್ಚ್ – 4,451 – 104
ಏಪ್ರಿಲ್ – 2,108 – 5

ರಾಜ್ಯದಲ್ಲಿ ಈವರೆಗೆ ಕೋವಿಡ್ ಗೆ 40,059 ಬಲಿಯಾಗಿದ್ದು, ಈ ವರ್ಷದ ಏಪ್ರಿಲ್ 30 ರವರೆಗೆ ರಾಜ್ಯದಲ್ಲಿ ಒಟ್ಟಾರೆ 40,059 ಮಂದಿ ಸಾವು ಕಂಡಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿ ಕೋರೊನಾಗೆ 16,962 ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದ್ದರೂ ರಾಜ್ಯ ಸರ್ಕಾರ ನಾಲ್ಕನೇ ಅಲೆಯನ್ನು ಎದುರಿಸಲು ಅಗತ್ಯ ಸಿದ್ಧತೆ ‌ಮಾಡಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ , ಆಕ್ಸಿಜನ್ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಂಡಿದೆ.

ಇದನ್ನು ಓದಿ : Nice road Accident : ಬೆಂಗಳೂರಿನಲ್ಲಿ ಕಾರು- ಬಸ್ ಅಪಘಾತ : ಕೋಟ ಮೂಲದ ವಿದ್ಯಾರ್ಥಿ ಸೇರಿ, ಇಬ್ಬರ ಸಾವು

ಇದನ್ನೂ ಓದಿ : Nice road Accident : ಬೆಂಗಳೂರಿನಲ್ಲಿ ಕಾರು- ಬಸ್ ಅಪಘಾತ : ಕೋಟ ಮೂಲದ ವಿದ್ಯಾರ್ಥಿ ಸೇರಿ, ಇಬ್ಬರ ಸಾವು

two omicron variant found in karnataka again

Comments are closed.