ಉಡುಪಿಯಲ್ಲಿ 18, ಚಿಕ್ಕಬಳ್ಳಾಪುರ 26 ಮಂದಿಗೆ ಸೋಂಕು : ರಾಜ್ಯದಲ್ಲಿಂದು ಒಂದೇ ದಿನ 97 ಮಂದಿಗೆ ಕೊರೊನಾ

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆರ್ಭಟ ಮತ್ತೆ ಮುಂದುವರಿದಿದೆ. ರಾಜ್ಯದಲ್ಲಿಂದು 97 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ. ಅದ್ರಲ್ಲೂ ಚಿಕ್ಕಬಳ್ಳಾಪುರದಲ್ಲಿ 26 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ, ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಕರಾವಳಿಯಲ್ಲಿ ಆತಂಕ ಮೂಡಿಸಿದೆ.

ನಿನ್ನೆ ಬರೋಬ್ಬರಿ 200ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಆತಂಕ ಶುರುವಾಗಿತ್ತು. ಆದ್ರಿಂದು ಮತ್ತೆ 97 ಮಂದಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಮುಂಬೈ ಮಾರಕವಾಗಿ ಪರಿಣಮಿಸಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಬರೊಬ್ಬರಿ 27 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದರೆ, ಇತ್ತ ಕರಾವಳಿಯಲ್ಲಿಯೂ ಮಹಾಮಾರಿಯ ಆರ್ಭಟ ಮುಂದುವರಿದಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 18 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ 15 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಹಾಸನ ಜಿಲ್ಲೆಯಲ್ಲಿ 14 ಪ್ರಕರಣ ದಾಖಲಾಗಿದೆ. ಕಲಬುರಗಿ 6, ಯಾದಗಿರಿ 5, ತುಮಕೂರು 2, ಉತ್ತರ ಕನ್ನಡ 2, ದಕ್ಷಿಣ ಕನ್ನೆಡ 1, ವಿಜಯಪುರ 1 ಮತ್ತು ಕೊಡಗಿನಲ್ಲಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಂದು ಪತ್ತೆಯಾಗಿರುವ 97 ಮಂದಿಯ ಪೈಕಿ 74 ಮಂದಿ ಮುಂಬೈನಿಂದ ವಾಪಾಸಾದವರಾಗಿದ್ದಾರೆ. ಅಲ್ಲದೇ ಸಿಲಿಕಾನ್ ಸಿಟಿ ಬೆಂಗಳೂರು ಭಾನುವಾರದ ಮಟ್ಟಿಗೆ ಸೇಫ್ ಆಗಿದೆ. ಬೆಂಗಳೂರಿನಲ್ಲಿ ಇಂದು ಒಂದೇ ಒಂದು ಕೊರೊನಾ ಕೇಸ್ ಕೂಡ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಇದುವರೆಗೂ 1378 ಮಂದಿ ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಮಹಾಮಾರಿಗೆ ಇದುವರೆಗೆ 42 ಮಂದಿ ಮೃತಪಟ್ಟಿದ್ದಾರೆ.

Leave A Reply

Your email address will not be published.