ಆರ್​ಸಿಬಿ ವಿಜಯೋತ್ಸವ ಕರಾಳ ಘಟನೆಗೆ 1 ವರ್ಷ : 11 ಅಭಿಮಾನಿಗಳ ದುರ್ಮರಣಕ್ಕೆ ಸಿಗದ ತಾರ್ಕಿಕ ಅಂತ್ಯ

ಪ್ರಸ್ತುತ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಬಳಿ 2 ಐಪಿಎಲ್ ಟ್ರೋಫಿ ಇದೆ. ಆದರೆ ಸುದೀರ್ಘ ಕಾಯುವಿಕೆಯ ಬಳಿಕ ಕಳೆದ ವರ್ಷ ಪಡೆದಿದ್ದ ಆ ಮೊದಲ ಕಪ್​ನ ಸಂಭ್ರಮ ಹೆಚ್ಚು ದಿನ ಉಳಿಯಲೇ ಇಲ್ಲ. ಆರ್​ಸಿಬಿ ವಿಜಯೋತ್ಸವದ ಸಂಭ್ರಮಾಚರಣೆಗೆಂದು ಕಿಕ್ಕಿರಿದು ಆಗಮಿಸಿದ್ದ ಆರ್​ಸಿಬಿ ಅಭಿಮಾನಿಗಳು, ಕಾಲ್ತುಳಿತಕ್ಕೆ ಬಲಿಯಾಗಿದ್ದರು.

ಪ್ರಸ್ತುತ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಬಳಿ 2 ಐಪಿಎಲ್ ಟ್ರೋಫಿ ಇದೆ. ಆದರೆ ಸುದೀರ್ಘ ಕಾಯುವಿಕೆಯ ಬಳಿಕ ಕಳೆದ ವರ್ಷ ಪಡೆದಿದ್ದ ಆ ಮೊದಲ ಕಪ್​ನ ಸಂಭ್ರಮ ಹೆಚ್ಚು ದಿನ ಉಳಿಯಲೇ ಇಲ್ಲ. ಆರ್​ಸಿಬಿ ವಿಜಯೋತ್ಸವದ ಸಂಭ್ರಮಾಚರಣೆಗೆಂದು ಕಿಕ್ಕಿರಿದು ಆಗಮಿಸಿದ್ದ ಆರ್​ಸಿಬಿ ಅಭಿಮಾನಿಗಳು, ಕಾಲ್ತುಳಿತಕ್ಕೆ ಬಲಿಯಾಗಿದ್ದರು. 11 ಮಂದಿ ಅಮಾಯಕ ಜೀವಗಳು, ಸೂಕ್ತ ವ್ಯವಸ್ಥೆಯ ಕೊರತೆಯಿಂದಾಗಿ ಜೀವ ಚೆಲ್ಲಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಈ ದುರಂತ ಸಂಭವಿಸಿದ 1 ವರ್ಷ ಪೂರ್ಣಗೊಂಡಿದೆ. ಆದರೆ ಇಂದಿಗೂ ಈ ಪ್ರಕರಣದಲ್ಲಿ ನೈಜ ಹೊಣೆಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ನಿಗೂಢವಾಗಿಯೇ ಉಳಿದಿದೆ.

ಆರ್​ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಲಕ್ಷಾಂತರ ಮಂದಿ ಅಭಿಮಾನಿಗಳು ಬೆಂಗಳೂರಿನತ್ತ ಜಮಾಯಿಸಿದ್ದರು. ಇಷ್ಟೊಂದು ಅಭಿಮಾನಿಗಳು ಸೇರಬಹುದು ಎಂಬ ಊಹೆ ಇಲ್ಲದ ಪೊಲೀಸ್​ ಇಲಾಖೆ ಅದಕ್ಕೆ ತಕ್ಕುದಾದ ಭದ್ರತೆ ಕೈಗೊಂಡಿರಲಿಲ್ಲ. ವಿಜಯೋತ್ಸವದ ಮೆರವಣಿಗೆ ನಿಯಂತ್ರಣ ತಪ್ಪಿದ ಪರಿಣಾಮ ಕಾಲ್ತುಳಿತ ಸಂಭವಿಸಿತ್ತು. 11 ಮಂದಿ ಸಾವನ್ನಪ್ಪಿದ್ದರೆ 33 ಮಂದಿ ಈ ಘಟನೆಯಿಂದ ಗಾಯಗೊಂಡಿದ್ದರು.

ಈ ಭೀಕರ ದುರಂತದ ನಂತರ ಭದ್ರತಾ ಲೋಪದ ಆರೋಪದ ಮೇಲೆ ಅಂದಿನ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್, ಜಂಟಿ ಕಮಿಷನರ್ ವಿಕಾಸ್ ಕುಮಾರ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಅಮಾನತುಗೊಳಿಸಿತ್ತು. ಇಲಾಖೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಶಿಸ್ತುಕ್ರಮ ಜರುಗಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ, ಎಂಟು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಈ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

Also Read: jwala gutta : 60 ಲೀಟರ್ ಎದೆಹಾಲು ದಾನ ಮಾಡಿದ ಜ್ವಾಲಾ ಗುಟ್ಟಾ : ಅಕಾಲಿಕ ಶಿಶುಗಳ ಜೀವ ಉಳಿಸುವ ‘ಅಮೃತ’ದ ಕಥೆ

ಸಾರ್ವಜನಿಕರ ಒತ್ತಡಕ್ಕೆ ಮಣಿದಿದ್ದ ರಾಜ್ಯ ಸರ್ಕಾರ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅವರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿತ್ತು. ಭವಿಷ್ಯದಲ್ಲಿ ಇಂತಹ ಕ್ರೀಡಾಕೂಟಗಳ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಈ ಸಮಿತಿ ವರದಿ ಸಿದ್ಧಪಡಿಸುತ್ತಿದೆ. ಆದರೆ, ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾದ ಆ 11 ಕುಟುಂಬಗಳಿಗೆ ಇಂದಿಗೂ ಸೂಕ್ತ ಪರಿಹಾರ ಮತ್ತು ಶಾಶ್ವತ ನ್ಯಾಯ ಸಿಕ್ಕಿಲ್ಲ ಎಂಬ ಆಕ್ರೋಶ ಇಂದಿಗೂ ಸಾರ್ವಜನಿಕ ವಲಯದಲ್ಲಿದೆ.

1 year since the tragic incident at RCBs victory ceremony No logical end to the tragic deaths of 11 fans

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories