ಏಷ್ಯಾಕಪ್‌ ಫೈನಲ್‌, ಪಾಕಿಸ್ತಾನ – ಭಾರತ ವಿರುದ್ದ ಪಂದ್ಯದಿಂದ ಹಾರ್ದಿಕ್‌ ಪಾಂಡ್ಯ, ಅಭಿಷೇಕ್ ಶರ್ಮಾ ಔಟ್‌

Asia cup 2025 Final ದುಬೈ: ಏಷ್ಯಾಕಪ್‌ 2025 ಫೈನಲ್‌ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ಭಾರತ ಕ್ರಿಕೆಟ್‌ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ಹೊರಬೀಳುವುದು ಖಚಿತ.

ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ಇಬ್ಬರೂ ಆಟಗಾರರು ಸ್ನಾಯು ಸೆಳೆತದಿಂದ ಬಳಲಿ ಮೈದಾನದಿಂದ ಹೊರನಡೆದಿದ್ದಾರೆ.

ಭಾನುವಾರ ಸೆಪ್ಟೆಂಬರ್ 28ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಏಷ್ಯಾಕಪ್‌ ನ ಲೀಗ್‌ ಹಾಗೂ ಸೂಪರ್‌ 4 ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ದ ಸೋಲನ್ನು ಕಂಡಿತ್ತು.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಕೇವಲ ಒಂದು ಓವರ್ ಬೌಲ್ ಮಾಡಿ ವಿಕೆಟ್ ಪಡೆದ ನಂತರ ಸ್ನಾಯು ಸೆಳೆತದಿಂದ ಮೈದಾನದಿಂದ ಹೊರನಡೆದರು. ನಂತರ ಅವರು ಮರಳಿ ಕಣಕ್ಕೆ ಇಳಿಯಲಿಲ್ಲ.

ಐಸಿಸಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವ ಅಭಿಷೇಕ್ ಶರ್ಮಾ ಕೂಡ ಬ್ಯಾಟಿಂಗ್ ಮುಗಿದ ನಂತರ ಫೀಲ್ಡಿಂಗ್ ವೇಳೆ ತೊಡೆಗೆ ಆದ ನೋವಿನಿಂದಾಗಿ ಪೆವಿಲಿಯನ್‌ಗೆ ಮರಳಿದರು.

ಇದನ್ನೂ ಓದಿ : ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: ಕರುಣ್ ನಾಯರ್ ಔಟ್, 3 ಕನ್ನಡಿಗರಿಗೆ ಅವಕಾಶ

ಯುವ ಆಟಗಾರ ತಿಲಕ್ ವರ್ಮಾ ಕೂಡ ಸ್ನಾಯು ಸೆಳೆತಕ್ಕೆ ಒಳಗಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಇಬ್ಬರೂ ಆಟಗಾರರು ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಅಭಿಷೇಕ್ ಶರ್ಮಾ ಚೇತರಿಸಿ ಕೊಳ್ಳುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ಅನ್ನು ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ಪರಿಶೀಲಿಸಿ ಫೈನಲ್‌ಗೆ ಅವರ ಲಭ್ಯತೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ : USA Cricket : ಯುಎಸ್‌ಎ ಕ್ರಿಕೆಟ್‌ ಸದಸ್ಯತ್ವ ರದ್ದು ಮಾಡಿ ಐಸಿಸಿ

ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಶನಿವಾರ ಯಾವುದೇ ತರಬೇತಿ ಅವಧಿಯನ್ನು ನಡೆಸದಿರಲು ನಿರ್ಧರಿಸಿದೆ.

ಈ ಮೂವರು ಪ್ರಮುಖ ಆಟಗಾರರು ಫೈನಲ್‌ಗೆ ಅಲಭ್ಯರಾದರೆ, ಪಾಕಿಸ್ತಾನದ ವಿರುದ್ಧದ ಮಹತ್ವದ ಕಾದಾಟದಲ್ಲಿ ಭಾರತಕ್ಕೆ ದೊಡ್ಡ ಹೊಡೆತ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories