ind vs eng 1st ODI : ಭಾರತ ಕ್ರಿಕೆಟ್ ತಂಡಕ್ಕೆ ಮರಳಿದ ದಿಗ್ಗಜರು : ಇಂಗ್ಲೆಂಡ್‌ ವಿರುದ್ದ ಸೇಡು ತೀರಿಸಿಕೊಳ್ಳುತ್ತಾ ಗಿಲ್‌ ಪಡೆ

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್ನಲ್ಲಿ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿದೆ. ಶುಬ್ಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದ್ದು, ಟಿ20 ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ಸವಾಲು ಒಡ್ಡಲೇ ಬೇಕಾಗಿದೆ.

ಬರ್ಮಿಂಗ್ಹ್ಯಾಮ್ : ಟಿ20 ಸರಣಿ ಸೋತಿರುವ ಭಾರತ ಕ್ರಿಕೆಟ್‌ ತಂಡ ಇಂದಿನಿಂದ ಇಂಗ್ಲೆಂಡ್‌ ವಿರುದ್ದ ಏಕದಿನ ಸರಣಿಯನ್ನು ಆಡಲಿದೆ. ಭಾರತ ತಂಡಕ್ಕೆ ದಿಗ್ಗಜ ಆಟಗಾರರು ಮರಳಿರೋದು ಆನೆ ಬಲ ತಂದಿದೆ. ಟಿ20 ಸರಣಿ ಸೋಲಿಗೆ ಇದೀಗ ಗಿಲ್‌ ಪಡೆ ಸೇಡು ತೀರಿಸಿಕೊಳ್ಳುತ್ತಾ ಅನ್ನೋ ಕುತೂಹಲ ಕ್ರಿಕೆಟ್‌ ವಲಯದಲ್ಲಿ ಮನೆ ಮಾಡಿದೆ.

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್ನಲ್ಲಿ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿದೆ. ಶುಬ್ಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದ್ದು, ಟಿ20 ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ಸವಾಲು ಒಡ್ಡಲೇ ಬೇಕಾಗಿದೆ.

ಭಾರತ ತಂಡಕ್ಕೆ ಮರಳಿದ ಕ್ರಿಕೆಟ್‌ ದಿಗ್ಗಜರು

ಐಪಿಎಲ್‌ ಬೆನ್ನಲ್ಲೇ ಕ್ರಿಕೆಟ್‌ನಿಂದ ದೂರ ಉಳಿದಿರುವ ಕ್ರಿಕೆಟ್‌ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌. ರಾಹುಲ್‌ ಇದೀಗ ಟೀಂ ಇಂಡಿಯಾಕ್ಕೆ ಮರಳಿರುವುದು ಭಾರತ ಕ್ರಿಕೆಟ್‌ ತಂಡಕ್ಕೆ ಆನೆ ಬಲ ತಂದಿದೆ. ಮೂವರು ಆಟಗಾರರು ಅನುಭವಿಗಳಾಗಿದ್ದು, ಇಂಗ್ಲೆಂಡ್‌ ನೆಲದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಅದ್ರಲ್ಲೂ ತಂಡವನ್ನು ಯಾವುದೇ ಹಂತದಲ್ಲೂ ಗೆಲುವಿನ ದಡಕ್ಕೆ ಕೊಂಡೊಯ್ಯುವ ತಾಕತ್ತು ಈ ಆಟಗಾರರಿಗಿದೆ.

ಟೆಸ್ಟ್‌, ಟಿ20 ಕ್ರಿಕೆಟ್‌ ಈಗಾಗಲೇ ಗುಡ್‌ಬೈ ಹೇಳಿರುವ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಮುಂಬರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೇ ಕಾರಣದಿಂದಲೇ ಈ ಇಬ್ಬರು ಆಟಗಾರರಿಗೆ ಈ ಬಾರಿಯ ಇಂಗ್ಲೆಂಡ್‌ ಸರಣಿ ಅತ್ಯಂತ ಮಹತ್ವದ್ದಾಗಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇಂಗ್ಲೆಂಡ್‌ ನಲ್ಲಿ ರನ್‌ ಹೊಳೆಯನ್ನೇ ಹರಿಸುವ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳಲ್ಲಿದೆ.

ಕೆಎಲ್‌ ರಾಹುಲ್‌ಗೆ ಮಾಡು ಇಲ್ಲವೇ ಮಡಿ ಸರಣಿ ..!

ಕನ್ನಡಿಗ ಕೆಎಲ್‌ ರಾಹುಲ್‌ ಇಂದಿಗೂ ಭಾರತ ತಂಡದ ಆಪತ್ಬಾಂಧವ.. ಆದರೆ ತಂಡದಲ್ಲಿ ನಡೆಯುತ್ತಿರುವ ರಾಜಕೀಯ ಕೆಎಲ್‌ ರಾಹುಲ್‌ ಅವರ ಕ್ರಿಕೆಟ್‌ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿರಿಸಿದೆ. ಐಪಿಎಲ್‌ನಲ್ಲಿ ಈ ಬಾರಿಯೂ ರಾಹುಲ್‌ ರನ್‌ ಹೊಳೆಯನ್ನೇ ಹರಿಸಿದ್ದಾರೆ. ಆದರೂ ಬಿಸಿಸಿಐ ಆಯ್ಕೆ ಸಮಿತಿ ಮಾತ್ರ, ಕೆಎಲ್‌ ರಾಹುಲ್‌ ಅವರಿಗೆ ಭಾರತ ಟಿ20 ತಂಡದಲ್ಲಿ ಅವಕಾಶ ನೀಡುತ್ತಿಲ್ಲ. ಶುವಂ ದುಬೆ, ಸಂಜು ಸ್ಯಾಮ್ಸನ್‌, ಇಶಾನ್‌ ಕಿಶಾನ್‌, ಶ್ರೇಯಸ್‌ ಅಯ್ಯರ್‌, ವಾಷಿಂಗ್ಟನ್‌ ಸುಂದರ್‌ ಫಾರ್ಮ್‌ ಕಳೆದುಕೊಂಡಿದ್ರೂ ಕೂಡ ಸಾಲು ಸಾಲು ಅವಕಾಶ ನೀಡಲಾಗುತ್ತಿದೆ.

ಸದ್ಯ ಭಾರತ ತಂಡದಲ್ಲಿರುವ ಆಟಗಾರರ ಪೈಕಿ ಟಿ20 ಕ್ರಿಕೆಟ್‌ನಲ್ಲಿ ರಾಹುಲ್‌ ಉತ್ತಮ ರೆಕಾರ್ಡ್‌ ಹೊಂಡಿದ್ದಾರೆ. ಇದುವರೆಗೆ ಒಟ್ಟು 72 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಕೆಎಲ್‌ ರಾಹುಲ್‌ 2265 ರನ್‌ ಸಿಡಿಸಿದ್ದಾರೆ. ಅದರಲ್ಲಿ 22 ಅರ್ಧ ಶತಕ ಹಾಗೂ 2 ಶತಕ ಒಳಗೊಂಡಿದೆ. 99 ಸಿಕ್ಸರ್‌ ಹಾಗೂ 191 ಬೌಂಡರಿ ಬಾರಿಸಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ಕೆಎಲ್‌ ರಾಹುಲ್‌ ಒಟ್ಟು 159 ಪಂದ್ಯಗಳನ್ನು ಆಡಿದ್ದು, ಬರೋಬ್ಬರಿ 5815 ರನ್‌ ಸಿಡಿಸಿದ್ದಾರೆ. ಇದರಲ್ಲಿ 152ರ ರನ್‌ರೇಟ್‌ ನೊಂದಿದೆ. 45 ಅರ್ಧ ಶತಕ ಹಾಗೂ 5 ಶತಕ ಬಾರಿಸಿದ್ದಾರೆ. ಇದರಲ್ಲಿ 508 ಬೌಂಡರಿ ಮತ್ತು 239 ಸಿಕ್ಸರ್‌ ಒಳಗೊಂಡಿದೆ. ಒಂದು ಕಾಲದಲ್ಲಿ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಲ್ಲಿಯೇ 2 ರಾಂಕ್‌ ಪಡೆದಿದ್ದರೂ ಕೂಡ ಭಾರತ ಕ್ರಿಕೆಟ್‌ ತಂಡದಲ್ಲಿ ಮಾತ್ರ ಅವಕಾಶ ಸಿಗ್ತಾ ಇಲ್ಲ. ಇದೇ ಕಾರಣದಿಂದಲೇ ಈ ಬಾರಿಯ ಇಂಗ್ಲೆಂಡ್‌ ಸರಣಿ ರಾಹುಲ್‌ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಭಾರತಕ್ಕೆ ಬೌಲಿಂಗ್‌ ಬಲ ತಂಡ ಯಾರ್ಕರ್‌ ಸ್ಪೆಷಲಿಸ್ಟ್‌ ಬೂಮ್ರಾ

ಹೌದು, ತನ್ನ ವಿಭಿನ್ನ ಶೈಲಿ, ಯಾರ್ಕರ್‌ ಬೌಲಿಂಗ್‌ ಮೂಲಕವೇ ಎದುರಾಳಿ ಆಟಗಾರರನ್ನು ಕಟ್ಟಿ ಹಾಕುವ ತಾಕತ್ತು ಇರೋದು ಜಸ್ಪ್ರಿತ್‌ ಬೂಮ್ರಾಗೆ ಮಾತ್ರ. 89 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಜಸ್ಪ್ರಿತ್‌ ಬೂಮ್ರಾ ಇದುವರೆಗೆ ಒಟ್ಟು 149 ವಿಕೆಟ್‌ ಪಡೆದಿದ್ದಾರೆ. ಹಲವು ತಿಂಗಳ ಬಳಿಕ ಬೂಮ್ರಾ ಇದೀಗ ಟೀಂ ಇಂಡಿಯಾಕ್ಕೆ ಮರಳಿರುವುದು ಆನೆ ಬಲ ತಂದಿದೆ. ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ದದ ಟಿ20 ಸರಣಿಯಲ್ಲಿ ಭಾರತ ಬೌಲಿಂಗ್‌ ಪಡೆ ಅತ್ಯಂತ ದುರ್ಬಲವಾಗಿತ್ತು.

ಭಾರತ ತಂಡ ಆಟಗಾರರು

ಶುಬ್ಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್,
ಶಿವಂ ದುಬೆ, ಪ್ರಸಿದ್ಧ್ ಕೃಷ್ಣ,

ಇಂಗ್ಲೆಂಡ್ ತಂಡ : ಆಟಗಾರರು

ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆ).ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೋ ರೂಟ್, ಜಾಕೋಬ್ ಬೆಥೆಲ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಟಾಮ್ ಬ್ಯಾಂಟನ್, ಜೋಶ್ ಟಂಗ್, ಗಸ್ ಅಟ್ಕಿನ್ಸನ್, ಜೇಮ್ಸ್ ಕೋಲ್ಸ್, ರೆಹಾನ್ ಅಹ್ಮದ್

ind vs eng 1st ODI Kohli Rohit KL rahul Bumrah return

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »