Ind vs Sa Test : ದಕ್ಷಿಣ ಆಫ್ರಿಕಾ ತಂಡದ 2 ದಶಕಗಳ ಕನಸು ನನಸು : ಭಾರತದ ವಿರುದ್ಧ ಐತಿಹಾಸಿಕ ಗೆಲುವು

  • ವರದಿ : ಜೊಬಿನ್‌ ಅಮಾಸೆಬೈಲು

Ind vs Sa Test : ಭಾರತದಲ್ಲಿ ಟೆಸ್ಟ್‌ ಸರಣಿ ಗೆಲ್ಲಬೇಕೆನ್ನುವ ಸೌತ್‌ ಆಫ್ರಿಕಾ ತಂಡದ ಕನಸು ಇಂದು ನನಸಾಗಿದೆ. ಬರೋಬ್ಬರಿ 26 ವರ್ಷಗಳ ಬಳಿಕ ಭಾರತ ವಿರುದ್ದ ಸೌತ್‌ ಆಫ್ರಿಕಾ ಜಯ ಸಾಧಿಸಿದೆ.1999ರಲ್ಲಿ ಭಾರತದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು.

ಇದಾದ ಬಳಿಕ ಒಮ್ಮೆಯೂ ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಗೆದ್ದಿರಲಿಲ್ಲ. ಆದರೆ ಇದೀಗ ಎರಡು ದಶಕಗಳ ನಂತರ ಭಾರತವನ್ನು ಸೋಲಿಸಿ ಟೆಂಬಾ ಬವುಮಾ ಹೊಸ ಇತಿಹಾಸ ನಿರ್ಮಿಸಿದೆ.

ಕೊಲ್ಕತಾದಲ್ಲಿ ನಡೆದ ಈ ಸರಣಿಯ ಮೊದಲ ಮ್ಯಾಚ್‌ ನಲ್ಲಿ ಸೌತ್‌ ಆಫ್ರಿಕಾ ತಂಡ 30 ರನ್‌ ಗಳ ಜಯ ಸಾಧಿಸಿತ್ತು. ನಂತರ ಗುವಾಹಟಿಯಲ್ಲಿ ನಡೆದ 2ನೇ ಟೆಸ್ಟ್‌ ನಲ್ಲಿ ಭಾರತದ ವಿರುದ್ದ 408 ರನ್‌ ಗಳಿಂದ 2-0 ಅಂತರದಲ್ಲಿ ಅಮೋಘ ಜಯ ಸಾಧಿಸಿದೆ.

ಗುವಾಹಟಿಯಲ್ಲಿ ನಡೆದ 2ನೇ ಟೆಸ್ಟ್‌ ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಸೌತ್‌ ಆಫ್ರಿಕಾ ತಂಡವು ಮೊದಲ ಇನಿಂಗ್ಸ್‌ ನಲ್ಲಿ ಬರೋಬ್ಬರಿ 489 ರನ್‌ ಗಳಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನಿಂಗ್ಸ್‌ ಆಡಿದ ಟೀಂ ಇಂಡಿಯಾ 201 ರನ್‌ ಗಳನ್ನು ಗಳಿಸಿತ್ತು,

ಇದನ್ನೂ ಓದಿ : ವಿಶ್ವಕಪ್‌ ವೇಳಾಪಟ್ಟಿ ಪ್ರಕಟ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಲ್ಲ ಒಂದೇ ಒಂದು ಪಂದ್ಯ

ಇದರಿಂದಾಗಿ ಮೊದಲ ಇನಿಂಗ್ಸ್‌ ನಲ್ಲಿ ಟೀಮ್‌ ಇಂಡಿಯಾ 288 ರನ್‌ ಗಳ ಹಿನ್ನಡೆ ಕಂಡಿದೆ. 288 ರನ್‌ ಗಳ ಮುನ್ನಡೆ ಸಾಧಿಸಿದ ಸೌತ್‌ ಆಫ್ರಿಕಾ ತಂಡವು 2ನೇ ಇನಿಂಗ್ಸ್‌ ನಲ್ಲಿ 5 ವಿಕೆಟ್‌ ನಷ್ಟಕ್ಕೆ 260 ರನ್‌ ಪಡೆದು ಡಿಕ್ಲೇರ್‌ ಘೋಷಿಸಿ ಭಾರತ ತಂಡಕ್ಕೆ ಕೊನೇಯ ಇನಿಂಗ್ಸ್‌ ನಲ್ಲಿ 549 ರನ್‌ ಗಳ ಟಾರ್ಗೆಟ್ ನೀಡಿದರು.

ಈ ಟಾರ್ಗೆಟ್‌ ಅನ್ನು ಸ್ವೀಕರಿಸಿದ ಟೀಮ್‌ ಇಂಡಿಯಾ ನಾಲ್ಕನೇ ದಿನದ ಅಂತ್ಯದ ವೇಳೆ ಕೆ ಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈ ಸ್ವಾಲ್ ಅವರ ವಿಕೆಟ್‌ ಕಳೆದುಕೊಂಡಿತು. ನಂತರ ಐದನೇ ದಿನದ ಆರಂಭದಲ್ಲೆ ಕುಲದೀಪ್​​ ಯಾದವ್‌ ಹಾಗೂ ಧ್ರುವ ಜುರೆಲ್‌ ಔಟ್‌ ಆದರು.

ಇದನ್ನೂ ಓದಿ : ಕನ್ನಡಿಗ ಕೆಎಲ್‌ ರಾಹುಲ್‌ ಟೀಂ ಇಂಡಿಯಾ ನಾಯಕ

ಈ ಹಂತದಲ್ಲಿ ಕಣಕ್ಕಿಳಿದ ನಾಯಕ ರಿಷಬ್‌ ಪಂತ್‌ 13 ರನ್‌ ಬಾರಿಸಿದರು , ನಂತರ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೆಜಾ 54 ರನ್‌ ಬಾರಿಸಿದರು , ಅಂತಿಮವಾಗಿ 140 ರನ್‌ ಗಳಿಗೆ ಆಲ್‌ ಔಟ್‌ ಆಗುವ ಮೂಲಕ 408 ರನ್‌ ಹಿನ್ನಡೆಯೊಂದಿಗೆ ಟೀಮ್‌ ಇಂಡಿಯಾ ಸೋಲೊಪ್ಪಿಕೊಂಡಿದೆ.

Ind vs Sa Test South Africa dream comes true Historic win against India

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories