2026ರ ಟಿ 20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಲ್ಲ ಒಂದೇ ಒಂದು ಪಂದ್ಯ

T20 World Cup 2026 : 2026ರ ಟಿ20 ವಿಶ್ವಕಪ್​ ಕ್ರಿಕೆಟ್​ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಫೆಬ್ರವರಿ 7ರಿಂದ ಮಾರ್ಚ್​ 8ರವರೆಗೆ ನಡೆಯಲಿರುವ ಈ ಪಂದ್ಯಗಳ ವೇಳಾಪಟ್ಟಿ ಇದೀಗ ಬಿಡುಗಡೆಯಾಗಿದೆ.

ಬೇಸರದ ವಿಚಾರ ಎಂಬಂತೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಒಂದೇ ಒಂದೂ ಟಿ20 ಪಂದ್ಯಾವಳಿ ನಡೆಯುತ್ತಿಲ್ಲ. ಆರ್​ಎಸ್​ಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳ ಯಶಸ್ವಿ ಆಯೋಜನೆಗೆ ಸಾಕ್ಷಿಯಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆರ್​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದಾಗಿ ಕಪ್ಪು ಚುಕ್ಕೆ ಅಂಟಿದಂತಾಗಿದೆ. ಬಿಸಿಸಿಐ ಕೂಡ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅವಕಾಶ ನೀಡಿರಲಿಲ್ಲ.

ಇದೀಗ ಐಸಿಸಿ ಕೂಡ ಇದೇ ನಿರ್ಧಾರ ಕೈಗೊಂಡಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಈಗಿನ ಬೆಳವಣಿಗೆಗಳನ್ನು ನೋಡುತ್ತಿದ್ದಂತೆ ಮುಂದಿನ ಐಪಿಎಲ್​ ಸೀಸನ್​ನಲ್ಲಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳು ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕನ್ನಡಿಗ ಕೆಎಲ್‌ ರಾಹುಲ್‌ ಟೀಂ ಇಂಡಿಯಾ ನಾಯಕ

ಅತ್ಯಂತ ಸುಸಜ್ಜಿತ ಕ್ರೀಡಾಂಗಣ ಎಂದೇ ಹೆಸರುವಾಸಿಯಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವ ಸೌಲಭ್ಯಗಳು ಮತ್ತೆಲ್ಲೂ ಇಲ್ಲ. ಸಬ್​ ಏರ್​ ಸಿಸ್ಟಂನಂತಹ ತಂತ್ರಜ್ಞಾನದ ಮೂಲಕ ಮಳೆ ಬಂದರೂ 15 ನಿಮಿಷಗಳಲ್ಲಿ ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸುವಂತಹ ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿತ್ತು.

ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡ ದೇಶದ ಮೊಟ್ಟ ಮೊದಲ ಕ್ರೀಡಾಂಗಣ ಎಂಬ ಕೀರ್ತಿ ಕೂಡ ಈ ಮೈದಾನಕ್ಕಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಈ ಶಾಪ ಅಂಟಿದಂತಾಗಿದೆ.

ಇದನ್ನೂ ಓದಿ : ಭಾರತ – ಪಾಕ್‌ ಮಹಾಕದನ ಫಿಕ್ಸ್‌ ! ಟಿ20 ವಿಶ್ವಕಪ್‌ 2026 ವೇಳಾಪಟ್ಟಿ ಪ್ರಕಟ

ಭಾರತ ಮತ್ತು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್​ ಟೂರ್ನಿ ಆಯೋಜಿಸಲಾಗಿದೆ. . ಶ್ರೀಲಂಕಾದ ಕೊಲಂಬೋ ಜೊತೆಗೆ, ಭಾರತದ ಅಹಮದಾಬಾದ್, ಕೋಲ್ಕತ್ತಾ, ಮುಂಬೈ, ದೆಹಲಿ ಮತ್ತು ಚೆನ್ನೈ ನಗರಗಳ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.

T20 World Cup 2026 schedule announced not a single match at M Chinnaswamy Stadium in Bengaluru

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories