ರಾಜಸ್ಥಾನ ರಾಯಲ್ಸ್‌ಗೆ ಗುಡ್‌ಬೈ : ಧೋನಿ ಉತ್ತರಾಧಿಕಾರಿಯಾಗಿ ಸಂಜು ಸ್ಯಾಮ್ಸನ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL) 2026ಕ್ಕೆ ಹಲವು ಬದಲಾವಣೆ ನಿರೀಕ್ಷಿಸಲಾಗುತ್ತಿದೆ. ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ತಂಡಕ್ಕೆ ಕೈಕೊಡಲು ರೆಡಿಯಾಗಿದ್ದಾರೆ. ಹಾಗಾದ್ರೆ ಸ್ಯಾಮ್ಸನ್‌ ಮಹೇಂದ್ರ ಸಿಂಗ್‌ ಧೋನಿಯ ಉತ್ತರಾಧಿಕಾರಿ ಆಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ.

ಸಂಜು ಸ್ಯಾಮ್ಸನ್‌ ಈಗಾಗಲೇ ಸಂಜು ಸ್ಯಾಮ್ಸನ್ ಆರ್‌ಆರ್ ತೊರೆಯಲು ವಿನಂತಿಸಿದ್ದಾರೆ. ತಾವು ಆರ್‌ಆರ್‌ ತೊರೆದು ಬೇರೆ ತಂಡವನ್ನು ಸೇರ್ಪಡೆ ಆಗೋದಕ್ಕೆ ಉತ್ಸುಕರಾಗಿದ್ದಾರೆ. ಸಂಜು ಸ್ಯಾಮ್ಸನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೇರುವ ಸಾಧ್ಯತೆಯಿದೆ.

ಐಪಿಎಲ್ 2026 ರ ಸೀಸನ್‌ಗೆ ಮುಂಚಿತವಾಗಿ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್‌ಗೆ ಔಪಚಾರಿಕವಾಗಿ ತಮ್ಮನ್ನು ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ ಎನ್ನಲಾಗುತ್ತಿದೆ. ಆಟಗಾರ ಮತ್ತು ಫ್ರಾಂಚೈಸಿ ನಡುವಿನ ಬಿರುಕಿನ ಕಾರಣಕ್ಕೆ ಈ ನಿರ್ಧಾರ ಎನ್ನಲಾಗುತ್ತಿದೆ.

ಸಂಜು ಸ್ಯಾಮ್ಸನ್ ಫ್ರಾಂಚೈಸಿ ತೊರೆಯುವ ಇಚ್ಛೆಯನ್ನು ತಿಳಿಸಿದ್ದಾರೆ. ಅವರು ಇತರ ತಂಡಕ್ಕೆ ವಿನಿಮಯ ಅಥವಾ ಹರಾಜು ಪೂಲ್‌ಗೆ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ. ಸ್ಯಾಮ್ಸನ್‌ ಅವರ ಬ್ಯಾಟಿಂಗ್‌ ತಂಡದ ಆಡಳಿತ ಮಂಡಳಿಯ ನಡುವಿನ ವೈಮನಸ್ಸಿಗೆ ಕಾರಣ..

ಇದನ್ನೂ ಓದಿ : ವೈವಾಹಿಕ ಜೀವನ ಅಂತ್ಯ ಮಾಡಿದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ

ಭಾರತ ಕ್ರಿಕೆಟ್‌ನ ಟಿ20 ತಂಡದ ಆರಂಭಿಕ ಆಟಗಾರ. ಆದರೆ ರಾಯಲ್ಸ್ ತಂಡ ಐಪಿಎಲ್ 2025 ರ ಋತುವಿನಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೆ ವೈಭವ್ ಸೂರ್ಯವಂಶಿ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿತ್ತು. ಇದು ಸಂಜು ಸ್ಯಾಮ್ಸನ್‌ ಬೇಸರಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಐಪಿಎಲ್‌ 2027ರ ವರೆಗೂ ಸಂಜು ಸ್ಯಾಮ್ಸನ್‌ ಅವರು ರಾಜಸ್ಥಾನ ರಾಯಲ್ಸ್‌ ತಂಡದ ಭಾಗವಾಗಿದ್ದಾರೆ. ಸಂಜು ಸ್ಯಾಮ್ಸನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡುವ ಅಂತಿಮ ನಿರ್ಧಾರ ರಾಜಸ್ಥಾನ ತಂಡದ್ದಾಗಿದೆ. ತಂಡ ಅವರನ್ನು ಬಿಡುಗಡೆ ಮಾಡದೇ ಉಳಿಸಿಕೊಳ್ಳಲು ಅವಕಾಶವಿದೆ.

ರಾಜಸ್ಥಾನ ರಾಯಲ್ಸ್‌ ತಂಡದ ಮಾಲೀಕ ಮನೋಜ್‌ ಬಡಾಲೆ ಹಾಗೂ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ನವೆಂಬರ್‌ ಅಂತ್ಯದ ಒಳಗಾಗಿ ತಂಡದಲ್ಲಿ ಉಳಿಸಿಕೊಳ್ಳುವ ಕುರಿತು ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

ಸಿಎಸ್‌ಕೆ ತಂಡಕ್ಕೆ ಸಂಜು ಸ್ಯಾಮ್ಸನ್‌

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಕುರಿತು ಈಗಾಗಲೇ ಆಸಕ್ತಿ ತೋರಿಸಿದೆ. ಎಂಎಸ್‌ ಧೋನಿ ಅವರು ತಂಡದಿಂದ ದೂರು ಉಳಿಯುವ ಸಾಧ್ಯತೆಯಿದ್ದು, ಅವರ ಉತ್ತರಾಧಿಕಾರಿಯಾಗಿ ಸ್ಯಾಮ್ಸನ್‌ ಆಯ್ಕೆಯಾಗುವ ಸಾಧ್ಯತೆಯಿದೆ.

ಆದರೆ ಸಿಎಸ್‌ಕೆ ತಂಡ ಯಾವ ಆಟಗಾರನನ್ನು ಸ್ಯಾಮ್ಸನ್‌ ಜೊತೆಗೆ ವಿನಿಯಮ ಮಾಡಿಕೊಳ್ಳಲಿದೆ ಅನ್ನೋ ಇನ್ನೂ ನಿರ್ಧಾರವಾಗಿಲ್ಲ. ಮಹೇಂದ್ರ ಸಿಂಗ್‌ ಧೋನಿ ಅವರು ಈಗಾಗಲೇ ಐಪಿಎಲ್‌ ಗೆ ಗುಡ್‌ಬೈ ಹೇಳ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ : ಭಾರತ ಏಕದಿನ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ರುತುರಾಜ್‌ ಗಾಯಕ್ವಾಡ್‌ ನಾಯಕನಾಗಿ ಮುನ್ನೆಡೆಸಿದ್ದರು ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದೇ ಕಾರಣದಿಂದಲೇ ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಕರೆತಂದು ನಾಯಕತ್ವ ನೀಡುವ ಸಾಧ್ಯತೆಯಿದೆ.

ಸಂಜು ಸ್ಯಾಮ್ಸನ್‌ ಅವರು ಆರ್‌ಆರ್‌ ತಂಡವನ್ನು ತೊರೆದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೇರ್ಪಡೆಯ ನಿರ್ಧಾರ ಅಂತಿಮ ಆಗೋದು ಆರ್‌ಆರ್‌ ತಂಡದ ಆಡಳಿತ ಮಂಡಳಿಯ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

Sanju Samson requested to leave RR MS Dhoni replacement for IPL 2026

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories