ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಭಾರತೀಯ ಕ್ರಿಕೆಟ್ ತಂಡದ ಏಕದಿನ ನಾಯಕತ್ವದ ಕುರಿತು ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾ ನಂತರದಲ್ಲಿ ತಂಡದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಅನ್ನೋ ಪ್ರಶ್ನೆಗೆ ಸದ್ಯ ಕೆಎಲ್ ರಾಹುಲ್ (KL Rahul) ಹಾಗೂ ಶುಭಮನ್ ಗಿಲ್ (Shubman Gill) ಹೆಸರು ಕೇಳಿಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮಾತ್ರವಲ್ಲ ನಂತರದ ಭಾರತ ಕೈಗೊಂಡ ಸರಣಿಯಲ್ಲಿ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದು, ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲೂ ರಾಹುಲ್ ಭರ್ಜರಿ ಸತತ ಶತಕ ಸಿಡಿಸಿದ್ದಾರೆ.

KL Rahul : ಕೆಎಲ್ ರಾಹುಲ್- ಶುಭಮನ್ ಗಿಲ್ : ಯಾರಿಗೆ ನಾಯಕತ್ವ ?
ಶುಭಮನ್ ಗಿಲ್ ಭಾರತ ಟೆಸ್ಟ್ ತಂಡದ ನಾಯಕ, ಅಲ್ಲದೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಏಕದಿನ ತಂಡದ ನಾಯಕತ್ವಕ್ಕೆ ಗಿಲ್ ಹೆಸರು ಕೂಡ ಕೇಳಿಬಂದಿದೆ.
ಗಿಲ್ ಈಗಾಗಲೇ ಭಾರತ ಏಕದಿನ ತಂಡದ ಅಧಿಕೃತ ಉಪನಾಯಕರಾಗಿದ್ದಾರೆ. ರೋಹಿತ್ ಶರ್ಮಾ ನಂತರದಲ್ಲಿ ಶುಭಮನ್ ಗಿಲ್‌ಗೆ ಟೆಸ್ಟ್ ತಂಡದ ನಾಯಕತ್ವ ನೀಡಲಾಗಿದೆ. ಸದ್ಯ ಬ್ಯಾಟಿಂಗ್‌ನಲ್ಲಿಯೂ ಗಿಲ್ ಮಿಂಚುತ್ತಿದ್ದಾರೆ.
ಇದನ್ನೂ ಓದಿ : ಆಂಗ್ಲರ ವಿರುದ್ದ ಶತಕ ಸಿಡಿಸಿದ ಕೆಎಲ್ ರಾಹುಲ್ : ಹೊಸ ದಾಖಲೆ ಬರೆದ ಕನ್ನಡಿಗ
25 ವರ್ಷ ವಯಸ್ಸಿನ ಶುಭಮನ್ ಗಿಲ್ ಅವರನ್ನು ದೀರ್ಘಾವಧಿಯ ದೃಷ್ಟಿಯಿಂದ ನಾಯಕತ್ವಕ್ಕೆ ಪರಿಗಣಿಸಲಾಗುತ್ತಿದೆ. ಆದರೆ 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಕೆಎಲ್ ರಾಹುಲ್ ಸೂಕ್ತ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
KL Rahul : ಕೆಎಲ್ ರಾಹುಲ್ ಯಾಕೆ ಸೂಕ್ತ ?
ಕೆಎಲ್ ರಾಹುಲ್ ಭಾರತ ಏಕದಿನ ತಂಡದಲ್ಲಿ ಪ್ರಮುಖ ಆಟಗಾರ. ಟೆಸ್ಟ್, ಏಕದಿನ, ಟಿ20 ಹೀಗೆ ಯಾವುದೇ ಸ್ವರೂಪದ ಕ್ರಿಕೆಟ್ ಗೂ ರಾಹುಲ್ ಸೂಟ್ ಆಗ್ತಾರೆ. ಶುಭಮನ್ ಗಿಲ್‌ಗೆ ಹೋಲಿಸಿದ್ರೆ ರಾಹುಲ್ ಭಿನ್ನ ಆಟಗಾರ.
ಕೆಎಲ್ ರಾಹುಲ್ ಈಗಾಗಲೇ ಭಾರತ ಕ್ರಿಕೆಟ್ ತಂಡವನ್ನು ಮುನ್ನೆಡೆಸಿದ್ದಾರ. ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವು ಕಂಡಿದ್ರೆ,ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ರಾಹುಲ್ ಗೆ ಹಿನ್ನಡೆ ತರಿಸಿದೆ.
ಭಾರತ ಕ್ರಿಕೆಟ್ ತಂಡದ ನಾಯಕನಾಗಿ 7 ಏಕದಿನ ಪಂದ್ಯಗಳಲ್ಲಿ ಅವರು 4 ಗೆಲುವುಗಳು ಮತ್ತು 3 ಸೋಲುಗಳ ಅನುಭವಿಸಿದ್ದಾರೆ. ಅಷ್ಟೇ ಅಲ್ಲಾ ಏಕದಿನ ತಂಡ ಉಪನಾಯಕನಾಗಿಯೂ ಕೆಲಸ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಉತ್ತಮ ಸಾಧನೆ ತೋರಿದ್ದಾರೆ. ಗಿಲ್ ಗೆ ಹೋಲಿಸಿದ್ರೆ ರಾಹುಲ್ ಹೆಚ್ಚು ಅನುಭವಿ ಆಟಗಾರ.
ಆದರೆ ಕನ್ನಡಿಗ ಆಟಗಾರನಿಗೆ ಫಿಟ್ನೆಸ್ ಸಮಸ್ಯೆ ದೊಡ್ಡ ತಲೆನೋವಾಗಿತ್ತು. ಇದೇ ಕಾರಣದಿಂದ ಹಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಫಿಟ್ನೆಸ್ ಸಮಸ್ಯೆ ಇಲ್ಲದಿದ್ರೆ ರಾಹುಲ್ ಭಾರತ ತಂಡದ ಖಾಯಂ ನಾಯಕ.
Also Read : ಶುಭಮನ್ ಗಿಲ್ ಸತತ ಶತಕ : ಸುನಿಲ್ ಗವಾಸ್ಕರ್ ದಾಖಲೆ ಉಡೀಸ್
ರೋಹಿತ್ ಶರ್ಮಾ ಏಕದಿನ ನಾಯಕತ್ವದಿಂದ ಕೆಳಗಿಳಿದರೆ, ಶುಭಮನ್ ಗಿಲ್ ಅವರ ಪ್ರಸ್ತುತ ಉಪನಾಯಕತ್ವ, ಟೆಸ್ಟ್ ನಾಯಕನಾಗಿ, ಸ್ಥಿರ ಫಾರ್ಮ್ ನಿಂದ ನಾಯಕತ್ವಕ್ಕೆ ಸ್ಪಷ್ಟ ಉತ್ತರಾಧಿಕಾರಿಯಾಗಬಹುದು.
ಆದರೆ ಕೆಎಲ್ ರಾಹುಲ್ ಒಬ್ಬ ಸಮರ್ಥ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮೂರು ಪ್ರಕಾರಕ್ಕೂ ಮೂರು ನಾಯಕರನ್ನು ಆಯ್ಕೆ ಮಾಡಬೇಕೆಂಬ ಅನ್ನೋ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
ಟಿ20 ತಂಡವನ್ನು ಸೂರ್ಯ ಕುಮಾರ್ ಯಾದವ್ ಮುನ್ನೆಡೆಸುತ್ತಿದ್ರೆ, ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ನಾಯಕರಾಗಿದ್ದಾರೆ. ಸದ್ಯ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದರೂ ಕೂಡ, ಅವರ ನಂತರದಲ್ಲಿ ರಾಹುಲ್ ಆಯ್ಕೆಯಾಗುವ ಸಾಧ್ಯತೆಯಿದೆ.

ಕೆಎಲ್ ರಾಹುಲ್- ಶುಭಮನ್ ಗಿಲ್ : ಬಲಾಬಲ
ಶುಭಮನ್ ಗಿಲ್
ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಸ್ಥಿರವಾಗಿ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಮತ್ತು ದ್ವಿಶತಕವನ್ನೂ ಗಳಿಸಿದ್ದಾರೆ.
ಬ್ಯಾಟಿಂಗ್ ತಂತ್ರ ಮತ್ತು ರನ್ ಗಳಿಸುವ ಸಾಮರ್ಥ್ಯ ಅವರನ್ನು ಟಾಪ್ ಆರ್ಡರ್‌ನಲ್ಲಿ ಅತ್ಯಂತ ಪರಿಣಾಮಕಾರಿ ಆಟಗಾರರನ್ನಾಗಿ ಮಾಡಿದೆ. ಅವರು ಯುವಕರಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.
ಕೆಎಲ್ ರಾಹುಲ್:
ರಾಹುಲ್ ಬಹುಮುಖಿ ಆಟಗಾರ. ಅವರು ಮಧ್ಯಮ ಕ್ರಮಾಂಕದಲ್ಲಿ (ಸಾಮಾನ್ಯವಾಗಿ 4 ಅಥವಾ 5ನೇ ಕ್ರಮಾಂಕದಲ್ಲಿ) ಹೆಚ್ಚು ಯಶಸ್ವಿಯಾಗಿದ್ದಾರೆ, ವಿಶೇಷವಾಗಿ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ.
ಕಠಿಣ ಪರಿಸ್ಥಿತಿಗಳಲ್ಲಿ ತಂಡವನ್ನು ಮುನ್ನಡೆಸುವ ಮತ್ತು ಪಂದ್ಯವನ್ನು ಮುಗಿಸುವ ಸಾಮರ್ಥ್ಯ ಅವರಿಗಿದೆ. ಟೆಸ್ಟ್ ಮತ್ತು ಟಿ20 ಸ್ವರೂಪಗಳಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ.
KL Rahul : ನಾಯಕತ್ವದಲ್ಲಿ ಯಾರು ಉತ್ತಮ?
ಶುಭಮನ್ ಗಿಲ್:
ಇತ್ತೀಚೆಗೆ ಗಿಲ್ ಅವರನ್ನು ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ ಮತ್ತು ಏಕದಿನ ತಂಡದ ಉಪನಾಯಕರಾಗಿದ್ದಾರೆ.
BCCI ಅವರಿಗೆ ದೀರ್ಘಾವಧಿಯ ನಾಯಕತ್ವದ ಪಾತ್ರವನ್ನು ನೀಡಲು ಉತ್ಸುಕವಾಗಿದೆ ಎಂಬುದನ್ನು ಸೂಚಿಸುತ್ತದೆ. ಅವರು IPL ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.
ಕೆಎಲ್ ರಾಹುಲ್:
ರಾಹುಲ್ ಭಾರತ ಏಕದಿನ ತಂಡವನ್ನು ಕೆಲವು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ನಾಯಕತ್ವದ ಅನುಭವ ಅವರಿಗಿದೆ, ಆದರೆ ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಮಿಶ್ರಿತವಾಗಿದೆ. ಅವರ ಫಿಟ್ನೆಸ್ ಸಹ ನಾಯಕತ್ವದ ವಿಚಾರದಲ್ಲಿ ಒಂದು ಅಡಚಣೆಯಾಗಿದೆ.
KL Rahul is the captain of India ODI cricket team in Kannada News



