ಪಥ ಬದಲಾಯಿಸಿದ ಶನಿ, ಬಾಬಾರ ಪೊಟೋದಲ್ಲಿ ಇದೆಂಥಾ ಪವಾಡ !

0

ಧಾರವಾಡ : ಇಂದು ಶನಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ ಪಥ ಬದಲಾಯಿಸೋ ಹೊತ್ತಲ್ಲಿ ಜನರೆಲ್ಲಾ ಶನಿದೇವರ ಆರಾಧನೆಯಲ್ಲಿ ತೊಡಗಿದ್ದಾರೆ. ಆದರೆ ಧಾರವಾಡದಲ್ಲಿ ಮಾತ್ರ ಪುಟ್ಟಪರ್ತಿಯ ಭಗವಾನ ಸತ್ಯಸಾಯಿ, ಭಕ್ತರನ್ನು ತಮ್ಮತ್ತ ಸೆಳೆದಿದ್ದಾರೆ. ಜೀವಿತಾವಧಿಯಲ್ಲಿ ಪವಾಡಗಳಿಗೆ ಖ್ಯಾತರಾಗಿದ್ದ ಸತ್ಯಸಾಯಿ ಬಾಬಾ ಕಾಲವಾದ ನಂತರೂ ಪವಾಡಗಳ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ ಅನ್ನೋದನ್ನು ಧಾರವಾಡದಲ್ಲಿ ಒಂದು ಅಚ್ಚರಿಯ ಪವಾಡದ ಮೂಲಕ ಸಾಬೀತು ಮಾಡಿದ್ದಾರೆ.

ಧಾರವಾಡದ ಕೆಸಿಡಿ ಕಾಲೇಜಿನಿಂದ ದ ಸಪ್ತಾಪುರವರೆಗೆ ಇರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿರೋ ಸತ್ಯಸಾಯಿ ಚರಣ ಮಂದಿರಕ್ಕೆ ನಿನ್ನೆಯಿಂದಲೇ ಜನಸಾಗರವೇ ಹರಿದುಬರುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿರೋದಕ್ಕೆ ಕಾರಣವಾಗಿರೋ ಸಾಯಿ ಚರಣ ಮಂದಿರದಲ್ಲಿರುವ ಬಾಬಾರ ಫೋಟೋದಲ್ಲಿ ನಡೆದಿರುವ ಒಂದು ಪವಾಡ.


ಹೌದು, ಇಲ್ಲಿರುವ ಸತ್ಯಸಾಯಿ ಅವರ ಭಾವಚಿತ್ರದಲ್ಲಿ ಎಡಗೈಯಿಂದ ಅಮೃತ ಎಂದು ಹೇಳಲಾಗುವ ಸಿಸಿ ಸಿಹಿಯಾದ ದ್ರಾವಣ ನೀರಿನಂತೆ ತೊಟ್ಟಿಕ್ಕುತ್ತಿದೆ. ಕೈ ಕೆಳಭಾಗದಿಂದ ತೊಟ್ಟಿಕ್ಕಿ ಬರುತ್ತಿದ್ದು, ಇದನ್ನು ಪವಾಡ ಎಂದು ಜನ ನಂಬಿ ಜನ ಕೈ ಮುಗಿಯುತ್ತಿದ್ದಾರೆ. ಬಾಬಾರ ಪವಾಡವನ್ನು ನೋಡೋದಕ್ಕೆ ತಂಡೋಪ ತಂಡವಾಗಿ ಬರುತ್ತಿದ್ದಾರೆ. 1974 ಮಾರ್ಚ್ 8 ರಂದು ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರು ಇದೇ ಶಿಕ್ಷಣ ಸಂಸ್ಥೆಯ ಜಾಗದಲ್ಲಿರೋ ಹುಣಸೆಮರದ ಕೆಳಗೆ ನಿಂತುಕೊಂಡು ಪ್ರವಚನ ಕೊಟ್ಟಿದ್ದರು. ಸದ್ಯ ಅದೇ ಪ್ರದೇಶದಲ್ಲೀಗ ಪವಾಡ ನಡೆಯುತ್ತಿದೆ. ಈ ಜಾಗದಲ್ಲಿ ಪುಟ್ಟಪರ್ತಿ ಸತ್ಯಸಾಯಿ ಅವರ ಪಾದುಕೆಗಳನ್ನು ತಂದಿಟ್ಟು, ಕಳೆದ 4 ವರ್ಷದಿಂದ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಜನವರಿ 22 ರಂದು ಇಷ್ಟ ಸಿದ್ಧಿ ಪೂಜಾ ವ್ರತವನ್ನು ನೆರವೇರಿಸಲಾಗಿತ್ತು. ಭಕ್ತರೆಲ್ಲ ಸೇರಿ ಪೂಜೆ ಮಾಡಿದ ಮರುದಿನದಿಂದಲೇ ಈ ಪವಾಡ ನಡೆಯುತ್ತಿದೆ ಎನ್ನುತ್ತಾರೆ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಕೃಷ್ಣಮೂರ್ತಿ.

ಇನ್ನು ಪೂಜೆ ಮಾಡಿದ ಮರುದಿನ ಫೋಟೋದಲ್ಲಿ ಸಿಹಿ ನೀರಿನಂತಹ ಅಮೃತ ಬರುತ್ತಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಈ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಜನ ತಂಡೋಪ ತಂಡವಾಗಿ ಬಂದು ಬಾಬಾ ಪವಾಡ ವೀಕ್ಷಿಸುತ್ತಿದ್ದಾರೆ. ಅಲ್ಲದೇ ಈ ಜಾಗದಲ್ಲಿ ಭಗವಾನ ಸತ್ಯಸಾಯಿ ಅವರು ಬಂದು ಪ್ರವಚನ ಮಾಡಿ ಹೋಗಿರುವ ಹಿನ್ನೆಲೆ ಇರುವುದರಿಂದ ಇಲ್ಲಿ ಬಾಬಾ ಜೀವತಂವಾಗಿದ್ದಾರೆ. ಈ ಮೂಲಕ ತಾನು ಅಮರ ಅನ್ನೋದನ್ನು ಅವರು ತೋರಿಸಿಕೊಟ್ಟಿದ್ದಾರೆ ಎನ್ನುವುದು ಭಕ್ತರ ನಂಬಿಕೆ.

ಒಟ್ಟಾರೆಯಾಗಿ ಎಲ್ಲರೂ ಶನಿ ದೇವರ ಆರಾಧನೆಯಲ್ಲಿ ತೊಡಗಿರುವ ಹೊತ್ತಿನಲ್ಲಿಯೇ ಸತ್ಯಸಾಯಿಯವರು ತಮ್ಮ ಪವಾಡದ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದು, ತಮ್ಮ ಪವಾಡಗಳು ನಾನು ಕಾಲವಾದ ನಂತರವೂ ನಿಲ್ಲುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಂತೂ ಸುಳ್ಳಲ್ಲ.

ಪುಟ್ಟಪರ್ತಿಯ ಭಗವಾನ ಸತ್ಯಸಾಯಿ ವಿಡಿಯೋ :

https://youtu.be/irEYFhWDblU
https://youtu.be/Z-iO3bEXS3s

Leave A Reply

Your email address will not be published.