ಪೊಲೀಸರಿಗೆ ಶರಣಾದ ಮಂಗಳೂರು ಬಾಂಬರ್

0

ಬೆಂಗಳೂರು : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಬಾಂಬರ್ ಪೊಲೀಸರಿಗೆ ಶರಣಾಗಿದ್ದಾರೆ.
ಮಣಿಪಾಲ ಮೂಲದ ಆದಿತ್ಯ ರಾವ್ ಬಂಧಿತ ಆರೋಪಿ. ಇಂದು ಬೆಳಗ್ಗೆ ಆದಿತ್ಯ ರಾವ್ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದಾತನನ್ನು ಉಡುಪಿಯ ಮಣಿಪಾಲ ಮೂಲದ ಎಂಜಿನಿಯರ್ ಆಗಿರುವ ಆದಿತ್ಯ ರಾವ್ ಎಂದು ಗುರುತಿಸಲಾಗಿದೆ. ಈ ಹಿಂದೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿಯೂ ಹುಸಿಬಾಂಬ್ ಕರೆ ಮಾಡಿ 9 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಜೈಲುವಾಸ ಬಳಿಕ ಕೆಲಸ ಸಿಗದೇ ಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.

ನಿನ್ನೆ ರಾತ್ರಿ ಹತ್ತಿಕೊಂಡು ಬೆಂಗಳೂರಿಗೆ ಬಂದಿದ್ದ ಆದಿತ್ಯರಾವ್ ಇಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ನಿನ್ನೆಯೇ ಆದಿತ್ಯ ರಾವ್ ಈ ಕೃತ್ಯವನ್ನು ಮಾಡಿರೋ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿಯೇ ಆದಿತ್ಯ ರಾವ್ ಪೊಲೀಸರ ಮುಂದೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಇನ್ನು ಆದಿತ್ಯ ರಾವ್ ಎಲ್ಲಿ ಬಾಂಬ್ ಸಿದ್ದಪಡಿಸಿದ್ದ, ಬಾಂಬ್ ಇರಿಸಿರುವ ಹಿನ್ನೆಲೆಯೇನು ? ಬಾಂಬ್ ತಯಾರಿಕೆಯ ಹಿಂದೆ ಈತನಿಗೆ ಯಾರೆಲ್ಲಾ ಸಹಕಾರ ನೀಡಿದ್ದಾರೆ ಎನ್ನವ ಬಗ್ಗೆಯೂ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.