ಹೋಟೆಲ್ ನಲ್ಲೇ ಸಿದ್ದವಾಗಿತ್ತು ಬಾಂಬ್ ! ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಗ ಹೀಗೆ ಮಾಡಿದ್ಯಾಕೆ ?

0

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರೋ ಪ್ರಕರಣಕ್ಕೆ ಸಂಬಂಧ ಉಡುಪಿ ಜಿಲ್ಲೆಯ ಮಣಿಪಾಲ ಹುಡ್ಕೋ ನಿವಾಸಿ ಆದಿತ್ಯ ರಾವ್ ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ, ವಿಮಾನ ನಿಲ್ದಾಣದಲ್ಲಿ ಇರಿಸಿದ್ದ ಬಾಂಬ್ ಮಂಗಳೂರಿನ ಹೋಟೆಲ್ ನಲ್ಲಿ ಸಿದ್ದಪಡಿಸಿದ್ದ ಎನ್ನಲಾಗುತ್ತಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರನಾಗಿರೋ ಆದಿತ್ಯರಾವ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಿದ್ದ. ಆದರೆ ವಿಮಾನ ನಿಲ್ದಾಣದಲ್ಲಿ ಕೆಲಸ ಸಿಗದೇ ಇದ್ದಾಗ ಅಲೆದಾಡುತ್ತಿದ್ದ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಮಾಡುತ್ತಿದ್ದ. ಕೆಲಸ ಸಿಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇದೇ ವೇಳೆಯಲ್ಲಿಯೇ ಈ ಹಿಂದೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಕರೆ ಮಾಡಿ 2 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ. 9 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆದಿತ್ಯರಾವ್ ಇತ್ತೀಚಿಗಷ್ಟೇ ಮಂಗಳೂರಿಗೆ ಬಂದು ನೆಲೆಸಿದ್ದ.

ಮಂಗಳೂರಿನ ಹೋಟೆಲ್ ಹೋಟೆಲ್ ನ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ ರಾವ್ ಹೋಟೆಲ್ ನಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಆನ್ ಲೈನ್ ನಲ್ಲಿ ಬಿಳಿ ಬಣ್ಣದ ಪೌಡರ್ ವೊಂದನ್ನು ಆರ್ಡರ್ ಮಾಡಿದ್ದ ಆದಿತ್ಯರಾವ್ ಹೋಟೆಲ್ ನಲ್ಲಿಯೇ ಬಾಂಬ್ ತಯಾರಿಸಿದ್ದ ಅನ್ನೋ ಮಾಹಿತಿಯಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇನ್ನು ಆದಿತ್ಯ ರಾವ್ ತಂದೆ ನಿವೃತ್ತ ಬ್ಯಾಂಕ್ ಮ್ಯಾನೇಜರ್, ಅಣ್ಣ ಮೂಡಬಿದಿರೆಯಲ್ಲಿ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆದಿತ್ಯ ರಾವ್ ತಾಯಿ ಕ್ಯಾನ್ಸರ್ ನಿಂದ ಇತ್ತೀಚಿಗಷ್ಟೇ ನಿಧನರಾಗಿದ್ದರು. ತಾಯಿಯ ನಿಧನದ ನಂತರ ಆದಿತ್ಯರಾವ್ ಮಂಗಳೂರಿಗೆ ಬಂದು ನೆಲೆಸಿದ್ದ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಈತ ಯಾವ ಕಾರಣಕ್ಕೆ ಬಾಂಬ್ ಇರಿಸಿದ್ದಾನೆ ಅನ್ನೋ ಕುರಿತು ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಬಾಂಬ್ ತಯಾರಿಕೆಯ ಹಿಂದೆ ಆದಿತ್ಯ ರಾವ್ ಗೆ ಯಾರೆಲ್ಲಾ ಸಹಕಾರ ನೀಡಿದ್ದಾರೆ ಅನ್ನೋ ಹಿನ್ನೆಲೆಯಲ್ಲಿಯೂ ತನಿಖೆ ನಡೆಯುತ್ತಿದೆ.

Leave A Reply

Your email address will not be published.