6 people of same family dead : ಒಂದೇ ಕುಟುಂಬದ 6 ಮಂದಿ ) ಅನುಮಾನಾಸ್ಪದ ಸಾವು

ನವದೆಹಲಿ: ಅಂಬಾಲಾದ ಬುಲಾನಾ ಗ್ರಾಮದಲ್ಲಿ ಒಂದೇ ಕುಟುಂಬದ ಆರು ಮಂದಿ (6 people of same family dead) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸೀನ್ ಆಫ್ ಕ್ರೈಂ ತಂಡ ಮತ್ತು ಸದರ್ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಒಂದೇ ಕುಟುಂಬದ 6 ಜನರ ಮೃತದೇಹ ಮನೆಯಲ್ಲಿ ಪತ್ತೆ. ಹೃದಯ ವಿದ್ರಾವಕ ಪ್ರಕರಣವೊಂದು ಹರಿಯಾಣದ ಅಂಬಾಲಾದಿಂದ ಬೆಳಕಿಗೆ ಬಂದಿದೆ.

ಒಂದೇ ಕುಟುಂಬದ 6 ಮಂದಿ (6 people of same family dead) ಅನುಮಾನಾಸ್ಪದವಾಗಿ ಶವವಾಗಿ ಸಾವನ್ನಪ್ಪಿದ್ದರಿಂದ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಈ ಸಂಪೂರ್ಣ ವಿಷಯ ಹರಿಯಾಣದ ಅಂಬಾಲಾದ ಬುಲಾನಾ ಗ್ರಾಮದ್ದು. ಮೃತರನ್ನು ಸಂಗತ್ ರಾಮ್ (65), ಅವರ ಪತ್ನಿ ಮಹೀಂದ್ರಾ ಕೌರ್, ಸುಖ್ವಿಂದರ್ ಸಿಂಗ್ (34) ಮತ್ತು ಅವರ ಪತ್ನಿ ರೀನಾ ಎಂದು ಗುರುತಿಸಲಾಗಿದೆ. ಮೃತರಲ್ಲಿ ಸುಖ್ವಿಂದರ್ ಸಿಂಗ್ ಅವರ ಇಬ್ಬರು ಪುತ್ರಿಯರಾದ ಆಶು (5) ಮತ್ತು ಜಸ್ಸಿ (7) ಕೂಡ ಸೇರಿದ್ದಾರೆ.ಅಲ್ಲಿ ಒಂದು ಕುಟುಂಬ ರಾತ್ರಿ ಊಟದ ನಂತರ ಮಲಗಿದೆ, ಆದರೆ ಮರುದಿನ ಬೆಳಿಗ್ಗೆ ಎದ್ದೇಳಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಸೂಸೈಡ್ ನೋಟ್ ಪತ್ತೆ:

ಮೃತರನ್ನು ಸಂಗತ್ ರಾಮ್ ಸಿಂಗ್, ಅವರ ಪತ್ನಿ ಮಹೀಂದ್ರಾ ಕೌರ್, ಸಂಗತ್ ಸಿಂಗ್ ಅವರ ಪುತ್ರ ಸುಖ್ವಿಂದರ್ ಸಿಂಗ್, ಅವರ ಪತ್ನಿ ರೀನಾ ಮತ್ತು ಅವರ ಇಬ್ಬರು ಪುತ್ರಿಯರು ಎಂದು ಗುರುತಿಸಲಾಗಿದೆ. ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ. ಸದ್ಯ ಈ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ಏನೂ ಹೇಳದೆ ಸುಮ್ಮನಿದ್ದಾರೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಮೂಲಕ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 6G ಲಾಂಚ್, ಪ್ರಧಾನಿ ಮೋದಿ ಘೋಷಣೆ

“ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಆರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಪರಾಧ ತಂಡವನ್ನು ಕರೆಸಲಾಗಿದೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆತ್ಮಹತ್ಯೆಗೆ ಕಾರಣವನ್ನು ಹುಡುಕುತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಂಬಾಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಶರ್ಮಾ ತಿಳಿಸಿದ್ದಾರೆ.

6 people of same family dead body found in home

Comments are closed.