A terrible road accident : ಭೀಕರ ರಸ್ತೆ ಅಪಘಾತ : 6 ಮಂದಿ ಸಾವು, ಮೂವರು ಗಂಭೀರ

ಬೀದರ್‌ : (A terrible road accident)ಐಶರ್‌ ವಾಹನ ಮತ್ತು ಆಟೋ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು , ಆರು ಮಂದಿ ಸಾವನ್ನಪ್ಪಿದ್ದು , ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಧಾರುಣ ಘಟನೆ ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಮ್ಮಳಖೇಡ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ . ಅಪಘಾತದಲ್ಲಿ(A terrible road accident) ಐದು ಮಂದಿ ಕೂಲಿ ಕಾರ್ಮಿಕರು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದು , ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ . ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ . ಇನ್ನೂ 8 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಟ್ಟು ಆರು ಮಂದಿ ಅಪಘಾತ(A terrible road accident)ದಲ್ಲಿ ಸಾವನ್ನಪ್ಪಿದ್ದು , ಪ್ರಭಾವತಿ (36), ಯಾದಮ್ಮ(40) , ಗುಂಡಮ್ಮ(52) ,ಜಕ್ಕಮ್ಮ(32) , ರುಕ್ಮಿಣಿ(60) ಎನ್ನುವವರು ಸಾವಿಗೀಡಾದವರು . ಇನ್ನೋರ್ವ ಮೃತರ ಹೆಸರು ತಿಳಿದು ಬಂದಿಲ್ಲ . ಮೃತರಾದ ಆರು ಮಂದಿ ಸೇರಿ ಗಾಯಾಳುಗಳು ಮೂಲತಃ ಚಿಟಗುಪ್ಪ ತಾಲೂಕಿನ ಉಡುಮನಹಳ್ಳಿ ಗ್ರಾಮದವರು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾಹಿತಿ ನೀಡಿದ್ದಾರೆ .

ಇದನ್ನೂ ಓದಿ : Umesh Reddy: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದು: ಸುಪ್ರೀಂಕೋರ್ಟ್ ಆದೇಶ

ಕೂಲಿ ಕಾರ್ಮಿಕ ಮಹಿಳೆಯರು ಕೆಲಸ ಮುಗಿಸಿ ಸಂಜೆಯ ವೇಳೆ ತಮ್ಮ ಮನೆಗೆ ಆಟೋ ಒಂದರಲ್ಲಿ ತೆರಳುವಾಗ ಎದುರುಗಡೆಯಿಂದ ಐಶರ್‌ ವಾಹನವೊಂದು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ . ನಡೆದ ಭೀಕರ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು , ನಾಲ್ಕು ಮಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ . ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ .

ಇದನ್ನೂ ಓದಿ : Death due to crane collapse : ಕ್ರೇನ್ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಕಾರ್ಮಿಕರು ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಮತ್ತೊಬ್ಬರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ .

ಇದನ್ನೂ ಓದಿ : A terrible accident : ಕಾರು – ಬಸ್ ನಡುವೆ ಭೀಕರ ಅಪಘಾತ  : 11‌ಮಂದಿ ದಾರುಣ ಸಾವು

ಈ ದುರ್ಘಟನೆ ಬೆಮಳಖೇಡಾ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು , ಈ ಘಟನೆಯ ಕುರಿತು ಬೆಮಳಖೇಡಾ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಈ ಕುರಿತು ಪೋಲೀಸ್‌ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದು , ಘಟನೆಗೆ ನಿಖರವಾದ ಕಾರಣ ತಿಳಿಯಬೇಕಿದೆಯಷ್ಟೆ.

(A terrible road accident) A head-on accident occurred between an Eicher vehicle and an auto, in which six people were killed and three were seriously injured. The terrible incident occurred on Friday in the area of Bemmalkheda police station in Chitaguppa taluk of Bidar district. In the accident (A terrible road accident), a total of six people including five laborers were killed and three were seriously injured.

Comments are closed.