T20 World Cup 2022: ನಾಳೆ ಭಾರತ Vs ಜಿಂಬಾಬ್ವೆ ಮ್ಯಾಚ್, ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಹಾಕಲಿದೆ ಟೀಮ್ ಇಂಡಿಯಾ

ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಈಗಾಗ್ಲೇ ಸೆಮಿಫೈನಲ್’ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿರುವ ಭಾರತ ತಂಡ, ಸೂಪರ್-12 ಹಂತದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಾಳೆ ಜಿಂಬಾಬ್ವೆ (India vs Zimbabwe) ತಂಡವನ್ನು ಎದುರಿಸಲಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆದ್ದು ಗ್ರೂಪ್-2ರಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ ರೋಹಿತ್ ಶರ್ಮಾ ಬಳಗ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಮೂರನ್ನು ಗೆದ್ದು ಒಂದು ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ ಒಟ್ಟು 6 ಅಂಕಗಳೊಂದಿಗೆ ಗ್ರೂಪ್-2ರಲ್ಲಿ ಅಗ್ರಸ್ಥಾನದಲ್ಲಿದ್ದು, ಈಗಾಗ್ಲೇ ಸೆಮಿಫೈನಲ್ ಟಿಕೆಟ್ ಖಚಿತ ಪಡಿಸಿಕೊಂಡಿದೆ.

ಟಿ20 ವಿಶ್ವಕಪ್’ನಲ್ಲಿ ಭಾರತ

Vs ಪಾಕಿಸ್ತಾನ, 4 ವಿಕೆಟ್ ಗೆಲುವು
Vs ನೆದರ್ಲೆಂಡ್ಸ್, 56 ರನ್ ಗೆಲುವು
Vs ದಕ್ಷಿಣ ಆಫ್ರಿಕಾ, 5 ವಿಕೆಟ್’ಗಳ ಸೋಲು
Vs ಬಾಂಗ್ಲಾದೇಶ, 5 ರನ್ ಗೆಲುವು (DLS ನಿಯಮ)

ಕೊನೆಯ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿಯಾಗಿರುವ ಜಿಂಬಾಬ್ವೆ ಈಗಾಗ್ಲೇ ಟೂರ್ನಿಯಿಂದ ಹೊರ ಬಿದ್ದಿದೆ. ಪಾಕಿಸ್ತಾನ ವಿರುದ್ಧ ಒಂದು ರನ್ ರೋಚಕ ಗೆಲುವು ಸಾಧಿಸಿದ್ದ ಜಿಂಬಾಬ್ವೆ, ಭಾರತದ ಸಾಂಪ್ರದಾಯಿಕ ಎದುರಾಳಿಯ ಸೆಮಿಫೈನಲ್ ಕನಸಿಗೆ ಬಹುತೇಕ ಕೊಳ್ಳಿ ಇಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಅಂಕ ಹಂಚಿಕೊಂಡಿದ್ದ ಜಿಂಬಾಬ್ವೆ, ಆಡಿರುವ 4 ಪಂದ್ಯಗಳಿಂದ ಕೇವಲ 3 ಅಂಕ ಸಂಪಾದಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲದ ಕಾರಣ, ಬಾಂಗ್ಲಾದೇಶ ವಿರುದ್ಧ ಆಡಿದ ತಂಡವೇ ಕಣಕ್ಕಿಳಿಯುವುದು ಖಚಿತ.

ಜಿಂಬಾಬ್ವೆ ವಿರುದ್ಧದ (India vs Zimbabwe) ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

  1. ರೋಹಿತ್ ಶರ್ಮಾ (ನಾಯಕ), 2. ಕೆ.ಎಲ್ ರಾಹುಲ್ (ಉಪನಾಯಕ), 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ಹಾರ್ದಿಕ್ ಪಾಂಡ್ಯ, 6. ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್), 7. ಅಕ್ಷರ್ ಪಟೇಲ್, 8. ರವಿಚಂದ್ರನ್ ಅಶ್ವಿನ್, 9. ಮೊಹಮ್ಮದ್ ಶಮಿ, 10. ಭುವನೇಶ್ವರ್ ಕುಮಾರ್, 11. ಅರ್ಷದೀಪ್ ಸಿಂಗ್

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Sachin Tendulkar tastes tea road side : ಬೆಳಗಾವಿ-ಗೋವಾ ಹೈವೇನಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ಟೀ ಕುಡಿದ ಸಚಿನ್ ತೆಂಡೂಲ್ಕರ್, ವೀಡಿಯೊ ವೈರಲ್

ಇದನ್ನೂ ಓದಿ : Virat Kohli birthday : ಕಿಂಗ್ ಕೊಹ್ಲಿಗೆ ಒಂದು ದಿನ ಮೊದಲೇ ಹುಟ್ಟುಹಬ್ಬದ ಶುಭಾಶಯ ಹೇಳಿದ ಪಾಕ್ ಬೌಲರ್

India vs zimbabwe t20 world cup 2022 india Playing XI Weather Report

Comments are closed.