Lava Blaze 5G :ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಲಾವಾ ಬ್ಲೇಜ್‌ 5G ಪಾಕೆಟ್‌–ಫ್ರೆಂಡ್ಲೀ ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌, ಲಾಪ್‌ಟಾಪ್‌, ಕಂಪ್ಯೂಟರ್‌ ಹಾರ್ಡ್‌ವೆರ್‌ ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತಯಾರಿಸುವ ಭಾರತದ ಮಲ್ಟಿನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಕಂಪನಿ ಲಾವಾ (Lava) ಪಾಕೆಟ್‌–ಫ್ರೆಂಡ್ಲೀ 5G ಸ್ಮಾರ್ಟ್‌ಫೋನ್‌ (Lava Blaze 5G) ಅನ್ನು ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಮಾಡಲಿದೆ. ಕಳೆದ ತಿಂಗಳು ಕಂಪನಿಯು ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ನ ಜೊತೆಗೆ ಅದರ ವಿಶೇಷಣಗಳನ್ನು ಘೋಷಿಸಿತ್ತು. ಆದರೆ ಹೊಸ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಬಹಿಂರಂಗಪಡಿಸಿರಲಿಲ್ಲ. ಈಗ ಆ ಕಾಯುವಿಕೆ ಮುಗಿಯುವ ಸಮಯ ಬಂದಿದೆ. ಏಕೆಂದರೆ ಲಾವಾ 5G ಸ್ಮಾರ್ಟ್‌ಫೋನ್‌ ಬೆಲೆಯನ್ನು ಅಧಿಕೃತವಾಗಿ ನವೆಂಬರ್‌ 7 ರಂದು ಪ್ರಕಟಿಸಲಿದೆ.

ಇತ್ತಿಚೆಗಿನ ವರದಿಯ ಪ್ರಕಾರ ಬ್ಲೇಜ್‌ 5G ನವೆಂಬರ್‌ 3 ರಿಂದ ಖರೀದಿಗೆ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಹಾಗಾಗಲಿಲ್ಲ. ಈಗ ಕಂಪನಿಯೇ ಸ್ವತಃ ಟ್ವೀಟ್‌ ಮಾಡಿ ನವೆಂಬರ್‌ 7 ರಂದು ಬೆಲೆ ಘೋಷಿಸಲಾಗುವುದು ಎಂದು ಹೇಳಿದೆ. ಬ್ಲೇಜ್‌ 5G ಯ ಅಧಿಕೃತ ಟೀಸರ್‌ನಲ್ಲಿ ಇದರ ಬಗ್ಗೆ ಏನನ್ನೂ ಉಲ್ಲೆಖಿಸಲ್ಲ. ಇದು ದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ದೊರಕುವ 5G ಫೋನ್‌ ಎಂದು ಮಾತ್ರ ಹೇಳಿದೆ. ಕಂಪನಿಯು ಪೋಸ್ಟ್‌ ಮಾಡಿದ ಅಧಿಕೃತ ಚಿತ್ರದಲ್ಲಿ ಈ ಫೋನ್‌ ನೀಲಿ ಮತ್ತು ಹಸಿರು ಬಣ್ಣಗಳಲ್ಲೂ ಬರಲಿದೆ ಎಂದು ತಿಳಿಸುತ್ತದೆ. ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್‌ನಲ್ಲಿ ಮಾರಾಟಕ್ಕೆ ಬಿಡಬಹುದು.

ಇನ್ನು ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ನ ವಿಶೇಷತೆಗಳು ಹೀಗಿದೆ. ಇದು 6.5 ಇಂಚಿನ, 700X1600 ಪಿಕ್ಸಲ್‌ HD+ ರೆಸಲ್ಯೂಷನ್‌ ಇರುವ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 90Hz ವರೆಗೆ ರಿಫ್ರೆಶ್‌ ದರ ಮತ್ತು ಟಿಯರ್‌ ಡ್ರಾಪ್‌ ನಾಚ್‌ ಹೊಂದಿದೆ. ಇದು 20:9 ಅನುಪಾತದ ಆಕಾರ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 700 ಚಿಪ್‌ಸೆಟ್ ಚಲಿಸುತ್ತದೆ. ಇದು GB RAM ಮತ್ತು 3GB ವರ್ಚುವಲ್ RAM ಅನ್ನು ಹೊಂದಿದೆ. ಹೆಚ್ಚುವರಿ ಶೇಖರಣಾ ಸಾಮರ್ಥ್ಯಕ್ಕಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್‌ 12 OS ನಲ್ಲಿ ಕಾರ್ಯನಿರ್ವಹಿಸುತ್ತದೆ. 5,000mAh ಬ್ಯಾಟರಿ ಕ್ಷಮತೆ ಹೊಂದಿದೆ. ಆದರೆ ಇದರ ಚಾರ್ಜಿಂಗ್‌ ಸಾಮರ್ಥ್ಯದ ಬಗ್ಗೆ ಇನ್ನು ತಿಳಿದುಬಂದಿಲ್ಲ.ಬ್ಲೇಜ್‌ 5G ಫೋನ್‌ ಹಿಂಭಾಗದಲ್ಲಿ 50 PM ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಫೋನ್‌ನ ಮುಂಭಾಗದ ಕ್ಯಾಮೆರಾಕ್ಕಾಗಿ 8 MP ಸೆಲ್ಫಿ ಕ್ಯಾಮೆರಾವನ್ನು ಪಡದುಕೊಂಡಿದೆ.

ಚೈನೀಸ್ ಸ್ಮಾರ್ಟ್‌ಫೋನ್ ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ 5G ಫೋನ್‌ಗಳನ್ನು ಪರಿಚಯಿಸಿವೆ. ಆದರೆ ಲಾವಾ ದೇಶದಲ್ಲಿ 5G ಫೋನ್ ಅನ್ನು ಬಿಡುಗಡೆ ಮಾಡಿದ ಏಕೈಕ ಭಾರತೀಯ ಬ್ರ್ಯಾಂಡ್ ಆಗಿದೆ. ಕಳೆದ ವರ್ಷ, ಲಾವಾ ಅಗ್ನಿ 5G (Lava AGNI 5G) ಅನ್ನು ಪರಿಚಯಿಸಿತ್ತು. ಈಗ ಬ್ಲೇಜ್‌ ಅದರ ಎರಡನೇ 5G ಫೋನ್ ಆಗಿದೆ.

ಇದನ್ನೂ ಓದಿ : Reliance Industries : ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್‌ ನೇಮಕ

ಇದನ್ನೂ ಓದಿ : Digital Voter ID Card : ಮೊಬೈಲ್‌ ನಲ್ಲೇ ಸಿಗುತ್ತೆ ಡಿಜಿಟಲ್‌ ವೋಟರ್‌ ಐಡಿ : ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

(Lava Blaze 5G will Officially reveal the price of the new 5G phone on November 7)

Comments are closed.