Acid attack: ಮಹಿಳೆ ಮಕ್ಕಳು ಸೇರಿ ನಾಲ್ವರ ಮೇಲೆ ಆಸಿಡ್‌ ದಾಳಿ

ಭುವನೇಶ್ವರ: (Acid attack) ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳ ಮೇಲೆ ಆಸಿಡ್‌ ದಾಳಿ ನಡೆಸಿದ ಘಟನೆ ಓಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಚಂದನ್‌ ರಾಣಾ ಎಂದು ಗುರುತಿಸಲಾಗಿದೆ. ಆಸಿಡ್‌ ದಾಳಿಗೊಳಗಾದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ವಿಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಣಾ ತನ್ನ ಎರಡನೇ ಪತ್ನಿಯನ್ನು ನೀಲಗಿರಿ ಪ್ರದೇಶದ ಸಂತರಗಡಿಯಾದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗುವ ಕಾರಣದಿಂದ ಮಾವನ ಮನೆಗೆ ಬಂದಿದ್ದ. ಆದರೆ ಮಹಿಳೆಯು ಆತನೊಂದಿಗೆ ಹೋಗಲು ನಿರಾಕರಿಸಿದ್ದು, ಈ ಕಾರಣಕ್ಕೆ ರಾಣಾ ಆಕೆಯ ಮೇಲೆ ಆಸಿಡ್‌ ದಾಳಿ ನಡೆಸಿದ್ದಾನೆ. ಈ ವೇಳೆ ಸಂತ್ರಸ್ತ ಮಹಿಳೆಯನ್ನು ರಕ್ಷಿಸಲು ಬಂದಿದ್ದ ಅಕೆಯ ಅಕ್ಕನ ಮೇಲೂ ಆಸಿಡ್‌ ಎರೆಚಿದ್ದಾನೆ. ಈ ವೇಳೆ ಅಕ್ಕನ ಮಗ ಹಾಗೂ ಮಗಳು ಕೂಡ ಗಾಯಗೊಂಡಿದ್ದಾರೆ.

ಇದಾದ ಬಳಿಕ ಗಾಯಗೊಂಡ ನಾಲ್ವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಮಕ್ಕಳು ಹಾಗೂ ಅಪ್ರಾಪ್ತ ಮಹಿಳೆಯ ಅಕ್ಕನ ಸ್ಥಿತಿ ಸ್ಥಿರವಾಗಿದೆ. ಹಾಗೂ ಆರೋಪಿಯ ಎರಡನೇ ಹೆಂಡತಿಯ ಸ್ಥೀತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಘಟನೆಯ ಬಳಿಕ ಆರೋಪಿ ರಾಣಾ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ಕುರಿತು ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಪೋಲಿಸರ ಬಳಿ ದೂರು ದಾಖಲಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Set fire and murdered: ಮಾದಕ ವಸ್ತು ಸೇವನೆ ಪ್ರಕರಣ: ಮಹಿಳೆಗೆ ಬೆಂಕಿ ಹಚ್ಚಿ ಕೊಲೆ: ಆರೋಪಿ ಅರೆಸ್ಟ್‌

ಮಾದಕ ವಸ್ತು ಸೇವನೆಯ ವಿವಾದ: ಮಹಿಳೆಗೆ ಬೆಂಕಿ ಹಚ್ಚಿ ಕೊಲೆ: ಆರೋಪಿ ಅರೆಸ್ಟ್‌

ನವದೆಹಲಿ: ಮಾದಕ ವಸ್ತು ಸೇವನೆಯ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಲಿವ್‌ ಇನ್‌ ಸಂಗಾತಿ ಬೆಂಕಿ ಹಚ್ಚಿ ಕೊಂದ‍ ಘಟನೆ ದೆಹಲಿ ಅಮನ್‌ ವಿಹಾರ್‌ನಲ್ಲಿ ನಲ್ಲಿ ನಡೆದಿದೆ. ಮೃತರನ್ನು ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆ ತನ್ನ ಪತಿಯನ್ನು ತೊರೆದು ಕಳೆದ ಆರು ವರ್ಷಗಳಿಂದ ಆರೋಪಿ ಮೋಹಿತ್‌ನೊಂದಿಗೆ ವಾಸಿಸುತ್ತಿದ್ದಳು. ಆಕೆಗೆ ಇಬ್ಬರು ಮಕ್ಕಳಿದ್ದರು. ಫೆಬ್ರವರಿ 10 ರಂದು ರಾತ್ರಿ ಮೋಹಿತ್ ತನ್ನ ಸ್ನೇಹಿತನ ಜೊತೆ ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡು ಮಹಿಳೆ ಆತನೊಂದಿಗೆ ಜಗಳವಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರಿಂದ ಕುಪಿತಗೊಂಡ ಆರೋಪಿ ಆಕೆಯ ಮೇಲೆ ‘ಟಾರ್ಪಿನ್ ಆಯಿಲ್’ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಲ್ಲಿ ಬೆಂದು ಹೋಗಿದ್ದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Truck caught fire: ಟ್ರಾನ್ಸ್‌ಫಾರ್ಮರ್ ಆಯಿಲ್ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ; ಸಂಚಾರ ಅಸ್ತವ್ಯಸ್ತ

ಇದನ್ನೂ ಓದಿ : Mexico bus accident: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ: 17 ಮಂದಿ ಸಾವು

Acid attack: Acid attack on four including women and children

Comments are closed.