Suryakumar Yadav Visit Tirupati Thimmappa : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ 6 ದಿನಗಳ ಬ್ರೇಕ್, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸೂರ್ಯಕುಮಾರ್ ಯಾದವ್

ತಿರುಪತಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) ಮೊದಲೆರಡೂ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆಯಲ್ಲಿದೆ.ಭಾರತ ಮತ್ತು ಆಸೀಸ್ ನಡುವಿನ 3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಮಧ್ಯಪ್ರದೇಶದ ಇಂದೋರ್’ನಲ್ಲಿರುವ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಟೀಮ್ ಇಂಡಿಯಾ, 3ನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.ಆಸೀಸ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಆರು ದಿನಗಳ ಬ್ರೇಕ್ ಸಿಕ್ಕಿದೆ. ಹೀಗಾಗಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡಿರುವ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜೊತೆ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ (Suryakumar Yadav Visit Tirupati Thimmappa) ಮಾಡಿದ್ದಾರೆ.

32 ವರ್ಷದ ಸೂರ್ಯಕುಮಾರ್ ಯಾದವ್ ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಶ್ರೇಯಸ್ ಅಯ್ಯರ್ ಪ್ರಥಮ ಟೆಸ್ಟ್’ಗೆ ಅಲಭ್ಯರಾಗಿದ್ದ ಕಾರಣ, ಸೂರ್ಯ ಕುಮಾರ್’ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿತ್ತು. ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ನಂ.1 ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್, ಟೆಸ್ಟ್ ಪದಾರ್ಪಣೆಯ ಇನ್ನಿಂಗ್ಸ್’ನಲ್ಲಿ ಕೇವಲ 8 ರನ್’ಗಳಿಗೆ ಔಟಾಗಿದ್ದರು. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ವಾಪಸ್ಸಾದ ಕಾರಣ, ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ XIನಲ್ಲಿ ಸ್ಥಾನ ಕಳೆದುಕೊಂಡಿದ್ದರು.

ಇದನ್ನೂ ಓದಿ : Prasidh Krishna : ಬೆನ್ನು ನೋವಿಗೆ ಆಪರೇಷನ್ ಸಕ್ಸಸ್, ಐಪಿಎಲ್’ನಿಂದ ಕನ್ನಡಿಗ ಔಟ್

ಇದನ್ನೂ ಓದಿ : KL Rahul Out : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಪ್ಲೇಯಿಂಗ್ XIನಿಂದ ಕೆ.ಎಲ್ ರಾಹುಲ್ ಔಟ್

ಇದನ್ನೂ ಓದಿ : Prithwi Shaw Controversy: ಸೆಲ್ಫಿ ಕಿತ್ತಾಟಕ್ಕೆ ಹೊಸ ಟ್ವಿಸ್ಟ್, ಕ್ರಿಕೆಟಿಗ ಪ್ರಥ್ವಿ ಶಾ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ ಭೋಜ್’ಪುರಿ ನಟಿ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾ:
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್, 3. ಶುಭಮನ್ ಗಿಲ್, 4.ಚೇತೇಶ್ವರ್ ಪೂಜಾರ, 5.ವಿರಾಟ್ ಕೊಹ್ಲಿ, 6.ಶ್ರೇಯಸ್ ಅಯ್ಯರ್, 7.ಸೂರ್ಯಕುಮಾರ್ ಯಾದವ್, 8.ಕೆ.ಎಸ್ ಭರತ್ (ವಿಕೆಟ್ ಕೀಪರ್), 9.ಇಶಾನ್ ಕಿಶನ್ (ವಿಕೆಟ್ ಕೀಪರ್), 10.ರವೀಂದ್ರ ಜಡೇಜ, 11.ರವಿಚಂದ್ರನ್ ಅಶ್ವಿನ್, 12.ಅಕ್ಷರ್ ಪಟೇಲ್, 13.ಕುಲ್ದೀಪ್ ಯಾದವ್, 14.ಮೊಹಮ್ಮದ್ ಶಮಿ, 15.ಮೊಹಮ್ಮದ್ ಸಿರಾಜ್, 16.ಉಮೇಶ್ ಯಾದವ್, 17.ಜೈದೇವ್ ಉನಾದ್ಕಟ್.

Suryakumar Yadav Visit Tirupati Thimmappa : After a 6-day break from the Border-Gavaskar Test series, Suryakumar Yadav visited Tirupati Thimmappa.

Comments are closed.