Acid Attack-complaint filed : ತಾಯಿ ಮತ್ತು ಮಗುವಿನ ಮೇಲೆ ಆಸಿಡ್ ದಾಳಿ: ದೂರು ದಾಖಲು

ನವದೆಹಲಿ: (Acid Attack-complaint filed) ತಾಯಿ ಹಾಗೂ ಮಗುವಿನ ಮೇಲೆ ಪಾರ್ಕ್‌ ಒಂದರಲ್ಲಿ ಆಸಿಡ್‌ ದಾಳಿ ನಡೆದಿದ್ದು, ಪರಿಣಾಮ 36 ವರ್ಷದ ಮಹಿಳೆ ಮತ್ತು ಅವರ 4 ವರ್ಷದ ಮಗುವಿಗೆ ಸುಟ್ಟ ಗಾಯಗಳಾಗಿವೆ. ಘಟನೆ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಲ್ಲಾ ಕೋನಗಳಿಂದಲೂ ತನಿಖೆಯನ್ನು ನಡೆಸಲಾಗುತ್ತಿದೆ.

ವಾಯುವ್ಯ ದೆಹಲಿಯ ಭಾರತ್ ನಗರದಲ್ಲಿ ಈ ಘಟನೆ ನಡೆದಿದ್ದು, ಇದು ವೈಯಕ್ತಿಕ ದ್ವೇಷದ ಪರಿಣಾಮ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ವಾಯುವ್ಯ) ಜಿತೇಂದ್ರ ಕುಮಾರ್ ಮೀನಾ ಹೇಳಿದ್ದಾರೆ. ಭಾರತ್ ನಗರ ಪ್ರದೇಶದ ಗುರು ಬಜಾರ್‌ನಲ್ಲಿರುವ ತನ್ನ ಅಂಗಡಿಯಲ್ಲಿ ಕುಳಿತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಉದ್ಯಾನವನದ ಮೂಲಕ ಬಂದು ತನ್ನ ಮೇಲೆ ಆಸಿಡ್ ಎರಚಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣದ ಬಗ್ಗೆ ದೂರು ದಾಖಲಾಗಿದ್ದು, ಇದುವರೆಗೆ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

2022ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಮೋಹನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು 17 ವರ್ಷದ ಬಾಲಕಿಯ ಮೇಲೆ ಆಸಿಡ್ ದಾಳಿ ನಡೆಸಿದ್ದರು. ಸಂತ್ರಸ್ತೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆಯ ಕಿರಿಯ ಸಹೋದರಿಯ ಪ್ರಕಾರ, “ನಾನು ಮತ್ತು ನನ್ನ ಸಹೋದರಿ ಬೆಳಿಗ್ಗೆ 7:32 ರ ಸುಮಾರಿಗೆ ಶಾಲೆಗೆ ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ಅವಳ ಕಿರುಚಾಟ ನನಗೆ ಕೇಳಿಸಿತು. ನಾನು ಅವಳ ಮುಖ ನೋಡಿ ಗಾಬರಿಗೊಂಡು ನಮ್ಮ ತಂದೆಗೆ ಕರೆ ಮಾಡಿದೆ. ನಂತರ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಬೈಕಿಗೆ ನಂಬರ್ ಪ್ಲೇಟ್ ಇರಲಿಲ್ಲ. ಅವಳು ಇಬ್ಬರನ್ನೂ ಹಿಂದಿನಿಂದಲೂ ತಿಳಿದಿದ್ದಳು. ” ಎಂದು ತಿಳಿಸಿದ್ದಾಳೆ.

ಇದನ್ನೂ ಓದಿ : Electricity bill fraud: ವಿದ್ಯುತ್ ಬಿಲ್ ಹೆಸರಲ್ಲೂ ನಿಮ್ಮನ್ನು ವಂಚನೆ ಮಾಡಬಹುದು ಹುಷಾರ್‌!

ಇದನ್ನೂ ಓದಿ : Building collapse-3 died: 3 ಅಂತಸ್ತಿನ ಕಟ್ಟಡ ಕುಸಿತ: 2 ಮಕ್ಕಳು ಸೇರಿದಂತೆ 3 ಸಾವು, 6 ಮಂದಿಗೆ ಗಾಯ

ಇದನ್ನೂ ಓದಿ : BMTC conductor burnt alive: BMTC ಬಸ್ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್

Acid Attack-complaint filed : Acid attack on mother and child: File a complaint

Comments are closed.