Shreyas Iyer IPL : ಬಿಸಿಸಿಐ ಸೂಚನೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್, ಐಪಿಎಲ್‌ಗಾಗಿ ಬಿಗ್ ರಿಸ್ಕ್ ತೆಗೆದುಕೊಳ್ಳಲು ಮುಂಬೈಕರ್ ರೆಡಿ

ಮುಂಬೈ: ಐಪಿಎಲ್’ಗಾಗಿ (IPL) ಈ ಕ್ರಿಕೆಟಿಗರು ರಾಷ್ಟ್ರೀಯ ತಂಡದ ಹಿತಾಸಕ್ತಿಯನ್ನೂ ಬದಿಗೊತ್ತಲು ರೆಡಿ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಮುಂಬೈಕರ್ ಶ್ರೇಯಸ್ ಅಯ್ಯರ್ (Shreyas Iyer). ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಬಿಸಿಸಿಐಗೆ ಸಡ್ಡು ಹೊಡೆದು ನಿಂತಿದ್ದಾರೆ.

ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಲಾಗುವಂತೆ ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಶ್ರೇಯಸ್ ಅಯ್ಯರ್’ಗೆ (Shreyas Iyer) ಸೂಚನೆ ನೀಡಿತ್ತು. ಒಂದು ವೇಳೆ ಅಯ್ಯರ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರೆ 7 ತಿಂಗಳು ಕ್ರಿಕೆಟ್ ಮೈದಾನದಿಂದ ಹೊರಗುಳಿಯಬೇಕಿತ್ತು. ಹೀಗಾಗಿ ಐಪಿಎಲ್ ಟೂರ್ನಿ ಹಾಗೂ ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್’ನ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023) ಪಂದ್ಯಕ್ಕೂ ಶ್ರೇಯಸ್ ಅಯ್ಯರ್ ಅಲಭ್ಯರಾಗುವ ಸಾಧ್ಯತೆಯಿತ್ತು. ಅಷ್ಟೇ ಅಲ್ಲ, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ (ICC men’s World Cup 2023) ಟೂರ್ನಿಯ ವೇಳೆಗೂ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯಿತ್ತು.

ಹೀಗಾಗಿ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಬಿಸಿಸಿಐ ನೀಡಿರುವ ಸೂಚನೆಯನ್ನು ಧಿಕ್ಕರಿಸಿರುವ ಶ್ರೇಯಸ್ ಅಯ್ಯರ್, ಕೆಲ ದಿನಗಳ ವಿಶ್ರಾಂತಿಯನ್ನಷ್ಟೇ ಪಡೆಯಲು ನಿರ್ಧರಿಸಿದ್ದಾರೆ. ಹೀಗಾಗಿ ಐಪಿಎಲ್ (Shreyas Iyer IPL) ಟೂರ್ನಿಯ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿರುವ ಅಯ್ಯರ್, ಟೂರ್ನಿಯ ಮಧ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ ಸೇರಿಕೊಳ್ಳಲಿದ್ದಾರೆ. 28 ವರ್ಷದ ಶ್ರೇಯಸ್ ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಕೂಡ ಹೌದು.

ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದ 4 ಹಾಗೂ 5ನೇ ದಿನ ಬೆನ್ನು ನೋವಿನ ಕಾರಣ ಶ್ರೇಯಸ್ ಅಯ್ಯರ್ ಮೈದಾನಕ್ಕಿಳಿದಿಲ್ಲ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್ ಆಡಿರಲಿಲ್ಲ.‌

ಇದನ್ನೂ ಓದಿ : IPL 2023 rule change : ಐಪಿಎಲ್ ರೂಲ್ಸ್‌ನಲ್ಲಿ ದೊಡ್ಡ ಬದಲಾವಣೆ; ಟಾಸ್ ಬಳಿಕ ಪ್ಲೇಯಿಂಗ್ XI ಬದಲಿಸಲು ಅವಕಾಶ

ಇದನ್ನೂ ಓದಿ : Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

Comments are closed.