Agra Building collapse: ಉತ್ಖನನ ಕಾರ್ಯಕ್ಕೆ ನೆಲಸಮವಾದ 6 ಮನೆ : 4 ವರ್ಷದ ಬಾಲಕಿ ಸಾವು

ಆಗ್ರಾ: (Agra Building collapse) ವಿಶ್ರಾಂತಿ ಗೃಹವೊಂದರಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಇದರ ಕಾರಣದಿಂದ ಆರು ಮನೆಗಳು ಕುಸಿದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ ಹಾಗೂ ಕೆಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ರುಸಾಲಿ ( 4 ವರ್ಷ) ಮೃತ ಬಾಲಕಿ.

ಆಗ್ರಾ ಸಿಟಿ ರೈಲ್ವೇ ನಿಲ್ದಾಣದ ಬಳಿಯ ತಿಲಾ ಮೈಥಾನ್ ಪ್ರದೇಶದಲ್ಲಿನ ವಿಶ್ರಾಂತಿ ಗೃಹದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಅದರ ಪರಿಣಾಮ, ಆರು ಮನೆಗಳು ಮತ್ತು ಒಂದು ದೇವಾಲಯವು ಕುಸಿತಗೊಂಡಿದೆ. ಈ ಸಂದರ್ಭ ಮೂರು ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವಶೇಷದಡಿಯಲ್ಲಿ ಸಿಲುಕಿದವರನ್ನು ವಿವೇಕ್ ಕುಮಾರ್ ಮತ್ತು ಅವರ ಇಬ್ಬರು ಪುತ್ರಿಯರಾದ ವಿದೇಹಿ, 5 ಮತ್ತು ರುಸಾಲಿ, 4 ಎಂದು ಗುರುತಿಸಲಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಕಲಿಸಲಾಯಿತು. ಅಲ್ಲಿ ನಾಲ್ಕು ವರ್ಷದ ಬಾಲಕಿ ರುಸಾಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದರು. ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಆಗ್ರಾ) ವಿಕಾಸ್ ಕುಮಾರ್ ಪ್ರಕಾರ, ಘಟನೆಯು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ.

ಮನೆ ಕುಸಿತಗೊಂಡ ಪ್ರದೇಶದ ಮತ್ತೊಬ್ಬ ನಿವಾಸಿ ಮನೋಜ್ ವರ್ಮಾ, “ದೇವರ ದಯೆಯಿಂದ ಬೆಳಿಗ್ಗೆ ಕೆಲವೇ ಜನರು ತಮ್ಮ ಮನೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ರಾತ್ರಿಯಲ್ಲಿ ಅದು ಸಂಭವಿಸಿದ್ದರೆ ಅನೇಕ ಜನರು ಇದಕ್ಕೆ ಬಲಿಯಾಗುತ್ತಿದ್ದರು” ಎಂದು ವರದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ : Contractor killed the worker: ಹಣದ ವಿಚಾರಕ್ಕೆ ಕಿರಿಕ್ : ಕಾರ್ಮಿಕನ ಕೊಲೆಗೈದು ಪೊದೆಯಲ್ಲಿ ಎಸೆದ ಗುತ್ತಿಗೆದಾರ

ಇದನ್ನೂ ಓದಿ : ಲೈಂಗಿಕ ದೌರ್ಜನ್ಯಕ್ಕೆ ಹೆದರಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಮಹಿಳೆ

ಇದನ್ನೂ ಓದಿ : Sexual assault case: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: 20 ವರ್ಷ ಜೈಲು 50 ಸಾವಿರ ದಂಡ

ಘಟನೆಯ ಕುರಿತು ಆಗ್ರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Agra Building collapse: 6 houses collapsed due to excavation work: 4-year-old girl died

Comments are closed.