McDonald’s fine: ಮೆಕ್‌ಡೊನಾಲ್ಡ್‌ನಲ್ಲಿ ನಿಧಾನವಾಗಿ ಊಟ ಮಾಡಿದ್ದಕ್ಕೆ ವ್ಯಕ್ತಿಗೆ 10,000 ರೂ ದಂಡ

ನವದೆಹಲಿ: (McDonald’s fine) ಜನರು ನಿಧಾನವಾಗಿ ಆಹಾರವನ್ನು ಸೇವಿಸುವಂತೆ ಆಹಾರ ತಜ್ಞರು ಸಲಹೆ ನೀಡುತ್ತಾರೆ. ಆದರೆ ಕೇಂಬ್ರಿಡ್ಜ್‌ನ ವ್ಯಕ್ತಿಯೊಬ್ಬರು ಮೆಕ್‌ಡೊನಾಲ್ಡ್ಸ್‌ನಲ್ಲಿ ಊಟವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಪಾರ್ಕಿಂಗ್ ಕಂಪನಿಯು 10,000 ರೂ. ದಂಡ ವಿಧಿಸಿದೆ.

ಕೇಂಬ್ರಿಡ್ಜ್‌ನ ನ್ಯೂಮಾರ್ಕೆಟ್ ರಸ್ತೆಯ ಬಳಿ ಇರುವ ಫಾಸ್ಟ್‌ಫುಡ್ ರೆಸ್ಟೋರೆಂಟ್‌ನಲ್ಲಿ ಶಪೂರ್ ಮೆಫ್ತಾ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದು ಊಟಕ್ಕೆ ಆರ್ಡರ್ ಮಾಡಿದ್ದರು. ಆರ್ಡರ್‌ ಬಂದ ನಂತರದಲ್ಲಿ ಅದನ್ನು ಪೂರ್ಣವಾಗಿ ಸೇವಿಸಲು ಸಮಯ ತೆಗೆದುಕೊಂಡಿದ್ದಾರೆ. ಮೆಕ್‌ಡೊನಾಲ್ಡ್‌ನ ಗ್ರಾಹಕರಿಗೆ ಕುಳಿತುಕೊಳ್ಳಲು, ತಿನ್ನಲು ಮತ್ತು ಅಲ್ಲಿಂದ ಹೋಗಲು 90 ನಿಮಿಷಗಳ ಕಾಲ ಸಮಯವನ್ನು ಇರಿಸಲಾಗಿದೆ. ಗ್ರಾಹಕರಿಗೆ ಇರಿಸಲಾಗಿರುವ 90 ನಿಮಿಷಗಳ ಸಮಯದ ಮಿತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾರ್ಕಿಂಗ್ ಕಂಪನಿಯು ವ್ಯಕ್ತಿಗೆ 10,000 ರೂ. ದಂಡವನ್ನು ವಿಧಿಸಿದೆ.

ಮೆಕ್‌ಡೊನಾಲ್ಡ್‌ ಗ್ರಾಹಕರಿಗೆ ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ನಿಗದಿಪಡಿಸಿದ ಸಮಯ ಮಿತಿಯನ್ನು ಮೀರಿದ್ದಕ್ಕಾಗಿ ಖಾಸಗಿ ಪಾರ್ಕಿಂಗ್ ಕಂಪನಿ, ಯುಕೆ ಪಾರ್ಕಿಂಗ್ ಕಂಟ್ರೋಲ್‌ನಿಂದ ಪೆನಾಲ್ಟಿ ನೋಟಿಸ್‌ಗಳನ್ನು ಸ್ವೀಕರಿಸಿದ್ದು, ಮೆಕ್‌ಡೊನಾಲ್ಡ್‌ನ ಗ್ರಾಹಕರಿಗೆ ಇರಿಸಲಾಗಿರುವ 90 ನಿಮಿಷಗಳ ಸಮಯದ ಮಿತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾರ್ಕಿಂಗ್ ಕಂಪನಿಯು ತನಗೆ ಪೆನಾಲ್ಟಿ ಟಿಕೆಟ್ ನೀಡಿದೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : Atta Price Increase : ಗೋಧಿ ಹಿಟ್ಟಿನ ದರ ಏರಿಕೆ : ಏಲ್ಲೆಲ್ಲಿ ಎಷ್ಟೆಷ್ಟು ಗೊತ್ತಾ ?

ಇದನ್ನೂ ಓದಿ : Happy Republic Day 2023 : ಗಣರಾಜ್ಯೋತ್ಸವ 2023 : ಸಾಂಸ್ಕ್ರತಿಕ ಪರಂಪರೆ ಸಾರುವ ರಾಷ್ಟ್ರೀಯ ಉತ್ಸವ

ಇದನ್ನೂ ಓದಿ : Republic day 2023th Doodle: ವಿಶೇಷ ಕಲಾಕೃತಿಯೊಂದಿಗೆ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಗೂಗಲ್‌ ಡೂಡಲ್‌

ಕೆಲವು ದಿನಗಳ ಹಿಂದೆ, ಮ್ಯಾಕ್‌ಮಫಿನ್‌ನೊಂದಿಗೆ ವ್ಯಕ್ತಿಯೊಬ್ಬರು 5,000 ದಂಡ ಪಾವತಿಸಿದ ನಂತರ ಮೆಕ್‌ಡೊನಾಲ್ಡ್‌ ಸುದ್ದಿಯಲ್ಲಿತ್ತು.

McDonald’s fine: Person fined Rs 10,000 for eating slowly at McDonald’s

Comments are closed.