Andhra Pradesh Shocker : 8 ತಿಂಗಳು, 80 ಮಂದಿ ಕಾಮುಕರು..! ಗ್ಯಾಂಗ್​ರೇಪ್​ಗೊಳಗಾಗುತ್ತಿದ್ದ ಬಾಲಕಿಯ ಕರುಣಾಜನಕ ಕತೆಯಿದು..!

Andhra Pradesh Shocker : 13 ವರ್ಷದ ಬಾಲಕಿಯ ಮೇಲೆ 80ಕ್ಕೂ ಅಧಿಕ ಪುರುಷರು ಬರೋಬ್ಬರಿ 8 ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದ ಘಟನೆಯೊಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ವರದಿಯಾಗಿದೆ. ಈ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿದ್ದು ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ವೇಶ್ಯ ಗೃಹಗಳಲ್ಲಿ ಅತ್ಯಾಚಾರ ಎಸಗಲಾಗುತ್ತಿತ್ತು. ಮಂಗಳವಾರದಂದು ಗುಂಟೂರಿನಲ್ಲಿ ಬಾಲಕಿಯನ್ನು ರಕ್ಷಿಸಲಾಗಿದೆ.


ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿದ ಪ್ರಮುಖ ಆರೋಪಿ ಸವರ್ಣಕುಮಾರಿ ಎಂದು ಪೊಲೀಸರು ಗುರುತಿಸಿದ್ದಾರೆ. ಗಮನಾರ್ಹವಾಗಿ, ಅಪ್ರಾಪ್ತ ಸಂತ್ರಸ್ತೆಯನ್ನು ಸವರ್ಣ ಕುಮಾರಿ ದತ್ತು ಪಡೆದರು, ಕಳೆದ ವರ್ಷ ಜೂನ್​ ತಿಂಗಳಲ್ಲಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಬಾಲಕಿಯ ತಾಯಿಯ ಜೊತೆಯಲ್ಲಿ ಸುವರ್ಣ ಕುಮಾರಿ ಸಂಪರ್ಕ ಸಾಧಿಸಿದ್ದರು. ಕೊರೊನಾದಿಂದ ಬಾಲಕಿಯ ತಾಯಿ ಸಾವನ್ನಪ್ಪಿದ ಬಳಿಕ ಬಾಲಕಿಯ ತಂದೆಗೂ ಮಾಹಿತಿ ನೀಡದೇ ಆಕೆಯನ್ನು ಕರೆದೊಯ್ದಿದ್ದರು. ಬಳಿಕ ಆಕೆಯನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ವಿವಿಧ ವೇಶ್ಯಾವಾಟಿಕೆ ಗೃಹಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಬರೋಬ್ಬರಿ 8 ತಿಂಗಳುಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.


ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಬಾಲಕಿಯು ಪೊಲೀಸರನ್ನು ಸಂಪರ್ಕಿಸಿ ಈ ಸಂಬಂಧ ದೂರು ದಾಖಲಿಸಿದ್ದಳು. ಬಳಿಕ ಪೊಲೀಸರು ಸುವರ್ಣಕುಮಾರಿ ಸೇರಿದಂತೆ 80 ಮಂದಿ ಅತ್ಯಾಚಾರಿಗಳನ್ನು ಗುರುತಿಸಿ ಬಂಧಿಸಲು ಆರಂಭಿಸಿದರು. ಪ್ರಕರಣದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವರ್ಷದ ಜನವರಿ ತಿಂಗಳಲ್ಲಿ ಬಿ ಟೆಕ್​ ವಿದ್ಯಾರ್ಥಿ ಸೇರಿದಂತೆ 10 ಮಂಡಿಯನ್ನು ಬಂಧಿಸಲಾಯಿತು. ಇದೀಗ ಪೊಲೀಸರು ಈ ಅಪರಾಧದಲ್ಲಿ ಭಾಗಿಯಾದ ಎಲ್ಲಾ 80 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


ಬಾಲಕಿಯ ವಯಸ್ಸು ಹಾಗೂ ಆಕೆಯ ಪರಿಸ್ಥಿತಿಯ ಲಾಭವನ್ನು ಪಡೆದು ಅನೇಕರು ಈಕೆಯನ್ನು ಖರೀದಿ ಮಾಡಿ ಬಳಿಕ ವಿವಿಧ ಸ್ಥಳಗಳಲ್ಲಿ ಈಕೆಯನ್ನು ವೇಶ್ಯಾವಾಟಿಕೆ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಬಾಲಕಿಯು ನೀಡಿರುವ ದೂರನ್ನು ಆಧರಿಸಿ ನಾವು ಈವರೆಗೆ 80 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಎಎಸ್ಪಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : PUC Exams 2022 : ಏಪ್ರಿಲ್ 22 ರಿಂದ ದ್ವಿತೀಯ ಪಿಯು ಪರೀಕ್ಷೆ : ಹಿಜಾಬ್‌ಗೆ ಇಲ್ಲ ಅವಕಾಶ : ಸಚಿವ ಬಿ.ಸಿ.ನಾಗೇಶ್‌

ಇದನ್ನೂ ಓದಿ : Shah Rukh Khan: ಶಾರುಖ್ ಖಾನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ!

Andhra Pradesh Shocker: 13-Year-Old Girl Gang Raped by 80 Men in 8 Months, All Arrested

Comments are closed.