Auto driver murder case: ದೆಹಲಿ ಆಟೋ ಚಾಲಕನ ಕೊಲೆ ಪ್ರಕರಣ: ಮುಖ್ಯ ಆರೋಪಿ ಅರೆಸ್ಟ್‌

ನವದೆಹಲಿ: (Auto driver murder case) ಸುಮಾರು ಮೂರು ತಿಂಗಳ ಹಿಂದೆ ನಡೆದ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆಗೊಂಡ ವ್ಯಕ್ತಿಯನ್ನು ಇದೀಗ ದೆಹಲಿಯಲ್ಲಿ ನಡೆದ ಆಟೋ ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಮತ್ತೆ ಪೊಲೀಸರು ಬಂಧಿಸಿದ್ದಾರೆ.

2012 ರಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಮೂವರು ಆರೋಪಿಗಳು ಗುರಿಯಾಗಿದ್ದರು. ಆದರೆ ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಭಾಗ್ಯ ದೊರೆತಿತ್ತು. ಇದದ ಬಳಿಕ ಜನವರಿ 26 ರಂದು ದ್ವಾರಕಾ ಸೆಕ್ಟರ್ -13 ರಲ್ಲಿ ದರೋಡೆ ಮಾಡಲು ಪ್ರಯತ್ನಿಸಿ ನಂತರ ಆರೋಪಿ ಮತ್ತು ಅವನ ಸಹಚರರು ಆಟೋ ಚಾಲಕನನ್ನು ಇರಿದು ಬರ್ಬರವಾಗಿ ಕೊಂದರು.

ಈ ಪ್ರಕರಣದ ತನಿಖೆಗಿಳಿದ ಪೊಲೀಸರು ಆ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ ನಂತರ ಪೊಲೀಸರು ಮೊದಲು ಆರೋಪಿಯ ಸಹಚರ ಪವನ್‌ನನ್ನು ಬಂಧಿಸಿದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಮುಖ್ಯ ಆರೋಪಿ ವಿನೋದ್‌ ಎನ್ನುವವನ ಹೆಸರು ಕೇಳಿಬಂದಿದೆ. ಈ ವೇಳೆ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವಿನೋದ್ ಆರೋಪಿ ಎಂಬುದು ತನಗೆ ಗೊತ್ತಿರಲಿಲ್ಲ ಎಂದು ಪವನ್ ಹೇಳಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಬಳಿಕ ಮುಖ್ಯ ಆರೋಪಿ ವಿನೋದ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : Bank fraud case: ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಹಣ ವಂಚನೆ: ಪ್ರಕರಣ ದಾಖಲು

ಇದನ್ನೂ ಓದಿ : Student rape and murder: ವಿದ್ಯಾರ್ಥಿನಿ ಮೇಲೆ ಕಾಲೇಜು ಪ್ರಾಂಶುಪಾಲನಿಂದ ಅತ್ಯಾಚಾರ, ಕೊಲೆ ಆರೋಪ; ಪೋಷಕರಿಂದ ಆಕ್ರೋಶ

ಫೆಬ್ರವರಿ 2012 ರಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರವಾಗಿ ಕೊಂದ ಆರೋಪದ ಮೇಲೆ ಮೂವರು ಬಂಧಿಯಾಗಿದ್ದರು. ಆಕೆಯನ್ನು ಅಪಹರಿಸಿದ ಮೂರು ದಿನಗಳ ನಂತರ ಆಕೆಯ ವಿಕೃತ ದೇಹ ಪತ್ತೆಯಾಗಿತ್ತು. ವಿಚಾರಣಾ ನ್ಯಾಯಾಲಯವು 2014 ರಲ್ಲಿ ಅವರಿಗೆ ಮರಣದಂಡನೆ ವಿಧಿಸಿತ್ತು. ಕಳೆದ ನವೆಂಬರ್ 7 ರಂದು ವಿಚಾರಣಾ ನ್ಯಾಯಾಲಯವು ನೀಡಿದ ಮರಣದಂಡನೆಯನ್ನು ಎತ್ತಿಹಿಡಿಯುವ ದೆಹಲಿ ಹೈಕೋರ್ಟ್ನ ಆಗಸ್ಟ್ 26, 2014 ರ ಆದೇಶವನ್ನು ರದ್ದುಪಡಿಸುವ ಮೂಲಕ ಸುಪ್ರೀಂ ಕೋರ್ಟ್ ಮೂವರನ್ನು ಖುಲಾಸೆಗೊಳಿಸಿತು.

Auto driver murder case: Delhi auto driver murder case: Main accused arrested

Comments are closed.