PSI Job Cheating : 75 ಲಕ್ಷಕ್ಕೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ! ತಂದೆ, ಮಗಳಿಗೆ ವಂಚಿಸಿದ ಸ್ನೇಹಿತ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹಣಕೊಟ್ಟು ಸರಕಾರಿ ಹುದ್ದೆ ಪಡೆಯೋರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಹಲವರು ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ. 75 ಲಕ್ಷಕ್ಕೆ ಕೊಟ್ರೆ ಸಿಗುತ್ತೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ಹೇಳಿದ್ದ ಸ್ನೇಹಿತನೋರ್ವ ತಂದೆ, ಮಗಳಿಗೆ ಬರೋಬ್ಬರಿ 18 ಲಕ್ಷ ರೂಪಾಯಿ ವಂಚನೆ ನಡೆಸಿರುವ ಘಟೆನೆ ಬೆಂಗಳೂರಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಉರ್ದಿಗೆರೆ ನಿವಾಸಿಯಾಗಿರುವ ಪುಟ್ಟರಾಜು ಅವರ ಮಗಳಿಗೆ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕು ಅನ್ನೋ ಆಸೆ. ಅದೇ ಕಾರಣಕ್ಕೆ ಆಕೆ ಸಿದ್ದತೆಯನ್ನೂ ಮಾಡಿಕೊಂಡು ಸಬ್‌ಇನ್ಸ್ಪೆಕ್ಟರ್‌ ಹುದ್ದೆಗೆ ಪರೀಕ್ಷೆಯನ್ನೂ ಬರೆದಿದ್ದಾಳೆ. ಇನ್ನೇನು ಪರೀಕ್ಷೆಯ ಫಲಿತಾಂಶ ಬರುತ್ತೆ ಅನ್ನೋ ಹೊತ್ತಲ್ಲೇ ಪುಟ್ಟರಾಜು ಅವರ ಸ್ನೇಹಿತನಾಗಿರುವ ಯಶವಂತಪುರದ ನಿವಾಸಿ ಕೃಷ್ಣಪ್ಪ ಕರೆ ಮಾಡಿದ್ದ. ಮನೆಯ ವಿಚಾರ ಮಾತನಾಡುವ ಹೊತ್ತಲ್ಲೇ ಮಗಳು ಸಬ್‌ಇನ್ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಿರೋ ವಿಚಾರವನ್ನೂ ತಿಳಿಸಿದ್ದಾರೆ.

ಕೂಡಲೇ ಕೃಷ್ಣಪ್ಪ ತನ್ನ ಸ್ನೇಹಿತ ಶ್ರೀನಿವಾಸ ಎಂಬವರು ಹಣ ಕೊಟ್ರೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ತಿಳಿಸಿದ್ದರು. ನೀವು ಹಣ ಎಡ್ಜಸ್ಟ್‌ ಮಾಡೋದಾದ್ರೆ ಮಾತನಾಡಿಸ್ತೇನೆ ಅಂತಾ ಹೇಳಿದ್ದಾನೆ. ಸ್ನೇಹಿತ ಹೇಳಿದ ಮಾತನ್ನು ನಂಬಿದ್ದ ಪುಟ್ಟರಾಜು ಹಣಕೊಟ್ಟು ಕೆಲಸ ಮಾಡಿಸಿಕೊಳ್ಳುವುದಕ್ಕೆ ರೆಡಿಯಾಗಿದ್ದಾರೆ. ಐಡಿಸಿ ಹೋಟೆಲ್‌ನಲ್ಲಿ ಪುಟ್ಟರಾಜು ಅವರನ್ನು ಕರೆದೊಯ್ದ ಕೃಷ್ಣಪ್ಪ ಶ್ರೀನಿವಾಸ ಎಂಬಾತನನ್ನು ಪರಿಚಯಿಸಿದ್ದ. ಈ ವೇಳೆಯಲ್ಲಿ ಶ್ರೀನಿವಾಸ 75 ಲಕ್ಷ ಕೊಟ್ರೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ದೊಡ್ಡವರು ಹೇಳಿದ್ದಾರೆ ಅಂತಾ ತಿಳಿಸಿದ್ದಾನೆ.

ಆದರೆ ಪುಟ್ಟರಾಜು ತನ್ನ ಬಳಿಯಲ್ಲಿ ಅಷ್ಟೊಂದು ಹಣವಿಲ್ಲ. ಹೀಗಾಗಿ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಅಂತಾ ಕೇಳಿಕೊಂಡಿದ್ದಾರೆ. ಕೊನೆಗೆ ಸಬ್‌ಇನ್ಸ್ಪೆಕ್ಟರ್‌ ಪೋಸ್ಟ್‌ ೫೫ ಲಕ್ಷಕ್ಕೆ ಡೀಲ್‌ ಕುದುರಿಸಿದ್ದರು. ಆದ್ರೆ ಅಷ್ಟೂ ಹಣವನ್ನೂ ಒಮ್ಮೆಲೆ ಕೊಡಬೇಕು ಅಂತಾ ಶ್ರೀನಿವಾಸ ಡಿಮ್ಯಾಂಡ್‌ ಮಾಡಿದ್ದ, ಆದ್ರೆ ಹಣವಿಲ್ಲ ಅಂದಾಗ 20 ಲಕ್ಷ ರೂಪಾಯಿಯನ್ನು ಅಡ್ವಾನ್ಸ್‌ ಆಗಿ ಕೊಡಬೇಕು. ಉಳಿದ ಹಣವನ್ನು ಕೆಲಸವಾದ ಕೂಡಲೇ ಕೊಡಬೇಕು ಅಂತಾನೂ ತಿಳಿಸಿದ್ದ. ಹೀಗಾಗಿಯೇ ಸುಮಾರು 18 ಲಕ್ಷ ರೂಪಾಯಿ ಹಣವನ್ನು ಹೊಂದಿಸಿಕೊಂಡ ಪುಟ್ಟರಾಜು ಕೃಷ್ಣಪ್ಪ ಜೊತೆ ತೆರಳಿ ಶ್ರೀನಿವಾಸನಿಗೆ ಕೊಟ್ಟು ಬಂದಿದ್ದರು.

ಈ ವೇಳೆಯಲ್ಲಿ ನಿಮ್ಮ ಮಗಳಿಗೆ ಸಬ್‌ಇನ್ಸ್ಪೆಕ್ಟರ್‌ ಪೋಸ್ಟ್‌ ಕೊಡಿಸುತ್ತೇನೆ. ಸೆಲೆಕ್ಟ್‌ ಆದ ಮೇಲೆ ಉಳಿದ ಹಣ ಕೊಡುತ್ತೇವೆ ಅಂತಾ ಹೇಳಿ ಬಂದಿದ್ದರ ಪುಟ್ಟರಾಜು ಈ ವಿಚಾರವನ್ನು ತನ್ನ ಸ್ನೇಹಿತ ಸಿದ್ದರಾಮು ಎಂಬವರ ಜೊತೆ ಹಂಚಿಕೊಂಡಿದ್ದರು. ಸಿದ್ದರಾಮು ಅವರಿಗೆ ಕೃಷ್ಣಪ್ಪ ಕೂಡ ಪರಿಚಿತನೇ ಆಗಿದ್ದ. ಹೀಗಾಗಿ ನೀವು ಮೋಸ ಹೋಗಿದ್ದೀರಿ, ಕೃಷ್ಣಪ್ಪ ಯಾವುದೇ ಕೆಲಸ ಮಾಡಿಕೊಡೋದಿಲ್ಲ ಅಂತ ತಿಳಿಸಿದ್ದಾರೆ. ನಂತರದಲ್ಲಿ ಪುಟ್ಟರಾಜು ಅವರಿಗೆ ತಾನು ಮೋಸ ಹೋಗಿರುವ ವಿಚಾರ ಅರಿವಿಗೆ ಬಂದಿತ್ತು. ಇದೀಗ ಶ್ರೀನಿವಾಸ ಎಂಬವರ ವಿರುದ್ದ ಪುಟ್ಟರಾಜು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಸದಾಶಿವನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಉದ್ಯೋಗ ಕೊಡಿಸೋ ಹೆಸರಲ್ಲಿ ಮೋಸ ಹೋಗುವ ಪ್ರಕರಣ ನಡೆಯುತ್ತಲೇ ಇದ್ರೂ ಕೂಡ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಇದನ್ನೂ ಓದಿ : ಯುವತಿಯನ್ನು ನಗ್ನಗೊಳಿಸಿ ವಿಡಿಯೋ : ಹಣಕ್ಕೆ ಡಿಮ್ಯಾಂಡ್‌ ಇಟ್ಟ ಆರೋಪಿಗಳ ಬಂಧನ

ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ

( Sub Inspector post for 75 lakhs ! A friend who cheated on father, daughter )

Comments are closed.