GOOD NEWS : ಗೃಹಿಣಿಯರಿಗೆ ಗುಡ್‌ನ್ಯೂಸ್‌ : ಶೀಘ್ರವೇ ಇಳಿಕೆಯಾಗಲಿದೆ ಅಡುಗೆ ಎಣ್ಣೆಯ ದರ !

ನವದೆಹಲಿ : ಕೊರೊನಾದಿಂದ ಬೇಸತ್ತ ಜನರಿಗೆ ಬೆಲೆ ಏರಿಕೆಯ ಬಿಸಿ ಬಹುದೊಡ್ಡಬರೆ ಎಳೆದಿದೆ. ಆದರೆ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು , ದೇಶದಲ್ಲಿ ಖಾದ್ಯ ತೈಲಗಳ ಬೆಲೆ ವರ್ಷಾಂತ್ಯಕ್ಕೆ ಇಳಿಕೆಯಾಗಲಿವೆ ಎಂದು ಕೇಂದ್ರ ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ .

ಹಾಲಿ ಮಾನ್ಸೂನ್‌ನಲ್ಲಿ ಬೆಳೆಯುವ ಎಣ್ಣೆ ಕಾಳುಗಳು ವರ್ಷಾಂತ್ಯದ ಹೊತ್ತಿಗೆ ಮಾರುಕಟ್ಟೆಗೆ ಬರಲಿದ್ದು, ಜಾಗತಿಕ ಮಟ್ಟದಲ್ಲೂ ಖಾದ್ಯ ತೈಲದ ಬೆಲೆ ಕಡಿಮೆಯಾಗುವುದರಿಂದ ದೇಶದಲ್ಲಿ ಲಭ್ಯವಾಗುವ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುತ್ತದೆ. ಆದರೆ, ಬೆಲೆಗಳು ಏಕಾಏಕಿ ಇಳಿಮುಖವಾಗುವುದಿಲ್ಲ. ನಿಧಾನವಾಗಿ ಇಳಿಕೆಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Good News : ಬಿಪಿ, ಶುಗರ್, ಕ್ಯಾನ್ಸರ್ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಭಾರತಕ್ಕೆ ಖಾದ್ಯ ತೈಲ ಆಮದು ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ದೇಶದಲ್ಲಿ ಖಾದ್ಯ ತೈಲ ದರ ಏರಿಕೆ ಕಂಡಿದೆ. ತಾಳೆ ಎಣ್ಣೆ ದರ 139 ರೂಪಾಯಿವರೆಗೂ ಏರಿಕೆಯಾಗಿದೆ. ಕಳೆದೊಂದು ವರ್ಷದಿಂದ ಜಾಗತಿಕ ಮಟ್ಟದಲ್ಲಿ ಏರಿದ ಬೆಲೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಖಾದ್ಯ ತೈಲದ ಬೆಲೆ ಶೇ. 64ರಷ್ಟು ಹೆಚ್ಚಾಗಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆರ್ಥಿಕ ಸಲಹೆಗಾರರು ಸೆಪ್ಟೆಂಬರ್ 8, 2021 ರಂದು ಬರೆದ ಪತ್ರದಲ್ಲಿ ಈ ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆಡಳಿತಗಾರರಿಗೆ ಸೂಚಿಸಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರದ ಹೊರತಾಗಿಯೂ, ಅವುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಇದು ಸ್ಟಾಕಿಸ್ಟ್ ಗಳ ಸಂಗ್ರಹಣೆಯ ಕಾರಣವಾಗಿರಬಹುದು.

ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್‌ ಕೊಟ್ಟ ಗ್ಯಾಸ್‌ ದರ : 15 ದಿನದಲ್ಲಿ 50 ರೂಪಾಯಿ ಹೆಚ್ಚಳ

ಅಲ್ಲದೆ ವ್ಯಾಪಾರಿಗಳು ಪ್ರತಿ ವಾರ ಸ್ಟಾಕ್ ಅನ್ನು ವರದಿ ಮಾಡಬೇಕಾಗುತ್ತದೆ. ಮಾಹಿತಿ ಮರೆಮಾಚುವುದು ವ್ಯಾಪಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ.ಅಗತ್ಯ ವಸ್ತುಗಳ ಕಾಯ್ದೆಯಡಿ ಕ್ರಮ ನಡೆಯಲಿದೆ. ಆಮದು ಸುಂಕವನ್ನು ಕಡಿಮೆ ಮಾಡಿದರೂ ಖಾದ್ಯ ತೈಲಗಳ ಬೆಲೆಗಳು ಏರಿಕೆಯಾದವು.

(The price of cooking oil will drop soon!)

Comments are closed.