ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ಪ್ರಿಡ್ಜ್, ವಾಶಿಂಗ್ ಮೆಷಿನ್ ಕದ್ದೊಯ್ದ ಕಾಮುಕರು

Bangaluru Gang Rape : ಬೆಂಗಳೂರು : ತನ್ನ ಸ್ನೇಹಿತನ ಮನೆಗೆ ತೆರಳಿದ್ದ ಮಹಿಳೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಬೆಂಗಳೂರಿನ ದೊಡ್ಡನಾಗಮಂಗಲದ ಸಾಯಿ ಲೇಔಟ್ನಲ್ಲಿ ನಡೆದಿದೆ. ಮಹಿಳೆ ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಯಿ ಲೇಔಟ್ ನಲ್ಲಿದ್ದ ಸ್ನೇಹಿತನ ಮನೆಯಲ್ಲಿ ಮಹಿಳೆ ಇದ್ದ ಸಂದರ್ಭದಲ್ಲಿಯೇ ನಾಲ್ವರು ಮನಗೆ ಎಂಟ್ರಿ ಕೊಟ್ಟಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರ ಎಸಗಿದ ನಂತರದಲ್ಲಿ ಕಾಮುಕರು ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದ್ದಾರೆ. ಮಹಿಳೆಯ ಮೊಬೈಲ್ ಕಿತ್ತುಕೊಂಡು ಆಕೆಯ ಬಳಿಯಲ್ಲಿದ್ದ ಹಣವನ್ನು ಕಿತ್ತುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಮನೆಯಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಶಾಸಕ ವಿ. ಸುಬ್ಬಾರೆಡ್ಡಿಗೆ ಇಡಿ ಶಾಕ್ : ಏಕಕಾಲ 5 ಕಡೆ ದಾಳಿ
ಕೊನೆಗೆ ಮನೆಯಲ್ಲಿದ್ದ ಪ್ರಿಡ್ಜ್, ವಾಶಿಂಗ್ ಮೆಷಿನ್ ಸೇರಿ ಇತರ ಪಿಠೋಪಕರಣ ಸೇರಿ ಇತರ ವಸ್ತುಗಳನ್ನ ಹೊತ್ತೊಯ್ದಿದ್ದಾರೆ. ಕಾಮುಕರ ಕೈಚಳಕ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ನಾಲ್ವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಠೇ ಸತ್ಯಾಸತ್ಯತೆ ಹೊರಬರಲಿದೆ.
ಇದನ್ನೂ ಓದಿ : ಎಲ್ಐಸಿ ಕನ್ಯಾದಾನ ಯೋಜನೆ : 121 ರೂ. ಹೂಡಿಕೆ ಮಗಳ ಭವಿಷ್ಯ, ಮದುವೆಗೆ ಪಡೆಯಿರಿ 27 ಲಕ್ಷ ರೂ.
Bangaluru Gang Rape Theft Fridge and Washing Machine in Kannada News



