Jacqueline Fernandez : ರಕ್ಕಮ್ಮ ಖ್ಯಾತಿಯ ಜಾಕ್ವೆಲಿನ್​ಗೆ ಮತ್ತಷ್ಟು ಸಂಕಷ್ಟ : ಸುಕೇಶ್​ ವಂಚಕನೆಂದು ತಿಳಿದ ಬಳಿಕವೂ ನಟಿ ಹಣ ಪಡೆದಿದ್ದರು ಎಂದ ಇಡಿ

Jacqueline Fernandez :ಬಾಲಿವುಡ್ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿಯನ್ನು ಸಲ್ಲಿಸಿದ್ದು ಇದರಲ್ಲಿ ವಂಚಕ ಸುಕೇಶ್​ ಚಂದ್ರಶೇಖರ್​​ ಭೂತಕಾಲವನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿ ಆತನೊಂದಿಗೆ ಹಣಕಾಸಿನ ವ್ಯವಹಾರವನ್ನು ಮುಂದುವರಿಸಿದ್ದರು. ಕೇವಲ ಜಾಕ್ವೆಲಿನ್​ ಮಾತ್ರವಲ್ಲದೇ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ ಸುಕೇಶ್​ರಿಂದ ಆರ್ಥಿಕ ಲಾಭವನ್ನು ಪಡೆದಿದ್ದಾರೆ. ಹಣದ ಮೋಹದಿಂದ ಸುಕೇಶ್​​ರ ಎಲ್ಲಾ ಕ್ರಿಮಿನಲ್​ ಹಿಸ್ಟರಿಯನ್ನು ಜಾಕ್ವೆಲಿನ್​ ಕಡೆಗಣಿಸಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ.


ಇದಲ್ಲದೇ ಆರೋಪಿ ಜಾಕ್ವೆಲಿನ್​ ಫರ್ನಾಂಡಿಸ್​ ತನಗೆ ಮತ್ತು ತನ್ನ ಸಂಬಂಧಿಗಳಿಗೆ ಉಡುಗೊರೆಗಳನ್ನು ಸ್ವೀಕರಿಸುವ ಬಗ್ಗೆ ನಿರಂತರವಾಗಿ ತನ್ನ ನಿಲುವುಗಳನ್ನು ಬದಲಾಯಿಸುತ್ತಾ ಬಂದಿದ್ದಾರೆ. ಸಾಕ್ಷ್ಯಾಧಾರಗಳನ್ನು ಪ್ರಸ್ತುತ ಪಡಿಸಿದ ನಂತರವೇ ಅವರು ತನ್ನ ವಿವರವನ್ನು ಹಂಚಿಕೊಂಡಿದ್ದಾರೆ. ಆದರೆ ಸುಕೇಶ್​ ತನಗಾಗಿ ಖರೀದಿಸಿದ್ದ ಕೆಲವು ಆಸ್ತಿಗಳನ್ನು ಆಕೆ ನಿರಾಕರಿಸಿದ್ದಳು ಎಂಬುದನ್ನೂ ಸಹ ಇಡಿ ಹೇಳಿದೆ.


ಇಡಿ ಸಲ್ಲಿಸಿರುವ ಜಾರ್ಜ್​ಶೀಟ್​ನಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ನೇರವಾಗಿ ಅಥವಾ ಪರೋಕ್ಷವಾಗಿ ಅಪರಾಧಿಯ ಆದಾಯದಲ್ಲಿ ಪಾಲನ್ನು ಹೊಂದಿದ್ದಾರೆ. ಅಪರಾಧದ ಮೂಲಕ ಸುಕೇಶ್​ ಗಳಿಸಿದ್ದ ಭಾಗಶಃ ಆದಾಯವನ್ನು ಸ್ವಾದೀನ ಪಡಿಸುಕೊಂಡಿದ್ದಾರೆ. ಅಲ್ಲದೇ ಇದೇ ವಂಚನೆಯ ಹಣದಿಂದ ಭಾರತ ಹಾಗೂ ವಿದೇಶದ ಉಡುಗೊರೆಗಳನ್ನು ತನ್ನ ಹಾಗೂ ತನ್ನ ಕುಟುಂಬಸ್ಥರಿಗೆ ಪಡೆದುಕೊಂಡಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ತಿಳಿದು ಬಂದಿದೆ.


ಪಿಎಮ್‌ಎಲ್‌ಎ, 2002 ರ ಸೆಕ್ಷನ್ 3 ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಇಲ್ಲಿ ಮೊದಲು ಚರ್ಚಿಸಿದಂತೆ ಪಿಒಸಿಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಆ ಮೂಲಕ ಅಪರಾಧದ ಆದಾಯವನ್ನು ಉದ್ದೇಶಪೂರ್ವಕವಾಗಿ ಬಳಸುವುದಕ್ಕಾಗಿ ಮತ್ತು ಹೊಂದಿದ್ದಕ್ಕಾಗಿ ಪಿಎಂಎಲ್‌ಎಯ ಸೆಕ್ಷನ್ 3 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಮನಿ ಲಾಂಡರಿಂಗ್ ಅಪರಾಧವನ್ನು ಮಾಡಿದ್ದಾರೆ ಎಂದು ಇಡಿ ಹೇಳಿದೆ.

ಇದನ್ನು ಓದಿ : Zomato : ಹೈದರಾಬಾದ್​ನಿಂದ ಬಿರಿಯಾನಿ, ಮೈಸೂರಿನಿಂದ ಮೈಸೂರುಪಾಕ್​ ತಿನ್ನಬೇಕೆಂದು ಆಸೆಯಾಗ್ತಿದ್ಯಾ :ಜೊಮ್ಯಾಟೋದಲ್ಲಿದೆ ಪರಿಹಾರ

ಇದನ್ನೂ ಓದಿ : jothe jotheyali serial : ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ಮತ್ತೊಂದು ಟ್ವಿಸ್ಟ್​ : ಆರ್ಯವರ್ಧನ್​ ಪಾತ್ರಕ್ಕೆ ಬಿತ್ತು ಕತ್ತರಿ

Jacqueline Fernandez ‘consciously’ overlooked Sukesh Chandrasekhar’s criminal record, says ED

Comments are closed.