Bengaluru road collapse : ಬೆಂಗಳೂರಿನಲ್ಲಿ ಮತ್ತೊಂದು ಅವಾಂತರ: ರಸ್ತೆ ಕುಸಿದು ಬಿದ್ದು ಯುವಕ ಗಂಭೀರ ಗಾಯ

ಬೆಂಗಳೂರು: (Bengaluru road collapse) ಮೆಟ್ರೋ ಪಿಲ್ಲರ್‌ ಕುಸಿದು ಬಿದ್ದು ತಾಯಿ ಮಗು ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಬೈಕ್‌ ಸವಾರ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ ರಸ್ತೆ ಕುಸಿದು ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬ್ರಿಗ್ರೇಡ್‌ ರಸ್ತೆಯಲ್ಲಿ ನಡೆದಿದೆ.

ಬ್ರಿಗ್ರೇಡ್‌ ರಸ್ತೆಯಲ್ಲಿ ಯುವಕನೋರ್ವ ಬೈಕ್‌ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಏಕಾಏಕಿ ಕುಸಿದು (Bengaluru road collapse) ಬಿದ್ದಿದ್ದು, ಪರಿಣಾಮ ಬೈಕ್‌ ಸವಾರ ಗುಂಡಿಯೊಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ ಮಗು ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಅದೇ ಸ್ಥಳದಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಈ ಘಟನೆಯೂ ಕೂಡ ನಡೆದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗಿದ್ದು, ಬ್ಯಾರಿಕೇಡ್‌ ಗಳನ್ನು ಅಳವಡಿಸಿ ರಸ್ತೆಯನ್ನು ಬಂದ್‌ ಮಾಡಲಾಗಿದೆ.

ಇದನ್ನೂ ಓದಿ : Mother got suicide with childrens: 3 ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಇದನ್ನೂ ಓದಿ : Mangaluru hindu worker death: ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಶವ ಪತ್ತೆ: ಸಾವಿನ ಸುತ್ತ ಹಲವು ಶಂಕೆ

ಇದನ್ನೂ ಓದಿ : ಕೋಟ : ಇಸ್ಪೀಟು ಅಡ್ಡದ ಮೇಲೆ ದಾಳಿ ಪೊಲೀಸರ ದಾಳಿ : 4 ಮಂದಿ ಅರೆಸ್ಟ್

ಇದನ್ನೂ ಓದಿ : LLB student suicide: ಪ್ರಿನ್ಸಿಪಾಲ್‌ ಬುದ್ದಿ ಹೇಳಿದ್ದಕ್ಕೆ ಮನನೊಂದು ಎಲ್.ಎಲ್‌.ಬಿ ವಿದ್ಯಾರ್ಥಿ ಅತ್ಮಹತ್ಯೆ

ತೇಜಸ್ವಿನಿ ಅವರ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಅವರ ಪತಿ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದ್ದರು. ಈ ಸಂಬಂಧ ನಾಲ್ಕು ಮಂದಿ ಇಂಜಿನಿಯರ್‌ ಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ತಾಯಿ ಹಾಗೂ ಮಗುವಿನ ಸಾವಿಗೆ ಸಿಎಂ ಬೊಮ್ಮಾಯಿ ಅವರು ಪರಿಹಾರ ಧನವನ್ನು ಕೂಡ ಘೋಷಣೆ ಮಾಡಿದ್ದಾರೆ.

Another accident in Bengaluru: A young man was seriously injured in a road collapse

Comments are closed.