Boy fall into borewell: 4 ದಿನಗಳ ಕಾಲ ಜೀವನ್ಮರಣ ಹೋರಾಟ: ಕೊನೆಗೂ ಬದುಕಿ ಬರಲಿಲ್ಲ ಬೋರ್‌ ವೆಲ್‌ ಗೆ ಬಿದ್ದ 8 ವರ್ಷದ ಬಾಲಕ

ಭೋಪಾಲ್:‌ (Boy fall into borewell) ನಾಲ್ಕು ದಿನಗಳ ಹಿಂದೆ ಬೋರ್‌ ವೆಲ್‌ ಗೆ ಬಿದ್ದ 8 ವರ್ಷದ ಬಾಲಕನನ್ನು ಸತತ 80 ಗಂಟೆಗಳ ರಕ್ಷಣಾ ಕಾರ್ಯಚರಣೆಯ ನಂತರ ಹೊರತೆಗೆದರೂ ಆತ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಬೇತುಲ್‌ ನಲ್ಲಿ ನಡೆದಿದೆ. ತನ್ಮಯ್‌ ಸಾಹು(8 ವರ್ಷ) ಮೃತ ಬಾಲಕ.

ನಾನಕ್ ಎಂಬವರ ಜಮೀನಿನಲ್ಲಿ ಡಿಸೆಂಬರ್ 6ರಂದು ಬಾಲಕ ತನ್ಮಯ್ ಆಟವಾಡುತ್ತಿದ್ದ. ಈ ವೇಳೆ ಅಲ್ಲೇ ಇದ್ದ 55 ಅಡಿ ಆಳದ ಕೊಳವೆಬಾವಿಗೆ ತನ್ಮಯ್ ಬಿದ್ದಿದ್ದಾನೆ (Boy fall into borewell). ಕೂಡಲೇ ವಿಪತ್ತು ನಿರ್ವಹಣಾ ಪಡೆ ಅಥವಾ ಎಸ್‌ಡಿಆರ್‌ಎಫ್‌ ತಂಡವನ್ನು ಸ್ಥಳಕ್ಕೆ ಕರೆಸಿ ಬಾಲಕನ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಸ್ಥಳಕ್ಕೆ ಮಣ್ಣು ಅಗೆಯುವ ಯಂತ್ರಗಳಿಂದ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಕೊಳವೆಬಾವಿಯೊಳಗಿದ್ದ ಬಾಲಕಿಗೆ ಆಮ್ಲಜನಕ ನೀಡಲು ವ್ಯವಸ್ಥೆ ಕೂಡ ಮಾಡಲಾಗಿತ್ತು. ನಿರಂತರ 80 ಗಂಟೆಗಳ ಕಾರ್ಯಾಚರಣೆ ನಡೆಸಿದ ನಂತರ ಬಾಲಕನ್ನನ್ನು ಕೊಳವೆಬಾವಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ನಾನಕ್‌ ಚೌಹಾಣ್‌ ಎಂಬುವರು ತಮ್ಮ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆ ಬೋರ್​ವೆಲ್ ಅನ್ನು ಕೊರೆಸಿದ್ದರು. ಆದರೆ ಈ ಕೊಳೆವೆಬಾವಿ ಬಳಿ ಆಟವಾಡುತ್ತಿದ್ದ ಬಾಲಕ ತನ್ಮಯ್ ಅದರೊಳಗೆ ಬಿದ್ದಿದ್ದಾನೆ. ಕೊರೆದಿದ್ದ ಬೋರ್​ವೆಲ್​ನಲ್ಲಿ ನೀರು ಬಾರದ ಹಿನ್ನೆಲೆ ಅದಕ್ಕೆ ಮುಚ್ಚಳ ಹಾಕಲಾಗಿತ್ತು. ಬಾಲಕ ಮುಚ್ಚಳವನ್ನು ಹೇಗೆ ತೆಗೆದಿದ್ದಾನೆ ಎಂದು ತನಗೆ ಗೊತ್ತಿಲ್ಲ ಎಂದು ನಾನಕ್ ಚೌಹಾಣ್ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Shraddha Father pressmeet: ಪೊಲೀಸರು ತನಿಖೆಯಲ್ಲಿ ನಿರಾಸಕ್ತಿ ತೋರಿದ್ದಕ್ಕೆ ಮಗಳು ಕೊಲೆಯಾದಳು: ಶೃದ್ಧಾ ವಾಳ್ಕರ್ ತಂದೆ ಗಂಭೀರ ಆರೋಪ

ಇದನ್ನೂ ಓದಿ : Unique 5 Rupee Note: 5 ರೂ. ಮುಖಬೆಲೆಯ ನೋಟು ನಿಮ್ಮ ಬಳಿ ಇದ್ರೆ, ರಾತ್ರೋ ರಾತ್ರಿ ನೀವು ಆಗ್ತೀರಿ ಲಕ್ಷಾಧಿಪತಿ !

ತನ್ಮಯ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸಿವಿಲ್ ಸರ್ಜನ್ ಅಶೋಕ್ ಬಾರಂಗ ಅವರ ಸಮ್ಮುಖದಲ್ಲಿ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸುತ್ತಿದೆ. ಬೋರ್‌ವೆಲ್‌ನಿಂದ ಹೊರತೆಗೆದಾಗ ಮಗನ ಮುಖವನ್ನೂ ತೋರಿಸಲಿಲ್ಲ ಎಂದು ತನ್ಮಯ್ ಪೋಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

(Boy fall into borewell) Four days ago, an 8-year-old boy who fell into a borewell died in Betul, Madhya Pradesh, despite being pulled out after 80 hours of continuous rescue operations. Tanmay Sahu (8 years) is the dead boy.

Comments are closed.