Nandini Product Price Hike:ಕೆಎಂಎಫ್ ನಿಂದ ಗ್ರಾಹಕರಿಗೆ ಬರೆ : ನಂದಿ‌ನಿ ತುಪ್ಪ, ಐಸ್ ಕ್ರೀಂ, ಪನ್ನೀರು ಬೆಲೆ ಏರಿಕೆ

ಬೆಂಗಳೂರು : (Nandini Product Price Hike)ನಂದಿನಿ ಬ್ರಾಂಡ್ ನ ಅಡಿಯಲ್ಲಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ( KMF) ನಂದಿನಿ ಹಾಲಿನಿಂದ ತಯಾರಾಗುವ ಎಲ್ಲಾ ಉತ್ಪನ್ನಗಳ ಬೆಲೆ ಏರಿಕೆ ಮಾಡಿ ಸಾರ್ವಜನಿಕರಿಗೆ ಶಾಕ್ ಕೂಟ್ಟಿದೆ. ಸದಿಲ್ಲದೇ ಕೆ ಎಂ ಎಫ್ ನಂದಿನಿ ಹಾಲಿನಿಂದ ತಯಾರಾಗುವ ಸಿಹಿ ತಿನಿಸು ಹಾಗೂ ತುಪ್ಪದ ದರವನ್ನು ಏರಿಕೆ ಮಾಡಿದೆ. ಪ್ರತಿ ಉತ್ಪನ್ನದ ಮೇಲೆ ಶೇ 5 ರಿಂದ ಶೇ 15 ರಷ್ಟು ದರ ಏರಿಕೆ ಆಗಿದೆ.

(Nandini Product Price Hike)ನವೆಂಬರ್ 24 ರಂದು ಕೆ ಎಂ ಎಫ್ ನಂದಿನಿ ಹಾಲು ಮೊಸರು ದರದ ಮೇಲೆ 2 ರೂಪಾಯಿ ಎರಿಸಿತ್ತು. ದರ ಏರಿಕೆಯ ಹಣವನ್ನು ರೈತರಿಗೆ ನೀಡುವುದಾಗಿ ಕೆ ಎಂ ಎಫ್ ತಿಳಿಸಿತ್ತು. ಆದ್ರೆ, ಹಾಲು ಮೊಸರು ದರ ಏರಿಕೆಯ ಮೊದಲೇ ಹಂತ ಹಂತವಾಗಿ ಉತ್ಪನ್ನಗಳ ಬೆಲೆಯನ್ನ ಕೆ ಎಂ ಎಫ್ ಏರಿಕೆ ಮಾಡಿದೆ.

ಉತ್ಪನ್ನಗಳ ದರ ಎಷ್ಟಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳಿ

ತುಪ್ಪ 1 ಕೆ. ಜಿ 520 ರಿಂದ 610 ರೂ ಗೆ ಏರಿಕೆ

ಪೇಡ 250 ಗ್ರಾಂ 105 ರಿಂದ 140 ರೂಪಾಯಿ ಏರಿಕೆ

ಮೈಸೂರ್ ಪಾಕ್ 250 ಗ್ರಾಂ 115 ರಿಂದ 160 ರೂಪಾಯಿಗೆ ಏರಿಕೆ.

ಕೋವಾ 200 ಗ್ರಾಂ 90 ರಿಂದ 100 ರೂಪಾಯಿ ಏರಿಕೆ

ಜಾಮೂನು ಅರ್ಧ ಕೆಜಿ ಟಿನ್ 105 ರಿಂದ 135 ರೂಪಾಯಿಗೆ ಏರಿಕೆ

ಪ್ಲೇವರ್ಡ್ ಮಿಲ್ಕ್ 20 ರಿಂದ 25 ರೂಪಾಯಿಗೆ ಏರಿಕೆ

ನಂದಿನಿ ಐಸ್‌ಕ್ರೀಂನ ಪ್ರತಿ ಪ್ಯಾಕೇಟ್ ಮೇಲೂ 5 ರೂಪಾಯಿಗೆ ಏರಿಕೆ

ಪನ್ನೀರು ಪ್ರತಿ ಕೆಜಿಗೆ 20 ರೂಪಾಯಿ ಏರಿಕೆ

ಇದನ್ನೂ ಓದಿ:Unique 5 Rupee Note: 5 ರೂ. ಮುಖಬೆಲೆಯ ನೋಟು ನಿಮ್ಮ ಬಳಿ ಇದ್ರೆ, ರಾತ್ರೋ ರಾತ್ರಿ ನೀವು ಆಗ್ತೀರಿ ಲಕ್ಷಾಧಿಪತಿ !

ಇದನ್ನೂ ಓದಿ:IT Sector Share Crash : ಐಟಿ ವಲಯದ ಷೇರುಗಳಲ್ಲಿ ಭಾರಿ ಕುಸಿತ; ಹೆಚ್ಚಿದ ಷೇರುಪೇಟೆ ಆತಂಕ

ಇದನ್ನೂ ಓದಿ:ಕಾರ್ಕಳದಲ್ಲಿ ಕಾರು ಬಸ್ ಭೀಕರ ಅಪಘಾತ : ಮಗು ಸೇರಿ ಮೂವರು ಸಾವು

ಮೊಸರು ಮತ್ತು ಹಾಲಿನ ದರ ಹೆಚ್ಚಳ ಜೊತೆಗೆ ಇದರ ಉತ್ಪನ್ನದ ದರ ಹೆಚ್ಚಿಸಿ ಕೆ ಎಂ ಎಫ್ ಗ್ರಾಹಕರಿಗೆ ಕೊಂಚ ಶಾಕ್ ಕೊಟ್ಟರು, ಸದ್ಯ ಹೋಟೆಲ್ ಗಳ ಟೀ, ಕಾಫೀ, ತಿಂಡಿ ದರ ಹೆಚ್ಚಳ ಮಾಡಿಲ್ಲದಿರುವುದು ಸಮಾಧಾನದ ಸಂಗತಿ.

Nandini Product Price Hike KMF hike the price of Nandini ghee, ice cream, cheese price

Comments are closed.